ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬಳಿಕ 'ವೀಸಾಘಾತ' ನೀಡಿದ ಆಸ್ಟ್ರೇಲಿಯಾ

ಅಮೆರಿಕ ನಂತರ ಆಸ್ಟ್ರೇಲಿಯಾ ತನ್ನ ವೀಸಾ ನೀತಿಯನ್ನು ಬದಲಾಯಿಸಿಕೊಂಡಿದ್ದು, ವಿದೇಶಿಯರನ್ನು ತಾತ್ಕಾಲಿಕವಾಗಿ ಉದ್ಯೋಗಕ್ಕೆ ನೇಮಿಸಿಕೊಳ್ಳುವ 'ವೀಸಾ 457' ಯೋಜನೆ ರದ್ದಾಗಿದೆ.

By Mahesh
|
Google Oneindia Kannada News

ಕ್ಯಾನ್ ಬೆರಾ, ಏಪ್ರಿಲ್ 19: ಅಮೆರಿಕ ನಂತರ ಆಸ್ಟ್ರೇಲಿಯಾ ತನ್ನ ವೀಸಾ ನೀತಿಯನ್ನು ಬದಲಾಯಿಸಿಕೊಂಡಿದ್ದು, ವಿದೇಶಿಯರನ್ನು ತಾತ್ಕಾಲಿಕವಾಗಿ ಉದ್ಯೋಗಕ್ಕೆ ನೇಮಿಸಿಕೊಳ್ಳುವ 'ವೀಸಾ 457' ಯೋಜನೆ ರದ್ದಾಗಿದೆ.

ಆಸ್ಟ್ರೇಲಿಯಾ ಫಸ್ಟ್ ಯೋಜನೆ ಜಾರಿಗೊಳಿಸಲಾಗುತ್ತಿದ್ದು, ಸ್ಥಳೀಯರಿಗೆ ಉದ್ಯೋಗದಲ್ಲಿ ಮೊದಲ ಆದ್ಯತೆ ನೀಡಲಾಗುತ್ತದೆ. 'ವೀಸಾ 457' ಯೋಜನೆಯಿಂದ ನಿರುದ್ಯೋಗ ಸಮಸ್ಯೆ ತಲೆದೋರಿತ್ತು.

Adopting a new 'Australians first' approach to skilled migration, Prime Minister Malcolm Turnbull has announced that he will be abolishing the existing 457 Visa programme, currently used by temporary foreign workers to gain employment in the country. Read more at: https://www.oneindia.com/international/australia-abolish-temporary-work-457-visa-programme-check-immigration-2408793.html

ವಿದೇಶಿಯರಿಗೆ ತಾತ್ಕಾಲಿಕವಾಗಿ ಉದ್ಯೋಗ ನೀಡುತ್ತಿದ್ದ ಕೌಶಲ್ಯಪೂರ್ಣ ವಲಸೆಗೆ ಒತ್ತು ನೀಡುತ್ತಿದ್ದ ವೀಸಾ 457 ಯೋಜನೆ ಇನ್ಮುಂದೆ ಬಂದ್ ಆಗಲಿದೆ ಎಂದು ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಂ ಟರ್ನ್ ಬುಲ್ ಘೋಷಿಸಿದ್ದಾರೆ.

ಭಾರತೀಯ ಐಟಿ ರಂಗಕ್ಕೆ ಎಚ್ಚರಿಕೆ: ವಿದೇಶಕ್ಕೆ ಭಾರತದಿಂದ ಕೌಶಲ್ಯ ಹೊಂದಿರುವ ಉದ್ಯೋಗಿಗಳನ್ನು ಕಳಿಸುತ್ತಿದ್ದ ಭಾರತೀಯ ಐಟಿ ರಂಗಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿದೆ. ಅಮೆರಿಕ, ಬ್ರಿಟನ್ ಹಾಗೂ ಸಿಂಗಪುರ ನಂತರ ಆಸ್ಟ್ರೇಲಿಯಾ ತನ್ನ ವೀಸಾ ನೀತಿ ಬದಲಾಯಿಸಿಕೊಂಡು ವಲಸಿಗರ ಮೇಲೆ ಕಡಿವಾಣ ಹಾಕುತ್ತಿದೆ.

ಸದ್ಯ 95,000ಕ್ಕೂ ಅಧಿಕ ಉದ್ಯೋಗಿಗಳಿಗೆ 457 ವೀಸಾ ನೀಡಿದ್ದು, ಇದರ ನಿಷೇಧ ಭಾರತೀಯರ ಮೇಲೆ ಹೆಚ್ಚಿನ ಪ್ರಭಾವ ಬೀರಲಿದೆ. 457 ವೀಸಾದ ಮೂಲಕ ಆಸ್ಟ್ರೇಲಿಯಾದ ಕಂಪನಿಗಳು 4 ವರ್ಷ ಗಳ ಅವಧಿಗೆ ವಿದೇಶಿಯರನ್ನು ನೇಮಿಸಿ ಕೊಳ್ಳಬಹುದಾಗಿತ್ತು. ಇದರಿಂದ ಆಸ್ಟ್ರೇಲಿಯನ್ನರಿಗೆ ಉದ್ಯೋಗ ಕೊರತೆ ಎದುರಾಗಿತ್ತು ಎಂದು ಎಬಿಸಿ ವರದಿ ಮಾಡಿದೆ.

English summary
Adopting a new 'Australians first' approach to skilled migration, Prime Minister Malcolm Turnbull has announced that he will be abolishing the existing 457 Visa programme, currently used by temporary foreign workers to gain employment in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X