ಇಸ್ರೇಲ್ & ಹಮಾಸ್ ಯುದ್ಧ ನಿಲ್ಲಿಸಲು ‘ದೊಡ್ಡಣ್ಣ’ನ ಎಂಟ್ರಿ?

ಅದೊಂದು ಯುದ್ಧ ಜಗತ್ತಿನ ನೆಮ್ಮದಿಯನ್ನೇ ಕೆಡಿಸುತ್ತಿದೆ, ಅದೊಂದು ಯುದ್ಧ ಪ್ರಪಂಚ ಮತ್ತೆ ಪೀಸ್ ಪೀಸ್ ಆಗುವ ಮುನ್ಸೂಚನೆ ನೀಡುತ್ತಿದೆ. ಹೌದು ನಾವು ಹೇಳುತ್ತಿರುವ ಯುದ್ಧ ಬೇರೆ ಯಾವುದೂ ಅಲ್ಲ, ಇಸ್ರೇಲ್ & ಹಮಾಸ್ ನಡುವೆ ನಡೆಯುತ್ತಿರುವ ಸಂಘರ್ಷದ ಬಗ್ಗೆ. ಈ ಯುದ್ಧ ಶುರುವಾಗಿ ಈಗಾಗಲೇ 4 ತಿಂಗಳು ಕಳೆದು ಇನ್ನೇನು 5 ತಿಂಗಳನ್ನೂ ಮುಗಿಸಿ, ಮುನ್ನುಗ್ಗಲಿದೆ. ಹೀಗಿದ್ದರೂ ಯುದ್ಧ ನಿಂತಿಲ್ಲ ಎಂಬ ಭಯದ ನಡುವೆ ಅಮೆರಿಕ ಅಧ್ಯಕ್ಷ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹೌದು ಇಸ್ರೇಲ್ & ಹಮಾಸ್ ಸಂಘರ್ಷಕ್ಕೆ ಮುಂದಿನ ಸೋಮವಾರ ಕದನ ವಿರಾಮವು ಬೀಳುವ ವಿಶ್ವಾಸ ನಮಗೆ ಇದೆ ಎಂದಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್. ಈ ಬಗ್ಗೆ ಸಿಎನ್‌ಎನ್‌ ವರದಿ ಉಲ್ಲೇಖಿಸಿ ಮಾಹಿತಿಗಳು ಪ್ರಕಟವಾಗಿವೆ. ನಾವು ಯುದ್ಧದ ವಿರಾಮದ ವಾತಾವರಣಕ್ಕೆ ತುಂಬಾ ಹತ್ತಿರವೆ ಇದ್ದೇವೆ ಎಂದಿದ್ದಾರೆ ಬೈಡನ್. ಈ ಮೂಲಕ ಭೀಕರ ಸ್ವರೂಪ ಪಡೆದು, ಜಾಗತಿಕವಾಗಿ ದೊಡ್ಡ ತಲೆನೋವಿಗೆ ಕಾರಣವಾಗಿದ್ದ ಇಸ್ರೇಲ್ & ಹಮಾಸ್ ಯುದ್ಧ ಇದೀಗ ನಿಂತು ಹೋಗುವ ಲಕ್ಷಣ ಗೋಚರಿಸುತ್ತಿದೆ.

American President Said That Israel & Hamas War May Stop In Few Days

29,000ಕ್ಕೂ ಹೆಚ್ಚು ಜನರ ಸಾವು?

ಇನ್ನು ಇಸ್ರೇಲ್‌ ಪಡೆ ಗಾಜಾ ಪಟ್ಟಿಯ ಮೇಲೆ ನಡೆಸುತ್ತಿರುವ ದಾಳಿಯಲ್ಲಿ, ಕನಿಷ್ಠ 29,000ಕ್ಕೂ ಹೆಚ್ಚು ಪ್ಯಾಲೆಸ್ತೀನ್ ಪ್ರಜೆಗಳು ಮೃತಪಟ್ಟಿದ್ದಾರೆ ಎನ್ನಲಾಗಿದೆ. ಈ ಕುರಿತು ಗಾಜಾ ಆಡಳಿತವು, ಆರೋಪ ಮಾಡುತ್ತಿದೆ. ಮತ್ತೊಂದು ಕಡೆ ಇಸ್ರೇಲ್ & ಹಮಾಸ್ ಯುದ್ಧದ ಪರಿಣಾಮವಾಗಿ ಹತ್ತಾರು ಲಕ್ಷ ಜನರ ಬದುಕು ಬೀದಿಗೆ ಬಿದ್ದಂತಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಈಗ ಮತ್ತೊಂದು ಮಹತ್ವದ ಸುದ್ದಿ ಇದೀಗ ಅಮೆರಿಕದ ಕಡೆಯಿಂದ ಹೊರಬಿದ್ದಿದೆ. ಹೀಗಾಗಿಯೇ ಇಸ್ರೇಲ್ & ಗಾಜಾ ಯುದ್ಧ ಆದಷ್ಟು ಬೇಗ ನಿಲ್ಲುವ ನಿರೀಕ್ಷೆ ಇದೆ. ಹಾಗಾದರೆ ಈ ಯುದ್ಧ ಶುರುವಾಗಿದ್ದು ಎಲ್ಲಿಂದ?

5000 ರಾಕೆಟ್‌ ಉಡಾಯಿಸಿದ್ದ ಉಗ್ರರು

ಹಮಾಸ್ ಉಗ್ರರು ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನರು ನಲುಗಿದ್ದು ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್‌ ವಿರುದ್ಧ 5000 ರಾಕೆಟ್‌ ಉಡಾಯಿಸಿದ್ದರು. ಸಾವಿರಾರು ಉಗ್ರರು ಕೈಯಲ್ಲಿ ಭಾರಿ ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳ ನುಗ್ಗಿದ್ರು. ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 4 ತಿಂಗಳು ಕಳೆದಿದ್ದು ಇದೀಗ 5 ತಿಂಗಳು ಕೂಡ ತುಂಬುವ ಭಯ ಕಾಡುತ್ತಿದೆ. ಈ ಸಮಯಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿರುವ ಹೇಳಿಕೆ ಭಾರಿ ಕುತೂಹಲ ಕೆರಳಿಸಿದೆ.

American President Said That Israel & Hamas War May Stop In Few Days

ಯುದ್ಧ ನಿಲ್ಲಿಸಿದರೆ ಶಾಂತಿ ಸಾಧ್ಯ

ಒಟ್ನಲ್ಲಿ ಏನೇ ಆಗಲಿ ಆದಷ್ಟು ಬೇಗ ಇಸ್ರೇಲ್ & ಹಮಾಸ್ ನಡುವಿನ ಯುದ್ಧ ನಿಲ್ಲಬೇಕು ಅನ್ನೋದೆ ಜಗತ್ತಿನ ಆಶಯ. ಅದ್ರಲ್ಲೂ ಈ ಯುದ್ಧದ ಪರಿಣಾಮ ಈಗಾಗಲೇ ಸಾವಿರಾರು ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಹೀಗಿದ್ದಾಗ ಆದಷ್ಟು ಬೇಗ ಯುದ್ಧ ನಿಲ್ಲಿಸಿದ್ರೆ ಮತ್ತಷ್ಟು ಸಾಮಾನ್ಯ ಜನರ ಜೀವ ಉಳಿಯುತ್ತದೆ, ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಹೀಗಾಗಿ ಅಮೆರಿಕ ಅಧ್ಯಕ್ಷ ಬೈಡನ್ ಅವರ ಹೇಳಿಕೆ ಈಗ ಭಾರಿ ಮಹತ್ವ ಪಡೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+