ಲಾಹೋರ್ ಸಿಎಂ ಕಚೇರಿ ಬಳಿ ಭೀಕರ ಬಾಂಬ್ ಸ್ಫೋಟಕ್ಕೆ 26 ಸಾವು

ಲಾಹೋರ್, ಜುಲೈ 24: ಪಾಕಿಸ್ತಾನದ ಲಾಹೋರ್ ನಲ್ಲಿ ಬಾಂಬ್ ಸ್ಪೋಟಿಸಿದ್ದು ಕನಿಷ್ಠ 26 ಜನರು ಅಸುನೀಗಿದ್ದಾರೆ. ಘಟನೆಯಲ್ಲಿ ಇನ್ನೂ 57 ಜನರು ಗಾಯಗೊಂಡಿದ್ದಾರೆ. ಸತ್ತವರಲ್ಲಿ ಎಂಟು ಜನ ಪೊಲೀಸರೂ ಸೇರಿದ್ದಾರೆ.

ಲಾಹೋರ್ ನಲ್ಲಿ ಪಂಜಾಬ್ ಮುಖ್ಯಮಂತ್ರಿ ಕಚೇರಿ ಸಮೀಪವೇ ಈ ಬಾಂಬ್ ಸ್ಪೋಟಿಸಿದೆ. ಇಲ್ಲಿನ ಅರ್ಫಾ ಕರೀಮ್ ಐಟಿ ಟವರ್ ಸಮೀಪ ಫಿರೋಜ್ಪುರ್ ರಸ್ತೆಯಲ್ಲಿ ಈ ಕೃತ್ಯ ನಡೆದಿದ್ದು ಆ್ಯಂಟಿ ರಯಟ್ ವಿಭಾಗದ ಎಂಟು ಪೊಲೀಸರು ಸಾವನ್ನಪ್ಪಿದ್ದಾರೆ.

At least 9 killed and more than 15 injured in the blast near CM office at Lahore

ಗಾಯಳುಗಳಿಗೆ ಲಾಹೋರ್ ಸಾರ್ವಜನಿಕ ಆಸ್ಪತ್ರೆ, ಜಿನ್ನಾ ಆಸ್ಪತ್ರೆ ಹಾಗೂ ಇತ್ತೇಫಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು ಇಂದು ಅಪ್ಘಾನಿಸ್ತಾನದ ಕಾಬೂಲ್ ನಲ್ಲಿ ತಾಲಿಬಾನ್ ಭಯೋತ್ಪಾದಕರು ಆತ್ಮಾಹುತಿ ಬಾಂಬ್ ಸ್ಪೋಟಿಸಿಕೊಂಡ ಪರಿಣಾಮ ಕನಿಷ್ಟ 35 ಜನರು ಸಾವನ್ನಪ್ಪಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+