625 ಎಕರೆ ಭೂಮಿ ನುಂಗಿದ ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್?

ಲಾಹೋರ್‌: ನೌಟಂಕಿ ಪಾಕಿಸ್ತಾನದ ನಾಯಕರು ಭಯೋತ್ಪಾದಕರನ್ನು ಬೆಳೆಸುವ ವಿಚಾರ ಮಾತ್ರವಲ್ಲ, ಜನರ ದುಡ್ಡು ದೋಚುವಲ್ಲೂ ಮುಂದಿದ್ದಾರೆ. ಇದೀಗ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ ಇನ್ನೊಂದು ಭ್ರಷ್ಟಚಾರದ ಆರೋಪ ಕೇಳಿಬಂದ್ದಿದೆ. ಇತ್ತೀಚೆಗೆ ಜೈಲೂಟ ತಿಂದು ಹೊರಬಂದಿದ್ದ ಇಮ್ರಾನ್‌ಗೆ ಮತ್ತೆ ಜೈಲು ಪಕ್ಕಾ ಆಗುತ್ತಿದೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ವಂಚನೆ ಮಾಡಿ ಸುಮಾರು 625 ಎಕರೆ ಭೂಮಿಯನ್ನು ಅತಿ ಕಡಿಮೆ ಬೆಲೆಗೆ ಖರೀದಿ‌ ಮಾಡಿದ್ದಾರೆ ಎನ್ನಲಾಗಿದೆ. ಈ ಕುರಿತು ಮಾಜಿ ಪಿಎಂ ಇಮ್ರಾನ್ ಖಾನ್ ವಿರುದ್ಧ ಮತ್ತೊಂದು ಕೇಸ್ ದಾಖಲಾಗಿದೆ. ಈ ಮೂಲಕ ಪಾಕ್ ಮಾಜಿ ಪ್ರಧಾನಿಯ ವಿರುದ್ಧ ಒಟ್ಟು 140 ಕೇಸ್ ದಾಖಲಾದಂತೆ ಆಗಿದೆ. ಕೊಲೆ ಆರೋಪದ ಸಹಿತ ನೂರಾರು ಕೇಸ್ ಇಮ್ರಾನ್ ಖಾನ್ ಬೆನ್ನುಹತ್ತಿವೆ. ಪರಿಸ್ಥಿತಿ ಹೀಗಿದ್ದಾಗ ಮತ್ತೊಂದು ಭ್ರಷ್ಟಚಾರ ಕೇಸ್ ಇಮ್ರಾನ್ ಖಾನ್ ವಿರುದ್ಧ ದಾಖಲಾಗಿರುವುದು, ಮತ್ತೊಮ್ಮೆ ಖಾನ್ ಬಂಧನದ ಕುರಿತು ಮುನ್ಸೂಚನೆ ನೀಡಿದಂತಿದೆ (Imran Khan Arrest).

allegation against Imran Khan

ಇಮ್ರಾನ್ ಖಾನ್ ಬುಡಕ್ಕೆ ಬೆಂಕಿ!

ಈಗಿನ ಬೆಳವಣಿಗೆ ನೋಡುತ್ತಿದ್ದರೆ ಇಮ್ರಾನ್ ಖಾನ್‌ಗೆ ದೊಡ್ಡ ಗಂಡಾಂತರ ಎದುರಾದಂತೆ ಕಾಣುತ್ತಿದೆ. ಏಕೆಂದರೆ ಪಾಕಿಸ್ತಾನ ಸೇನೆ ಮತ್ತು ಪಾಕಿಸ್ತಾನದ ಕೇಂದ್ರ ಸರ್ಕಾರದ ವಿರುದ್ಧ ಇಮ್ರಾನ್ ತೊಡೆತಟ್ಟಿದ್ದಾರೆ. ಹೀಗಾಗಿಯೇ ಇಮ್ರಾನ್ ಖಾನ್ ಕೊಲೆಗೂ ಯತ್ನಿಸಲಾಗಿತ್ತೆಂಬ ಆರೋಪ ಕೇಳಿಬಂದಿತ್ತು. ಈ ನಡುವೆ ಇಮ್ರಾನ್‌ನ ಇನ್ನೊಮ್ಮೆ ಜೈಲಿಗೆ ಕಳುಹಿಸೋದಕ್ಕೂ ಪ್ರಯತ್ನ ಪಡುತ್ತಿದ್ದಾರೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಕಿತ್ತಾಟದ ಮಧ್ಯೆ ಮತ್ತೊಂದು ಕೇಸ್ ಹಾಕಿ ಇಮ್ರಾನ್ ಖಾನ್‌ಗೆ ಶಾಕ್ ನೀಡಲಾಗಿದೆ. ಅದರಲ್ಲೂ ಈ ಕೇಸ್ ಕೂಡ ಲಾಹೋರ್ ಪ್ರಾಂತ್ಯದಲ್ಲೇ ದಾಖಲಾಗಿದ್ದು ವಿಶೇಷ!

ಕೇಸ್ ಮೇಲೆ ಕೇಸ್ ಬಿದ್ದಿದ್ದು ಯಾಕೆ?

ಇಮ್ರಾನ್ ವಿರುದ್ಧ ದಾಖಲಾಗಿರುವ ಕೇಸ್‌ಗಳ ಪೈಕಿ ಪಾಕ್‌ನ ಲಾಹೋರ್ ಪ್ರಾಂತ್ಯದಲ್ಲೇ ಅತಿಹೆಚ್ಚು ಕೇಸ್ ರಿಜಿಸ್ಟರ್ ಆಗಿವೆ. ಖಾನ್ ವಿರುದ್ಧ ಭಯೋತ್ಪಾದನೆ, ಹಿಂಸಾಚಾರ ಮತ್ತು ಧರ್ಮನಿಂದನೆ, ಕೊಲೆ ಯತ್ನ ಸೇರಿ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಈಗ ಖಾನ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪಂಜಾಬ್‌ನ ಲಯ್ಯಾ ಜಿಲ್ಲೆಯಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಂದ ಕಡಿಮೆ ಬೆಲೆಗೆ ಭೂಮಿಯನ್ನು ಖರೀದಿಸಿದ್ದಾರೆ. ₹600 ಕೋಟಿ ಬೆಲೆ ಬಾಳುವ ಭೂಮಿಯನ್ನು ರಾಜಕೀಯ ಪ್ರಭಾವ ಬಳಸಿ ₹13 ಕೋಟಿಗೆ ಖರೀದಿ ಮಾಡಿದ್ಧಾರೆ ಅನ್ನೋ ಆರೋಪ ಪಾಕ್ ಮಾಜಿ ಪ್ರಧಾನಿ ವಿರುದ್ಧ ಕೇಳಿಬಂದಿದೆ. ಈ ಬಗ್ಗೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಕ್ರಮಕ್ಕೆ ಮುಂದಾಗಿದೆ.

allegation against Imran Khan

ಇಮ್ರಾನ್ ಖಾನ್ ಸಹೋದರಿ ಕೈವಾಡ?

ಈಗ ಕೇಳಿಬಂದ ಭ್ರಷ್ಟಾಚಾರ ಹಗರಣದಲ್ಲಿ ಇಮ್ರಾನ್ ಖಾನ್ ಜೊತೆಗೆ ಖಾನ್ ಸಹೋದರಿ ಉಜ್ಮಾ ಖಾನ್‌, ಆಕೆಯ ಪತಿ ಹಾಗೂ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿ ಉಸ್ಮನ್‌ ಬುಜ್ದರ್‌ ಹೆಸರೂ ಸೇರಿದ್ದು, ಬಂಧಿಸಲು ಹೋದಾಗ ಪರಾರಿಯಾಗಿದ್ದಾರೆ ಎಂದು ಪಾಕ್‌ನ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಆರೋಪಿಸಿದೆ. ಹೀಗೆ ಪಾಕಿಸ್ತಾನ ಸರ್ಕಾರ, ಸೇನೆ ವಿರುದ್ಧ ಇಮ್ರಾನ್ ಖಾನ್ ಸಮರ ಸಾರಿದ ಬಳಿಕ ಸಾಲು ಸಾಲು ಸಮಸ್ಯೆ ಎದುರಾಗುತ್ತಿದೆ. ಇಷ್ಟು ಮಾತ್ರವಲ್ಲ ಹಿಂದೆ ಸಾವಿರಾರು ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಕೇಸ್ ಕೂಡ ಇಮ್ರಾನ್ ಖಾನ್ ವಿರುದ್ಧ ಕೇಳಿಬಂದಿತ್ತು. ಇದೀಗ ಮತ್ತೆ ಲ್ಯಾಂಡ್ ಡೀಲ್ ಪ್ರಕರಣದಲ್ಲಿ ಆರೋಪ ಕೇಳಿಬಂದಿದೆ.

ಅಲ್-ಖಾದಿರ್ ಟ್ರಸ್ಟ್ ಕೇಸ್‌ ಅಂದ್ರೆ, ಅಲ್-ಖಾದಿರ್ ಟ್ರಸ್ಟ್‌ಗೆ ಭೂಮಿ ನೀಡುವಾಗ ಸಾವಿರಾರು ಕೋಟಿ ರೂಪಾಯಿ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪ ಇಮ್ರಾನ್ ಖಾನ್ ವಿರುದ್ಧ ಇದೆ. ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ವಿರುದ್ಧ 5 ಸಾವಿರ ಕೋಟಿ ರೂಪಾಯಿ ಲ್ಯಾಂಡ್ ಡೀಲ್ ಹಗರಣವಿದೆ. ಕೇಸ್ ಸಂಬಂಧ ಖಾನ್ ಜೈಲು ಕೂಡ ಸೇರಿದ್ರು. ಪಾಕಿಸ್ತಾನ ರಾಷ್ಟ್ರೀಯ ಭ್ರಷ್ಟಾಚಾರ ನಿಗ್ರಹ ಮಂಡಳಿ ಖಾನ್‌ನ ಅರೆಸ್ಟ್ ಮಾಡಿತ್ತು. ಆದರೆ ಪಾಕ್ ಸುಪ್ರೀಂಕೋರ್ಟ್ ಮಧ್ಯಪ್ರವೇಶದ ನಂತರ ಇಮ್ರಾನ್ ಬಿಡುಗಡೆ ಆಗಿದ್ದಾರೆ. ಈಗ ಮತ್ತೊಂದು ಭ್ರಷ್ಟಾಚಾರದ ಹಗರಣ ಇಮ್ರಾನ್ ಖಾನ್ ತಲೆಗೆ ಸುತ್ತಿಕೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+