Israel & Hamas War: ಅಸಹಾಯಕರ ಮೇಲೆ ದಾಳಿ ಮಾಡುತ್ತಿದೆಯಾ ಇಸ್ರೇಲ್ ಸೇನೆ?

ಹಮಾಸ್ ಉಗ್ರರ ಮೇಲಿರುವ ಕೋಪಕ್ಕೆ ಉತ್ತರ ಗಾಜಾಪಟ್ಟಿ ಭಾಗವನ್ನ ಸಂಪೂರ್ಣ ನಾಶ ಮಾಡಲು ಇಸ್ರೇಲ್ ಸೇನೆ ಪಣತೊಟ್ಟಿದೆ. ಪರಿಸ್ಥಿತಿ ಹೀಗಿದ್ದಾಗ ಕ್ಷಣಕ್ಷಣಕ್ಕೂ ಯುದ್ಧದ ಈ ಹಿಂಸಾಚಾರ ಜೋರಾಗುತ್ತಿದೆ. ಅದ್ರಲ್ಲೂ ಗಾಜಾಪಟ್ಟಿ ನಗರದಲ್ಲಿ ಸುರಂಗ ತೋಡಿಕೊಂಡು ಬಿಲದಲ್ಲಿ ಅಡಗಿರುವ ಹಮಾಸ್ ಉಗ್ರರಿಗೆ ಹುಡುಕಾಟ ತೀವ್ರವಾಗಿದೆ. ಇದೇ ಪರಿಸ್ಥಿತಿಯಲ್ಲಿ ಇಸ್ರೇಲ್ ಸೇನೆ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಆಕ್ರೋಶವೂ ವ್ಯಕ್ತವಾಗಿದೆ.

ಇನ್ನು 5 ದಿನ ಕಳೆದರೆ ಇಸ್ರೇಲ್ ಮತ್ತು ಹಮಾಸ್ ಮಧ್ಯೆ ಯುದ್ಧ ಶುರುವಾಗಿ ಬರೋಬ್ಬರಿ 1 ತಿಂಗಳು ತುಂಬಲಿದೆ. ಇಲ್ಲಿಯ ತನಕ 10 ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದು, ಈ ಕ್ಷಣಕ್ಕೂ ಯುದ್ಧದಲ್ಲಿ ಸಾಯುತ್ತಿರುವ ಜನರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಆದರೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ ಇಸ್ರೇಲ್ ಸೇನೆ ವಿರುದ್ಧ ಜಗತ್ತು ಹಾಗೂ ಮನುಷ್ಯರ ಕುಲ ಆಕ್ರೋಶ ಹೊರಹಾಕುತ್ತಿದೆ. ಕಾರಣ ಏನು ಗೊತ್ತಾ?

Anger Is Rising Against Israel After The Allegation Of Attack On Refugee Camp At Gaza

ಗಾಜಾಪಟ್ಟಿ ನಗರದ ಉತ್ತರ ಭಾಗದಲ್ಲಿ, ಭಾರಿ ಪ್ರಮಾಣದಲ್ಲಿ ಹಮಾಸ್ ಗ್ಯಾಂಗ್ ಬಿಡಾರ ಹೂಡಿದೆ. ಈ ಜಾಗದಲ್ಲೇ ಸುರಂಗ ನಿರ್ಮಿಸಿಕೊಂಡು, ಇಸ್ರೇಲ್ ಮೇಲೆ ದಾಳಿ ನಡೆಸ್ತಿರುವ ಬಗ್ಗೆ ಆರೋಪ ಕೇಳಿಬರುತ್ತಿದೆ. ಮತ್ತೊಂದ್ಕಡೆ ಇಸ್ರೇಲ್ ಸೇನೆ ಕೂಡ, ಉತ್ತರ ಗಾಜಾಪಟ್ಟಿ ಮೇಲೆ ಮನಸ್ಸಿಗೆ ಬಂದಂತೆ ದಾಳಿ ನಡೆಸುತ್ತಿದೆ. ವಾಯುದಾಳಿ, ಜಲದಾಳಿ, ಭೂದಾಳಿಯ ಮೂಲಕ ಹಮಾಸ್‌ಗೆ ಇಸ್ರೇಲ್ ಶಾಕ್ ಕೊಡುತ್ತಿದೆ. ಆದರೆ ಈಗ ಇಸ್ರೇಲ್ ಸೇನೆ ನಿರಾಶ್ರಿತರ ಶಿಬಿರದ ಮೇಲೂ ದಾಳಿ ಮಾಡಿರುವ ಆರೋಪ ಕೇಳಿಬಂದಿದೆ.

195 ಗಾಜಾ ನಿರಾಶ್ರಿತರ ಸಾವು?

ಹೌದು ಗಾಜಾದ ಜಬಾಲಿಯಾ ನಿರಾಶ್ರಿತರ ಶಿಬಿರ ಮೇಲೆ ಇಸ್ರೇಲ್‌ ದಾಳಿ ನಡೆಸಿದ ಪರಿಣಾಮ ಬರೋಬ್ಬರಿ 195 ಗಾಜಾ ನಾಗರಿಕರು ಮೃತಪಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಇಷ್ಟು ಮಾತ್ರವಲ್ಲ 120 ಜನರು ನಾಪತ್ತೆ ಆಗಿದ್ದು, 700ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಈ ಬಗ್ಗೆ ಸ್ಥಳೀಯ ಸರ್ಕಾರ ಆರೋಪಿಸಿರುವ ಕುರಿತು, ಗಾಜಾ ಮಾಧ್ಯಮಗಳು ಇದೀಗ ವರದಿ ಪ್ರಕಟಿಸಿವೆ. ಅಂದಹಾಗೆ ಇಸ್ರೇಲ್ & ಹಮಾಸ್ ಯುದ್ಧ ಶುರುವಾದ ನಂತರ, ನಿರಾಶ್ರಿತರಾದ ಜನರು ಇಲ್ಲಿ ಸೂರು ಪಡೆದಿದ್ದರು. ಆದರೆ ಅವರ ಮೇಲೆ ದಾಳಿ ಮಾಡಲಾಗಿದೆ ಎನ್ನುತ್ತಿದೆ ಹಮಾಸ್ ಸರ್ಕಾರ. ಇಸ್ರೇಲ್ ಸೇನೆ ವಿರುದ್ಧದ ಈ ವಿಚಾರ ಸಂಚಲನ ಸೃಷ್ಟಿ ಮಾಡಿದೆ.

ಗಾಜಾಪಟ್ಟಿ ತೊರೆದ ವಿದೇಶಿಗರು

ಇಸ್ರೇಲ್ & ಹಮಾಸ್ ಯುದ್ಧವು ಶುರುವಾದ ನಂತರ ಗಾಜಾಪಟ್ಟಿ ಭಾಗದಲ್ಲಿ ವಿದೇಶಿ ಪ್ರಜೆಗಳು ಸಿಲುಕಿ ಒದ್ದಾಡಿದ್ದರು. ಹೀಗಾಗಿ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದರು. ಈ ಸಮಯದಲ್ಲೇ ಇಸ್ರೇಲ್ ಸೇನೆ ಕೂಡ ದಾಳಿ ತೀವ್ರಗೊಳಿಸಿತ್ತು. ಪರಿಸ್ಥಿತಿ ಕೈಮೀರಿ ಜೀವ ಕಳೆದುಕೊಳ್ಳಬೇಕೆಂಬ ವಾತಾವರಣ ಸೃಷ್ಟಿಯಾಗಿತ್ತು. ವಿದೇಶಿ ಪ್ರಜೆಗಳು ನರಳುತ್ತಿರುವ ಸಮಯದಲ್ಲೇ ಅವರೆಲ್ಲರಿಗೆ ಗಾಜಾ ತೊರೆಯಲು ಪರ್ಮಿಷನ್ ಸಿಕ್ಕಿದೆ.

Anger Is Rising Against Israel After The Allegation Of Attack On Refugee Camp At Gaza

ಯಾವೆಲ್ಲಾ ದೇಶಗಳ ಜನರು ಇದ್ದರು?

ಈ ಮೂಲಕ ಗಾಜಾಪಟ್ಟಿಯನ್ನ ತೊರೆಯಲು ಇದೇ ಮೊದಲು ಅಂದ್ರೆ ಯುದ್ಧ ಶುರುವಾದ ಬಳಿಕ ಮೊದಲ ಬಾರಿಗೆ ವಿದೇಶಿ ಪ್ರಜೆಗಳಿಗೆ ಅವಕಾಶ ಸಿಕ್ಕಿದೆ. ಆಸ್ಟ್ರೇಲಿಯಾ, ಆಸ್ಟ್ರೀಯಾ, ಬಲ್ಗೇರಿಯಾ, ಫಿನ್‌ಲೆಂಡ್‌, ಇಂಡೊನೇಷ್ಯಾ, ಜಪಾನ್‌, ಜೋರ್ಡಾನ್‌ ಮತ್ತಿತರ ದೇಶಗಳ ಪ್ರಜೆಗಳು ತಮ್ಮ ಪಾಸ್‌ಪೋರ್ಟ್‌ ತೋರಿಸಿ ಎಸ್ಕೇಪ್ ಆಗಿ ಜೀವ ಉಳಿಸಿಕೊಂಡಿದ್ದಾರೆ. ಈ ಬೆಳವಣಿಗೆ ಮಧ್ಯೆ ಗಾಜಾದ ಜನರು ಕೂಡ ರಫಾ ಗಡಿ ಮೂಲಕ ಹೊರಗೆ ಹೋಗಿ, ಹೊಸ ಜೀವನ ಕಟ್ಟಿಕೊಳ್ಳಲು ಕಾಯುತ್ತಿದ್ದಾರೆ. ಹೀಗಿದ್ದಾಗ ನಿರಾಶ್ರಿತರ ಶಿಬಿರದ ಮೇಲೆ ಇಸ್ರೇಲ್ ದಾಳಿ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಗಾಜಾಪಟ್ಟಿ ಜನಕ್ಕೆ ರಫಾ ಗಡಿ ಒಂದೆ ಈಗ ಉಳಿದಿರುವ ಮಾರ್ಗ. ಹೀಗಾಗಿ ತಮ್ಮ ತಮ್ಮ ಜೀವ ಉಳಿಸಿಕೊಳ್ಳಲು ಗಾಜಾಪಟ್ಟಿ ಜನರು ಪರದಾಡುತ್ತಿದ್ದಾರೆ. ಇಷ್ಟೆಲ್ಲಾ ಸಂಕಷ್ಟ ಇದ್ರೂ ಕೇವಲ ವಿದೇಶಿ ಪ್ರಜೆಗಳಿಗೆ 'ರಫಾ' ಗಡಿ ದಾಟಲು ಅನುಮತಿ ನೀಡಲಾಗಿದೆ. ವಿದೇಶಿ ಪಾಸ್‌ಪೋರ್ಟ್‌ ಹೊಂದಿದ 400ಕ್ಕೂ ಹೆಚ್ಚು ಜನರಿಗೆ ಗಾಜಾ ಪಟ್ಟಿ ತೊರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮತ್ತೊಂದು ಕಡೆ ಇಸ್ರೇಲ್ ಸೇನೆಯ ಕಡೆಯಿಂದ ನಿರಾಶ್ರಿತರ ಶಿಬಿರದ ಮೇಲೆ ದಾಳಿ ನಡೆದ ಆರೋಪ ಕೇಳಿಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+