ಪತಿಯನ್ನು ಕೊಲ್ಲುವುದು ಹೇಗೆ? ಪುಸ್ತಕ ಬರೆದ ಲೇಖಕಿ ಬಂಧನ

ಬೆಂಗಳೂರು, ಸೆಪ್ಟೆಂಬರ್ 12: 'ಪತಿಯನ್ನು ಕೊಲ್ಲುವುದು ಹೇಗೆ?' ಎಂಬ ಕೃತಿ ರಚಿಸಿದ ಲೇಖಕಿ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಅವರನ್ನು ಬಂಧಿಸಲಾಗಿದೆ. ಒರೆಗಾನ್ ನ ಬಾಣಸಿಗ ಡೇನಿಯಲ್ ಬ್ರೋಫಿ ಕೊಲೆ ಕೇಸಿಗೆ ತಿರುವು ಕೊನೆಗೂ ಸಿಕ್ಕಿದೆ.

'ಹೆಲ್ ಆನ್ ದಿ ಹಾರ್ಟ್', ದಿ ರಾಂಗ್ ಹಸ್ಬೆಂಡ್ ಮುಂತಾದ ಜನಪ್ರಿಯ ಥ್ರಿಲ್ಲರ್ ಗಳನ್ನು ಬರೆದಿರುವ ನ್ಯಾನ್ಸಿ ಅವರನ್ನು ಪೊಲೀಸರು ಸೆಪ್ಟೆಂಬರ್ 05ರಂದು ಬಂಧಿಸಿದ್ದಾರೆ.

ಡೆನಿಯಲ್ ಸಂತಾಪ ಸಭೆಯಲ್ಲಿ ಮಾತನಾಡಿದ್ದ ನ್ಯಾನ್ಸಿ, ಬದುಕಿನಲ್ಲಿ ಏನು ಬೇಕು ಎಂಬುದನ್ನು ಚೆನ್ನಾಗಿ ಅರಿತ್ತಿದ್ದ ಕೆಲವೇ ವ್ಯಕ್ತಿಗಳಲ್ಲಿ ಡ್ಯಾನ್ ಕೂಡಾ ಒಬ್ಬರಾಗಿದ್ದರು. ಅಂದುಕೊಂಡಿದ್ದನ್ನು ಪ್ರೀತಿಯಿಂದ ಮಾಡುತ್ತಿದ್ದರು ಎಂದು ಹೇಳಿದ್ದರು.

Author of How to Murder Your Husband arrested for allegedly killing her husband

ನ್ಯಾನ್ಸಿ ಎಲ್ ಕ್ರಾಂಪ್ಟನ್ ಬ್ರೋಫಿ ಅವರೇ ಡೇನಿಯಲ್ ಸಾವಿಗೆ ಕಾರಣ ಎಂದು ಡಿಟೆಕ್ಟಿವ್ ಗಳು ಶಂಕಿಸಿದ ಬಳಿಕ ತನಿಖೆ ಕೈಗೊಂಡು, ಆಕೆಯನ್ನು ಬಂಧಿಸಲಾಗಿದೆ ಎಂದು ಪೋರ್ಟ್ ಲ್ಯಾಂಡ್ ಪೊಲೀಸರು ಹೇಳಿದರು.

ಒರೆಗಾನ್ ನ ಪಾಕಶಾಸ್ತ್ರ ವಿದ್ಯಾಲಯದಲ್ಲಿ 10 ವರ್ಷಗಳ ಕಾಲ ಬಾಣಸಿಗರಾಗಿದ್ದ 63 ವರ್ಷ ವಯಸ್ಸಿನ ಡೇನಿಯಲ್ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.

ಆದರೆ, ನ್ಯಾನ್ಸಿ ಈ ಕೃತ್ಯ ಎಸಗಿರಬಹುದು ಎಂಬ ಶಂಕೆ ಯಾರಿಗೂ ಬಂದಿರಲಿಲ್ಲ.ಈ ರೀತಿ ನಿಜ ಜೀವನದ ಪಾತ್ರಗಳು ಸನ್ನಿವೇಶಗಳನ್ನಿಟ್ಟುಕೊಂಡು ತನ್ನ ಸುಂದರ ಪತ್ನಿ ವಿರುದ್ಧವೇ ಕಾರ್ಯಚಾರಣೆ ನಡೆಸಿದ ಲೇಖಕ ಕಥೆಯುಳ್ಳ ಹಿಂದಿ ಸಿನಿಮಾವೊಂದು ಬಂದಿತ್ತು. ಸಂಜಯ್ ದತ್ ಹಾಗೂ ಐಶ್ವರ್ಯಾ ರೈ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+