ಕಜಕಿಸ್ತಾನದಲ್ಲಿ ವಿಮಾನ ಪತನ: ಹಲವು ಪ್ರಯಾಣಿಕರು ಸಾವು, 12 ಮಂದಿ ಸುರಕ್ಷಿತ

ಮಾಸ್ಕೋ, ಡಿಸೆಂಬರ್ 25: ಅಜರ್‌ಬೈಜಾನ್‌ನಿಂದ ರಷ್ಯಾಕ್ಕೆ ಸಂಚಾರ ನಡೆಸುತ್ತಿದ್ದ 72 ಜನರಿದ್ದ ವಿಮಾನ ಕಜಕಿಸ್ತಾನ ಬಳಿ ಪತನಗೊಂಡಿದೆ. ಈ ದುರ್ಘಟನೆಯಲ್ಲಿ ಹಲವು ಪ್ರಯಾಣಿಕರು ಸಾವನ್ನಪ್ಪಿದ್ದಾರೆ. 12 ಪ್ರಯಾಣಿಕರು ಬದುಕುಳಿದಿದ್ದಾರೆ. ವಿಮಾನ ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡು ದಟ್ಟವಾದ ಹೊಗೆ ಆವರಿಸಿತು. ವಿಮಾನ ಪತನಗೊಳ್ಳುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬುಧವಾರ ವಿಮಾನ ಸಂಖ್ಯೆ ಜೆ2-8243 ವಿಮಾನ ಕಜಕಿಸ್ತಾನದ ಅಕ್ಟಾ ನಗರದ ಬಳಿ ಪತನಗೊಂಡಿದೆ. 67 ಪ್ರಯಾಣಿಕರು ಮತ್ತು 5 ಸಿಬ್ಬಂದಿಗಳು ವಿಮಾನದಲ್ಲಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, 12 ಪ್ರಯಾಣಿಕರು ಬದುಕುಳಿದಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Azerbaijan Airlines Plane Crashed Near Aktau Kazakhstan

ಈ ವಿಮಾನವನ್ನು ಅಜರ್‌ಬೈಜಾನ್ ಏರ್‌ಲೈನ್ಸ್ ನಿರ್ವಹಣೆ ಮಾಡುತ್ತಿತ್ತು. ಈ ವಿಮಾನ ಅಜರ್‌ಬೈಜಾನ್‌ನ ಬಾಕುವಿನಿಂದ ರಷ್ಯಾದ ಗ್ರೋಜ್ನಿಗೆ ಸಂಚಾರವನ್ನು ಆರಂಭಿಸಿತ್ತು. ಅಕ್ಟಾ ನಗರದಿಂದ ಸುಮಾರು 3 ಕಿ. ಮೀ. ದೂರದಲ್ಲಿದ್ದಾಗಲೇ ತಾಂತ್ರಿಕ ದೋಷ ಕಾಣಿಸಿಕೊಂಡಾಗ, ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಲು ಸಹ ಪ್ರಯತ್ನ ನಡೆಸಲಾಯಿತು.

ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಲು ವಿಫಲವಾಯಿತು. ನೆಲಕ್ಕೆ ಅಪ್ಪಳಿಸುತ್ತಿದ್ದಂತೆಯೇ ಬೆಂಕಿ ಹೊತ್ತಿಕೊಂಡು ಸ್ಥಳದಲ್ಲಿ ದಟ್ಟವಾದ ಹೊಗೆ ಆವರಿಸಿತು. ತಕ್ಷಣ ಅಗ್ನಿಶಾಮಕ ದಳದ ಸಿಬ್ಭಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ಕೈಗೊಂಡರು. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಪ್ರಾರಂಭಿಸಲಾಯಿತು.

ಬುಧವಾರ ರಷ್ಯಾದ ಗ್ರೋಜ್ನಿಯಲ್ಲಿ ದಟ್ಟವಾದ ಮಂಜು ಕವಿದಿತ್ತು. ಆದ್ದರಿಂದ ವಿಮಾನ ಸಂಚಾರದ ಮಾರ್ಗವನ್ನು ಬದಲಾವಣೆ ಮಾಡಲಾಗಿತ್ತು. ಆದರೆ ಅಕ್ಟಾ ನಗರದ ಬಳಿಯೇ ವಿಮಾನ ಪತನಗೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಘಟನೆಯಲ್ಲಿ ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗಿದೆ ಎಂದು ಕಜಕಿಸ್ತಾನ ಸರ್ಕಾರ ತುರ್ತು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ವಿಮಾನ ಪತನಕ್ಕೆ ಕಾರಣವೇನು? ಎಂಬ ಮಾಹಿತಿ ಸದ್ಯಕ್ಕೆ ಲಭ್ಯವಿಲ್ಲ. ತಾಂತ್ರಿಕ ದೋಷದ ಹಿನ್ನಲೆಯಲ್ಲಿ ಪತನವಾಗಿದೆ ಎಂದು ಪ್ರಾಥಮಿಕವಾಗಿ ಅಂದಾಜಿಸಲಾಗಿದೆ. ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶ ನೀಡಲಾಗಿದೆ. ಕಜಕಿಸ್ತಾನದ ಸರ್ಕಾರ ಸಹ ಘಟನೆ ಕುರಿತು ತನಿಖೆಗೆ ಸಹಕಾರ ನೀಡಲಿದೆ ಎಂದು ಭರವಸೆ ನೀಡಿದೆ.

ಅಕ್ಟಾ ನಗರದ ಸಮೀಪ ತಾಂತ್ರಿಕ ದೋಷ ಕಾಣಿಸಿಕೊಂಡಾಗಲೇ ವಿಮಾನವನ್ನು ತುರ್ತಾಗಿ ಲ್ಯಾಂಡ್ ಮಾಡಲು ವಿಮಾನ ನಿಲ್ದಾಣದ ಸಮೀಪ ಮೂರು ಬಾರಿ ತರಲಾಯಿತು. ಹಲವು ಸುತ್ತಿನ ಹಾರಾಟದ ಬಳಿಕವೂ ಸುರಕ್ಷಿತ ಲ್ಯಾಂಡಿಂಗ್ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಲ್ಲಿ ನಾಪತ್ತೆಯಾದ 5 ಜನರನ್ನು ಸಂಜೆಯ ವೇಳೆಗೆ ಪತ್ತೆ ಮಾಡಲಾಗಿದೆ. ಕಜಕಿಸ್ತಾನದ ಸರ್ಕಾರ ಘಟನೆ ಕುರಿತು ಪ್ರಯಾಣಿಕರಿಗೆ ಮಾಹಿತಿ ನೀಡಲು ಸಹಾಯವಾಣಿಯನ್ನು ಪ್ರಾರಂಭಿಸಿದೆ. ಶವಗಳನ್ನು ಆಸ್ಪತ್ರೆಗೆ ಸಾಗಣೆ ಮಾಡಲಾಗಿದ್ದು, ಮೃತಪಟ್ಟವರ ಗುರುತು ಪತ್ತೆ ಹಚ್ಚಿ ಅವರಿಗೆ ಶವ ಹಸ್ತಾಂತರ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗಿದೆ.

ವಿಮಾನ ನೆಲಕ್ಕೆ ಅಪ್ಪಳಿಸಿದ ತೀವ್ರತೆಗೆ ಮುಂಭಾಗ ಸಂಪೂರ್ಣವಾಗಿ ಜಖಂಗೊಂಡಿದೆ. ಬೆಂಕಿಯೂ ಹೊತ್ತಿಕೊಂಡ ಪರಿಣಾಮ ಹಲವು ಪ್ರಯಾಣಿಕರು ಸಾವನ್ನಪ್ಪಿದರು. ಮಾಹಿತಿಗಳ ಪ್ರಕಾರ ವಿಮಾನದಲ್ಲಿದ್ದ ಬಹುತೇಕ ಪ್ರಯಾಣಿಕರು ಅಜರ್‌ಬೈಜಾನ್‌ನವರು. ಕಜಕಿಸ್ತಾನ, ಕಿರ್ಗಿಸ್ತಾನ ಮತ್ತು ರಷ್ಯಾದ ಕೆಲವು ಪ್ರಯಾಣಿಕರೂ ಇದ್ದರು ಎಂಬ ವರದಿಗಳು ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+