ಅಮೆರಿಕ ಅಧ್ಯಕ್ಷರ ಮಹಾ ಎಡವಟ್ಟು: ಉಕ್ರೇನ್ ಅಧ್ಯಕ್ಷರಿಗೆ ‘ಪುಟಿನ್’ ಎಂದು ಕರೆದ ಜೋ ಬೈಡನ್!
ಅಮೆರಿಕ ಅಧ್ಯಕ್ಷ ಜೋ ಬೈಡನ್ ಪದೇ ಪದೇ ಎಡವಟ್ಟು ಮಾತುಗಳ ಮೂಲಕ ಸುದ್ದಿಯಲ್ಲಿ & ಸದ್ದಿನಲ್ಲಿ ಇರುತ್ತಾರೆ. ಅದರಲ್ಲೂ ರಷ್ಯಾ & ಉಕ್ರೇನ್ ಯುದ್ಧದ ವಿಚಾರದಲ್ಲಿ ಜೋ ಬೈಡನ್‌ರ ನಿರ್ಧಾರ ಸರಿಯಾಗಿಲ್ಲ ಎಂಬ ಆಕ್ರೋಶ ಸ್ವತಃ ಅಮೆರಿಕದ ನೆಲದಲ್ಲೇ ಈಗ ಕೇಳಿಬರುತ್ತಿದೆ. ಈ ಸಮಯದಲ್ಲೇ ಉಕ್ರೇನ್ ಅಧ್ಯಕ್ಷರ ವಿಚಾರದಲ್ಲಿ ಜೋ ಬೈಡನ್ ಮಹಾನ್ ಎಡವಟ್ಟು ಒಂದನ್ನ ಮಾಡಿಕೊಂಡಿದ್ದಾರೆ. ಈ ಮೂಲಕ ಮತ್ತೆ ಜಗತ್ತಿನಾದ್ಯಂತ ಬೈಡನ್ ಚರ್ಚೆಯ ವಿಷಯವಾಗಿದ್ದಾರೆ.
ಜೋ ಬೈಡನ್ ಅವರಿಗೆ ಮರೆಯುವ ಕಾಯಿಲೆ ಇದೆ, ಪದೇ ಪದೇ ಇಂತಹದ್ದೇ ಎಡವಟ್ಟುಗಳನ್ನ ಬೈಡನ್ ಮಾಡಿಕೊಳ್ಳುತ್ತಲೇ ಇರುತ್ತಾರೆ ಎಂಬುದು ವಿರೋಧಿಗಳ ಆರೋಪ. ಈ ಆರೋಪಗಳಿಗೆ ಪುಷ್ಠಿ ನೀಡುವಂತೆ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಕೂಡ ಪದೇ ಪದೇ ಈ ರಿತಿಯಾಗಿ ಹೇಳಿಕೆ ನೀಡುತ್ತಲೇ ಇರುತ್ತಾರೆ. ಆದರೆ ಇದೀಗ ಜಗತ್ತಿನ ಎದುರು ಮತ್ತೊಮ್ಮೆ ಅಮೆರಿಕದ ಮಾನ ಹರಾಜು ಆಗುವ ರೀತಿ ಹೇಳಿಕೆ ನೀಡಿದ್ದಾರೆ ಬೈಡನ್. ಹಾಗಾದ್ರೆ ಇದೀಗ, ಉಕ್ರೇನ್ ಅಧ್ಯಕ್ಷನ ಬಗ್ಗೆ ಜೋ ಬೈಡನ್ ಹೇಳಿದ್ದು ಏನು? ಮುಂದೆ ಓದಿ.

ಯುದ್ಧ ನಿಲ್ಲಿಸುವುದು ಬಿಟ್ಟು...
ರಷ್ಯಾ VS ಉಕ್ರೇನ್ ನಡುವೆ ಯುದ್ಧ ಶುರುವಾಗಿ ಬರೋಬ್ಬರಿ 2.5 ವರ್ಷವೇ ಕಳೆದು ಹೋಗುತ್ತಿದೆ. ಹೀಗಿದ್ದರೂ ರಷ್ಯಾ ಅಥವಾ ಉಕ್ರೇನ್ ಇಬ್ಬರಲ್ಲಿ ಒಬ್ಬರಾದರೂ ಮಾತುಕತೆ ನಡೆಸುತ್ತಿಲ್ಲ. ಹೀಗೆ ಇಬ್ಬರ ನಡುವೆ ಬೆಂಕಿ ಹೊತ್ತಿಕೊಂಡ ಸಮಯದಲ್ಲೇ ಅಮೆರಿಕ ಮಧ್ಯ ಪ್ರವೇಶ ಮಾಡಿ, ಉಕ್ರೇನ್ ಪರವಾಗಿ ಬ್ಯಾಟ್ ಬೀಸುತ್ತಿದೆ.
ಈ ರೀತಿ ಉಕ್ರೇನ್ ಪರವಾಗಿ ಮಾತನಾಡುವಾಗಲೇ, ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಹಾನ್ ಎಡವಟ್ಟು ಮಾಡಿಕೊಂಡಿದ್ದಾರೆ. ಅದು ಏನೆಂದರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರನ್ನ ಪುಟಿನ್ ಎಂದು ಕರೆದು ಎಡವಟ್ಟು ಮಾಡಿದ್ದಾರೆ ಅಮೆರಿಕ ಹಾಲಿ ಅಧ್ಯಕ್ಷ ಜೋ ಬೈಡನ್. ಈ ವಿಡಿಯೋ ಇದೀಗ ಫುಲ್ ವೈರಲ್ ಆಗುತ್ತಿದ್ದು, ಬೈಡನ್ ಅವರಿಗೆ ಆರೋಗ್ಯ ಸರಿ ಇಲ್ವಾ ಅಂತಾ ಟ್ರೋಲ್ ಕೂಡ ಮಾಡುತ್ತಿದ್ದಾರೆ ಬೈಡನ್ ವಿರೋಧಿಗಳು.
ಚೀನಾಗೆ ಎಚ್ಚರಿಕೆ ನೀಡಿದ ಅಮೆರಿಕ
ಉಕ್ರೇನ್ ವಿಚಾರದಲ್ಲಿ ಮಧ್ಯಪ್ರವೇಶ ಮಾಡುತ್ತಿರುವ ಅಮೆರಿಕ ಒಂದಲ್ಲ ಒಂದು ರೀತಿ ಎಡವಟ್ಟು ಮಾಡಿಕೊಳ್ಳುತ್ತಲೇ ಇದೆ. ಅದರಲ್ಲೂ ಚೀನಾಗೆ ಇದೀಗ ಉಕ್ರೇನ್ & ರಷ್ಯಾ ಯುದ್ಧದ ವಿಚಾರ ಪ್ರಸ್ತಾಪ ಮಾಡಿ ವಾರ್ನಿಂಗ್ ಕೊಟ್ಟಿದೆ ಅಮೆರಿಕ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾ ಸೇನೆಗೆ ಸಹಾಯ ಮಾಡುತ್ತಿದೆ ಎಂಬ ಆರೋಪದ ಹಿನ್ನೆಲೆ ಚೀನಾ ವಿರುದ್ಧ ಇದೀಗ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆಯ ಮಾತುಗಳನ್ನ ಆಡಿದ್ದಾರೆ.
ಅಮೆರಿಕ & ಚೀನಾ ನಡುವೆ ಆರ್ಥಿಕ ಸಂಬಂಧ ಇದೀಗ ಗಟ್ಟಿಯಾಗಿದೆ. ಆದರೆ ರಷ್ಯಾಗೆ ಸಹಾಯ ಮಾಡಿದರೆ ಚೀನಾ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದಿದ್ದಾರೆ, ಅಮೆರಿಕ ಅಧ್ಯಕ್ಷ ಜೋ ಬೈಡನ್. ಹಾಗೆ ಐರೋಪ್ಯ ಒಕ್ಕೂಟದ ದೇಶಗಳು ಭವಿಷ್ಯದಲ್ಲಿ ಪೂರ್ವ ಏಷ್ಯಾ ದೇಶದಲ್ಲಿ ಹೂಡಿಕೆ ಕಡಿತಗೊಳಿಸಲಿವೆ ಎಂದು ಪರೋಕ್ಷವಾಗಿ ಚೀನಾಗೆ ಎಚ್ಚರಿಕೆ ಸಂದೇಶ ನೀಡಿದ್ದಾರೆ ಬೈಡನ್.












Click it and Unblock the Notifications