Kamala Harris: ಕಮಲಾ ಹ್ಯಾರಿಸ್ ಪರ ಪ್ರಚಾರ ಅಖಾಡಕ್ಕೆ ಎ.ಆರ್. ರೆಹಮಾನ್ ಎಂಟ್ರಿ!

ಕಮಲಾ ಹ್ಯಾರಿಸ್ ಪರವಾಗಿ ಇದೀಗ ಅಮೆರಿಕದಲ್ಲಿ ಹವಾ ಎದ್ದಿದ್ದು, ಭಾರತ ಮೂಲದ ಈ ನಾಯಕಿಗೆ ಇದೀಗ ಜಾಗತಿಕ ಮಟ್ಟದಲ್ಲಿ ಕೂಡ ಬೆಂಬಲ ಸಿಗುತ್ತಿದೆ. ಅದರಲ್ಲೂ ಭಾರತದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಅವರು ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಡೊನಾಲ್ಡ್ ಟ್ರಂಪ್ ವಿರುದ್ಧ ಗೆಲ್ಲುವುದು ಗ್ಯಾರಂಟಿ ಆಗುತ್ತಿದೆ. ಇಂತಹ ವೇಳೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್ ಕಮಲಾ ಅವರ ಬೆಂಬಲಿಗರಿಗೆ ಸಿಕ್ಕಿದ್ದು ಭಾರತದ ಸಂಗೀತ ಮಾಂತ್ರಿಕ ಈಗ ಕಮಲಾ ಹ್ಯಾರಿಸ್ ಬೆನ್ನಿಗೆ ನಿಂತಿದ್ದಾರೆ.

ಅಮೆರಿಕ ಹೆಸರಿಗೆ ಮಾತ್ರ ಮಹಿಳಾ ಸಬಲೀಕರಣ.. ಮಹಿಳಾ ಸಬಲೀಕರಣ.. ಅಂತ ಪ್ರತಿಬಾರಿ ಹೇಳುತ್ತದೆ. ಆದರೆ ಇಂತಹ ದೇಶದಲ್ಲೇ ಇದುವರೆಗೂ ಒಬ್ಬರೇ ಒಬ್ಬ ಮಹಿಳಾ ಅಧ್ಯಕ್ಷರನ್ನ ಆಯ್ಕೆ ಮಾಡಿಲ್ಲ. ಹೀಗಿದ್ದಾಗ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತದ ನಂಟು ಹೊಂದಿರುವ ಕಮಲಾ ಹ್ಯಾರಿಸ್ ಗೆದ್ದೇ ಗೆಲ್ಲುತ್ತಾರೆ. ಭಾರತ ಮೂಲದ ತಾಯಿಗೆ ಇದೇ ಕಮಲಾ ಹ್ಯಾರಿಸ್ ಅವರು ಜನಿಸಿದ್ದರು. ಹಾಗೇ ಕಮಲಾ ಹ್ಯಾರಿಸ್ ಅವರ ತಂದೆ ಜಮೈಕಾ ಮೂಲದವರು. ಹೀಗೆ ಭಾರತೀಯರು & ಆಫ್ರಿಕನ್ ಅಮೆರಿಕನ್ ಸಮುದಾಯದ ಬೆಂಬಲದ ಹಿನ್ನೆಲೆ ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ ಎನ್ನಲಾಗುತ್ತಿದೆ.

AR Rahman Will Help Kamala Harris For American Presidential Election Campaign

ಕಮಲಾ ಹ್ಯಾರಿಸ್ ಬೆನ್ನಿಗೆ ಭಾರತೀಯರು?

ಈ ಮೂಲಕ ಕಮಲಾ ಹ್ಯಾರಿಸ್ ಹೊಸ ಇತಿಹಾಸ ರಚನೆ ಮಾಡುತ್ತಾರೆ ಎಂಬ ವಿಶ್ವಾಸ ತುಂಬಿ ತುಳುಕುತ್ತಿದೆ. ಇನ್ನು ಹೀಗಿದ್ದಾಗ ಭಾರತೀಯರು ಅಮೆರಿಕದಲ್ಲಿ ಭಾರಿ ಪ್ರಮಾಣದಲ್ಲಿ ಹೋಗಿ ನೆಲಸಿದ್ದು, ಅವರೆಲ್ಲರೂ ಇದೀಗ ಬಹುತೇಕ ಕಮಲಾ ಹ್ಯಾರಿಸ್ ಬೆನ್ನಿಗೆ ನಿಂತಿದ್ದಾರೆ. ಇಂತಹ ಸಮಯದಲ್ಲಿ ಭಾರತದ ಮ್ಯೂಸಿಕ್ ಮಾಂತ್ರಿಕ ಎ.ಆರ್. ರೆಹಮಾನ್ ಏನು ಮಾಡಿದ್ದಾರೆ? ಈ ಹೊತ್ತಲ್ಲಿ ಎ.ಆರ್. ರೆಹಮಾನ್ ಅವರು ಕಮಲಾ ಹ್ಯಾರಿಸ್‌ಗೆ ನೀಡಿರುವ ಬೆಂಬಲ, ಎಷ್ಟು ಮುಖ್ಯವಾಗಿದೆ? ಮುಂದೆ ಓದಿ.

30 ನಿಮಿಷಗಳ ಸಂಗೀತ ಪ್ರದರ್ಶನ

ಅಂದಹಾಗೆ ಇದೀಗ ಅಮೆರಿಕ ಉಪಾಧ್ಯಕ್ಷೆ & ಅಮೆರಿಕದಲ್ಲಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿ ಎ.ಆರ್‌. ರೆಹಮಾನ್‌ ಬರೋಬ್ಬರಿ 30 ನಿಮಿಷಗಳ ಸಂಗೀತ ಪ್ರದರ್ಶನದ ವಿಡಿಯೋ ಶೂಟ್ ಮಾಡಿಕೊಂಡಿದ್ದಾರೆ. ಈ ಮೂಲಕ ನವೆಂಬರ್ 5ರಂದು ನಡೆಯುವ ಚುನಾವಣೆ ಕ್ಯಾಂಪೇನ್‌ಗೆ ಅಂದ್ರೆ ಪ್ರಚಾರ ಕಾರ್ಯಕ್ಕೆ ಇದೀಗ ಕಮಲಾ ಹ್ಯಾರಿಸ್ ಅವರಿಗೆ ಭಾರಿ ಬೆಂಬಲ ಸಿಕ್ಕಂತೆ ಆಗಿದೆ. ನಾಳೆ ಅಂದ್ರೆ ವಿಡಿಯೋ ಅಕ್ಟೋಬರ್‌ 13ರ ರಾತ್ರಿ 8 ಗಂಟೆಗೆ, ಎಎಪಿಐ ವಿಕ್ಟರಿ ಫಂಡ್‌ ಎಂಬ ಯುಟ್ಯೂಬ್‌ ಚಾನೆಲ್ ಮೂಲಕ ಪ್ರಸಾರವಾಗಲಿದೆ ಎಂದು ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+