ಸೋಮಾಲಿಯಾದ ಹೋಟೆಲ್ ಮೇಲೆ ಉಗ್ರರ ದಾಳಿ; 10 ಸಾವು
ಮೊಗದಿಶು, ಆಗಸ್ಟ್ 17 : ಸೋಮಾಲಿಯಾದ ಕಡಲ ತೀರದ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದುವರೆಗೂ 10 ಜನರು ಮೃತಪಟ್ಟಿದ್ದು, 12ಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ. ಉಗ್ರರು ಹೋಟೆಲ್‌ನಲ್ಲಿ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ರಾಜಧಾನಿ ಮೊಗದಿಶುವಿನಲ್ಲಿನ ಸಮುದ್ರ ತೀರದ ಹೋಟೆಲ್ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ. ಇದುವರೆಗೂ ಇಬ್ಬರು ಉಗ್ರರನ್ನು ಕೊಂದು ಹಾಕಲಾಗಿದೆ ಎಂದು ಭದ್ರತಾ ಪಡೆಗಳು ಹೇಳಿವೆ. ಎಷ್ಟು ಉಗ್ರರು ಹೋಟೆಲ್‌ನಲ್ಲಿ ಅಡಗಿದ್ದಾರೆ? ಎಂಬ ಮಾಹಿತಿ ಸಿಕ್ಕಿಲ್ಲ.
ಭದ್ರತಾಪಡೆಗಳ ವಾಹನಗಳು ಹೋಟೆಲ್ ಸುತ್ತುವರೆದಿವೆ. ರಾತ್ರಿಯಾದ ಕಾರಣ ಮತ್ತು ಹೋಟೆಲ್‌ನಲ್ಲಿ ಜನರನ್ನು ಒತ್ತೆಯಾಳಾಗಿ ಇಟ್ಟುಕೊಂಡಿರುವ ಕಾರಣ ಕಾರ್ಯಾಚರಣೆ ತಡವಾಗುತ್ತಿದೆ. ಸೋಮಾಲಿಯಾದ ಇಸ್ಲಾಮಿಕ್ ಉಗ್ರ ಸಂಘಟನೆ ಅಲ್-ಶಬಾಬ್ ಈ ದಾಳಿಯ ಹೊಣೆ ಹೊತ್ತುಕೊಂಡಿದೆ.

ಕ್ಯಾಪ್ಟನ್ ಮೊಹಮ್ಮದ್ ಹುಸೈನ್ ಮಾಧ್ಯಮಗಳ ಜೊತೆ ಮಾತನಾಡಿದ್ದು ಮೊದಲು ಸ್ಫೋಟಕ ತುಂಬಿದ್ದ ಕಾರನ್ನು ತಂದು ಹೋಟೆಲ್ ಮುಖ್ಯ ಗೇಟ್‌ಗೆ ಡಿಕ್ಕಿ ಹೊಡೆಸಲಾಗಿದೆ. ಬಳಿಕ ಶಸ್ತ್ರ ಸಜ್ಜಿತ ಉಗ್ರರು ಹೋಟೆಲ್‌ಗೆ ನುಗ್ಗಿದ್ದಾರೆ ಎಂದು ಹೇಳಿದ್ದಾರೆ.
ಇದುವರೆಗೂ 10 ಜನರನ್ನು ಭದ್ರತಾ ಪಡೆಗಳು ರಕ್ಷಣೆ ಮಾಡಿವೆ. ಹೋಟೆಲ್ ಮೇಲ್ಭಾಗದಿಂದ ಒಳಗೆ ಹೋಗಲು ಪ್ರಯತ್ನ ನಡೆದಿದೆ. ಇಬ್ಬರು ಉಗ್ರರನ್ನು ಭದ್ರತಾಪಡೆಗಳು ಹತ್ಯೆ ಮಾಡಿವೆ.












Click it and Unblock the Notifications