• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಕೈಯಲ್ಲಿ ಎಕೆ47, ಮತ್ತೊಂದು ಕೈಯಲ್ಲಿ ಮಗು!

By Kiran B Hegde
|

ಸಿರಿಯಾ, ನ. 27: ಭಾರತ ಮೂಲದವರು ಐಎಸ್ಐಎಸ್ ಉಗ್ರ ಸಂಘಟನೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂಬ ಅನುಮಾನಕ್ಕೆ ಈಗ ಸ್ಪಷ್ಟ ಸಾಕ್ಷಿ ದೊರೆತಿದೆ.

ಭಾರತ ಮೂಲದ 31 ವರ್ಷದ ಅಬು ರುಮೇಸಾ ಎಂಬಾತ ಒಂದು ಕೈಯಲ್ಲಿ ಎಕೆ-47 ಹಾಗೂ ಇನ್ನೊಂದು ಕೈಯಲ್ಲಿ ತನ್ನ ಗಂಡು ಮಗುವನ್ನು ಎತ್ತಿಕೊಂಡು ನಿಂತಿರುವ ಛಾಯಾಚಿತ್ರವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾನೆ. [ಭಟ್ಕಳ ಉಗ್ರ ಯಾರಿಗೂ ಬೇಡ]

ಈತನ ಮೂಲ ಹೆಸರು ಸಿದ್ಧಾರ್ಥ ಧರ್. ಭಾರತದಲ್ಲಿ ಜನಿಸಿದ್ದ ಈತ ನಂತರ ಬ್ರಿಟನ್‌ಗೆ ತೆರಳಿದ್ದ. ಇಂಗ್ಲೆಂಡ್‌ನಲ್ಲಿ ಆಗಾಗ ಟಿವಿಯಲ್ಲಿ ನಡೆಯುವ ಚರ್ಚೆಯಲ್ಲಿ ಭಾಗವಹಿಸುತ್ತಿದ್ದ. ಅಲ್ಲದೆ, ತಾನು ಇಸ್ಲಾಂನ ಷರಿಯಾ ಕಾನೂನಿನಡಿ ಇಸ್ಲಾಮಿಕ್ ಸ್ಟೇಟ್‌ನಲ್ಲಿ ಬದುಕಲು ಇಷ್ಟಪಡುವುದಾಗಿ ಹೇಳಿಕೊಂಡಿದ್ದ. [ಇರಾಕ್ ಉಗ್ರರ ಜತೆ ಬೆಂಗಳೂರು ಯುವಕ]

ಬಂಧಿಸಿದ್ದರೂ ಪರಾರಿಯಾದ: ಒಮ್ಮೆ ಈತನನ್ನು ಇದೇ ವರ್ಷ ಸೆಪ್ಟೆಂಬರ್‌ ತಿಂಗಳಿನಲ್ಲಿ ಇಂಗ್ಲೆಂಡ್‌ ಪೊಲೀಸರು ಬಂಧಿಸಿದ್ದರು. ಆದರೆ, ಜಾಮೀನು ಮೇಲೆ ಬಿಡುಗಡೆಯಾಗಿದ್ದ. ಡಿಸೆಂಬರ್‌ನಲ್ಲಿ ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ಷರತ್ತು ವಿಧಿಸಲಾಗಿತ್ತು. ಆದರೆ, ಹೊರಗೆ ಬಂದ 24 ಗಂಟೆಗಳ ಒಳಗೆ ಪತ್ನಿ ಹಾಗೂ ನಾಲ್ವರು ಮಕ್ಕಳ ಜತೆ ಪ್ಯಾರಿಸ್ ಮೂಲಕ ಸಿರಿಯಾಕ್ಕೆ ಪರಾರಿಯಾಗಿದ್ದ. [ಉಗ್ರ ಖಾಲಿದ್ ಎನ್ಐಎ ಬಲೆಗೆ]

ಟ್ವಿಟ್ಟರ್‌ನಲ್ಲಿ ತನ್ನ ಮಗುವಿನ ಬಗ್ಗೆ ಹೀಗೆ ಬರೆದುಕೊಂಡಿದ್ದಾನೆ, "ನನ್ನ ಮಗ ಇಸ್ಲಾಮಿಕ್ ಸ್ಟೇಟ್ಸ್‌ಗೆ ಹೊಸ ಸೇರ್ಪಡೆಯಾಗಿದ್ದಾನೆ ಮತ್ತು ಆತ ಖಂಡಿತವಾಗಿಯೂ ಬ್ರಿಟಿಷ್ ಅಲ್ಲ". ಅಲ್ಲದೆ, ಮುಂದೊಂದು ದಿನ ಬ್ರಿಟನ್ ಕೂಡ ಷರಿಯಾ ಕಾನೂನಿನಡಿ ಬರಲಿದೆ ಎಂದು ಆತ ವಿಶ್ವಾಸ ವ್ಯಕ್ತಪಡಿಸಿದ್ದಾನೆ. [ಐಎಸ್ಐಎಸ್ ಸೇರಿದವರಿಗೆ ದೇಶಕ್ಕೆ ಮರಳೋ ಆಸೆ]

ಇಸ್ಲಾಮಿಕ್ ಸ್ಟೇಟ್ಸ್ ಆಕರ್ಷಣೆ ಭಾರತೀಯ ಯುವಕರಲ್ಲಷ್ಟೇ ಅಲ್ಲದೆ, ಬ್ರಿಟನ್‌ನಲ್ಲಿಯೂ ಹೆಚ್ಚುತ್ತಿದೆ. ಐಎಸ್ ಸೇರುವ ಉದ್ದೇಶದಿಂದ ಬ್ರಿಟನ್‌ನಿಂದ ಸುಮಾರು 500 ಜನ ಸಿರಿಯಾ ಹಾಗೂ ಇರಾಕ್‌ಗೆ ತೆರಳಿದ್ದಾರೆ ಎಂದು ಅಂದಾಜಿಸಲಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
An Indian-origin Islamic State suspect has posted his picture on Twitter posing with an AK-47 rifle and his new born baby. He believes one day Britain also will be ruled under Sharia.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more