ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಸ್ಎ: ಟೆಕ್ಸಾಸ್ ನಲ್ಲಿ ಹಿಂದೂ ದೇಗುಲ ಮೇಲೆ ದಾಳಿ

By Mahesh
|
Google Oneindia Kannada News

ವಾಷಿಂಗ್ಟನ್, ಏ.20: ಶಿವರಾತ್ರಿ ಸಂದರ್ಭದಲ್ಲಿ ಹಿಂದೂ ದೇಗುಲವೊಂದರ ಗೋಡೆ ಮೇಲೆ ಎಚ್ಚರಿಕೆ ಬರಹ ಕೆತ್ತಿ ಹೋಗಿದ್ದ ಘಟನೆ ಬೆನ್ನಲ್ಲೇ ಅಮೆರಿಕದ ಉತ್ತರ ಟೆಕ್ಸಾಸ್ ಪ್ರಾಂತ್ಯದ ಹಿಂದೂ ದೇಗುಲದ ಗೋಡೆಯನ್ನು ಅಪವಿತ್ರಗೊಳಿಸಲಾಗಿದೆ. ದೇಗುಲದ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಉತ್ತರ ಟೆಕ್ಸಾಸ್ ನ ಓಲ್ಡ್ ಲೇಕ್ ಹೈಲ್ಯಾಂಡ್ಸ್ ನಲ್ಲಿರುವ ದೇಗುಲದ ಗೋಡೆ ಹಾಗೂ ಮುಖ್ಯದ್ವಾರದ ಮೇಲೆ '666' ಹಾಗೂ ಕ್ರಾಸ್ ಚಿನ್ಹೆಯನ್ನು ಉಲ್ಟಾ ಬರೆಯಲಾಗಿದೆ. ಸ್ಪ್ರೇ ಪೈಂಟ್ ಬಳಸಿ ಗೋಡೆಗಳ ಮೇಲೆ ಗ್ರಾಫಿಟಿಗಳನ್ನು ಬಿಡಿಸುವ ಚಿತ್ರಗಳು ಕಂಡು ಬಂದಿವೆ ಎಂದು ದೇಗುಲದ ಆಡಳಿತ ಮಂಡಳಿ ಸದಸ್ಯ ಕೃಷ್ಣ ಸಿಂಗ್ ಹೇಳಿದ್ದಾರೆ. [ಅಮೆರಿಕದ ದೇಗುಲ ಮೇಲೆ ದಾಳಿ, ಶಿವರಾತ್ರಿ ದಿನ ಆತಂಕ]

Another Hindu temple vandalised with graffiti in US

ದುಷ್ಕರ್ಮಿಗಳ ಪತ್ತೆಗಾಗಿ ಡಲ್ಲಾಸ್ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ. ದೇಗುಲದ ಸುತ್ತಾ ಬೇಲಿ ಹಾಕುವ ಕಾರ್ಯವನ್ನು ಭಕ್ತಾದಿಗಳೇ ಸ್ವಇಚ್ಛೆಯಿಂದ ಮಾಡಿದ್ದಾರೆ. ಈ ಕಾರ್ಯದಲ್ಲಿ ಹಿಂದೂ ಧರ್ಮದವರಲ್ಲದೇ ಅನ್ಯಧರ್ಮಿಯರು ಕೈಜೋಡಿಸಿದ್ದು ವಿಶೇಷ., ಅಮೆರಿಕದಲ್ಲಿ ಧಾರ್ಮಿಕ ಶಾಂತಿ ಕದಡುವ ಇಂಥ ದುಷ್ಕರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಕೃಷ್ಣ ಸಿಂಗ್ ಹೇಳಿದರು. [ಅಮೆರಿಕದಲ್ಲಿ ಅಣ್ಣಾಮಲೈ ಸ್ವಾಮೀಜಿಗೆ 27 ವರ್ಷ ಶಿಕ್ಷೆ]

ಕಳೆದ ಮೂರು ತಿಂಗಳಿನಲ್ಲಿ ಮೂರನೇ ಬಾರಿ ಹಿಂದೂ ಧಾರ್ಮಿಕ ಕೇಂದ್ರವೊಂದರ ಮೇಲೆ ಈ ರೀತಿ ದಾಳಿ ನಡೆದಿದೆ. ಸಿಯಾಟೆಲ್ ಮೆಟ್ರೋಪಾಲಿಟನ್ ಪ್ರದೇಶದಲ್ಲಿ ಫೆ.15ರಂದು ದೇಗುಲದ ಗೋಡೆ ಮೇಲೆ ಸ್ವಸ್ತಿಕಾ ಚಿನ್ಹೆ ಬರೆದು ಗೆಟ್ ಔಟ್ ಎಂದು ಕರೆ ನೀಡಲಾಗಿತ್ತು. ನಂತರ ಫೆ.26ರಂದು ಕೆಂಟ್ ಹಿಂದೂ ದೇಗುಲದ ಮೇಲೆ fear ಎಂದು ಬರೆಯಲಾಗಿತ್ತು. (ಪಿಟಿಐ)

English summary
Washington:A Hindu temple in the US has been vandalised with nasty images spray-painted on its walls, the latest such incident in the country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X