ಅಫ್ಘಾನಿಸ್ತಾನದಲ್ಲಿ ಚಿನ್ನದ ಗಣಿ ಕುಸಿದು ಕನಿಷ್ಠ 30 ಮಂದಿ ಸಾವು
ಅಫ್ಘಾನಿಸ್ತಾನದ ಈಶಾನ್ಯ ಭಾಗದಲ್ಲಿ ಭಾನುವಾರ ಚಿನ್ನದ ಗಣಿ ಕುಸಿದು ಕನಿಷ್ಠ 30 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತರ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಬಡಖ್ ಶಾನ್ ಪ್ರಾಂತ್ಯದ ಕೊಹಿಸ್ತಾನ್ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ.
ಇಲ್ಲಿನ ಹಳ್ಳಿಗರು 60 ಮೀಟರ್ ನಷ್ಟು (200 ಅಡಿ) ಅಗೆದು, ಚಿನ್ನಕ್ಕಾಗಿ ಶೋಧ ನಡೆಸುತ್ತಿದ್ದರು. ಮೇಲೆ ಗೋಡೆ ಕುಸಿದಾಗ ಅವರೆಲ್ಲ ಒಳಗಿದ್ದರು. ಶಾಫ್ಟ್ ಕುಸಿದಿದ್ದು ಏಕೆ ಎಂಬುದು ಗೊತ್ತಾಗಿಲ್ಲ. ಆದರೆ ಗಣಿಯೊಳಗೆ ಕೆಲಸ ಮಾಡುತ್ತಿದ್ದವರು ವೃತ್ತಿಪರರಲ್ಲ ಎಂದು ಪ್ರಾಂತ್ಯದ ಗವರ್ನರ್ ವಕ್ತಾರರು ಮಾಹಿತಿ ನೀಡಿದ್ದಾರೆ.

ಅವಘಡ ಸಂಭವಿಸಿದ ಸ್ಥಳಕ್ಕೆ ರಕ್ಷಣಾ ತಂಡವನ್ನು ಕಳುಹಿಸಲಾಗಿದೆ. ಆ ಸ್ಥಳದಿಂದ ಮೃತರ ಶವವನ್ನು ತೆರವು ಮಾಡುವ ಕಾರ್ಯವನ್ನು ಹಳ್ಳಿಗರು ಮಾಡುತ್ತಿದ್ದಾರೆ. "ಇಲ್ಲಿನ ಹಳ್ಳಿಗರು ದಶಕಗಳಿಂದ ಇದೇ ಚಿನ್ನದ ಗಣಿಯ ವ್ಯವಹಾರ ಮಾಡುತ್ತಿದ್ದಾರೆ. ಅವರ ಮೇಲೆ ಸರಕಾರದ ನಿಯಂತ್ರಣ ಇಲ್ಲ" ಎಂದು ವಕ್ತಾರರು ತಿಳಿಸಿದ್ದಾರೆ.












Click it and Unblock the Notifications