ಮೆಕ್ಕಾದಲ್ಲಿ ಭೀಕರ ದುರಂತ, 450 ದಾಟಿದ ಸಾವಿನ ಸಂಖ್ಯೆ

ಮೆಕ್ಕಾ (ಸೌದಿ ಅರೇಬಿಯಾ), ಸೆಪ್ಟೆಂಬರ್ 24 : ಎರಡೇ ವಾರದಲ್ಲಿ ಮುಸ್ಲಿಂರ ಪವಿತ್ರ ಸ್ಥಳವಾದ ಮೆಕ್ಕಾದಲ್ಲಿ ಮತ್ತೊಂದು ಭೀಕರ ದುರ್ಘಟನೆ ಸಂಭವಿಸಿದೆ. ಮುಸ್ಲಿಂರ ಹಬ್ಬ ಬಕ್ರೀದ್ ಹಿಂದಿನ ದಿನ ಮೆಕ್ಕಾ ಮಸೀದಿಯ ಎದಿರು ಗುರುವಾರ ಸಂಭವಿಸಿದ ಕಾಲ್ತುಳಿತಕ್ಕೆ ನಾನೂರಕ್ಕೂ ಹೆಚ್ಚು ಭಕ್ತರು ಅಸುನೀಗಿದ್ದಾರೆ.

ಎರಡು ವಾರಗಳ ಹಿಂದೆ ಸೆಪ್ಟೆಂಬರ್ 11ರಂದು ಶುಕ್ರವಾರ ಕ್ರೇನ್ ಕುಸಿದು ಹಜ್ ಪ್ರವಾಸಿಗಳ ಮೇಲೆ ಬಿದ್ದಿದ್ದರಿಂದ 107 ಜನರು ಸಾವಿಗೀಡಾಗಿದ್ದರು. ಈ ದುರಂತ ಮಾಸುವ ಮುನ್ನವೇ ಬಕ್ರೀದ್ ಹಬ್ಬದ ಮುನ್ನಾದಿನ ಮತ್ತೊಂದು ದುರಂತ ಸಂಭವಿಸಿದೆ. [ಮೆಕ್ಕಾ ಕ್ರೇನ್ ದುರಂತ : ಚಿತ್ರಗಳು]

Another tragedy in Mecca : Hundreds die in stampede

ಇತ್ತೀಚೆಗೆ ಬಂದಿರುವ ವರದಿಯ ಪ್ರಕಾರ, ಸಾವಿಗೀಡಾದವರ ಸಂಖ್ಯೆ 450 ದಾಟಿದೆ, ಗಾಯಗೊಂಡವರ ಸಂಖ್ಯೆ ಸಾವಿರ ಹತ್ತತ್ತಿರ ಎಂದು ಸೌದಿ ಸಿವಿಲ್ ಡಿಫೆನ್ಸ್ ವರದಿ ಮಾಡಿದೆ. ಮೆಕ್ಕಾದಿಂದ 5 ಕಿ.ಮೀ. ದೂರದಲ್ಲಿರುವ ಮಿನಾ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಲಿದಾನದ ಸಂಕೇತವಾಗಿರುವ ಈದ್-ಅಲ್-ಅದಾ ಹಬ್ಬದ ಮೊದಲನೇ ದಿನವೇ ನೂರಾರು ಜನರು ಬಲಿಯಾಗಿರುವುದು ದುರ್ದೈವವೇ ಸರಿ. ಈ ಘಟನೆಯಿಂದಾಗಿ ಬಕ್ರೀದ್ ಹಬ್ಬದ ಮೇಲೆ ಕಾರ್ಮೋಡ ಕವಿದಂತಾಗಿದೆ.

ಸೌದಿ ಅಧಿಕಾರಿಗಳಿಂದ ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಮಿನಾದಲ್ಲಿ ಕಳೆದ 9 ವರ್ಷಗಳಲ್ಲಿ ಯಾವುದೇ ಅವಘಡ ಸಂಭವಿಸಿರಲಿಲ್ಲ. 2006ರಲ್ಲಿ, ದುಷ್ಟಶಕ್ತಿಗೆ ಸಾಕೇಂತಿಕವಾಗಿ ಕಲ್ಲು ಎಸೆಯುವ ಹಬ್ಬದಲ್ಲಿ ಸಂಭವಿಸಿದ್ದ ಕಾಲ್ತುಳಿತದಲ್ಲಿ 364 ಜನರು ಸಾವಿಗೀಡಾಗಿದ್ದರು.


ಮೋದಿ ಕಂಬನಿ : ಅಮೆರಿಕ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮೆಕ್ಕಾ ದುರಂತದಲ್ಲಿ ಮಡಿದವರಿಗಾಗಿ ಕಂಬನಿ ಮಿಡಿದಿದ್ದಾರೆ. ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಈದ್-ಅಲ್-ಅದಾ ಅಂದರೆ ಮೇಕೆಯನ್ನು ಬಲಿಕೊಡುವ ದಿನ ಅತ್ಯಂತ ಡೇಂಜರಸ್ ಅಂತ ಪರಿಗಣಿಸಲಾಗುತ್ತದೆ. ಈ ದಿನದಂದು ಗರಿಷ್ಠ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿರುತ್ತಾರೆ. ಈ ದಿನ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+