Donald Trump: ರಷ್ಯಾ ಅಧ್ಯಕ್ಷ ಪುಟಿನ್ ಜೊತೆಗೂ ಅಮೆರಿಕ ಅಧ್ಯಕ್ಷ ಟ್ರಂಪ್ ಕಿರಿಕ್!
ಅಮೆರಿಕ
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮನಸ್ಸಿಗೆ ಬಂದಂತೆ ತೆರಿಗೆ ಹೇರಿಕೆ ಮಾಡುತ್ತಾ, ಇಡೀ ಜಗತ್ತಿನ ಹಲವು ದೇಶಗಳ ಜೊತೆಗೆ ಭಾರಿ ದೊಡ್ಡ ಕಿರಿಕ್ ಮಾಡುತ್ತಿದ್ದಾರೆ ಅನ್ನೋ ಆರೋಪ ಇದೆ. ಅದರಲ್ಲೂ ಈ ಪೈಕಿ ಭಾರತ ಸೇರಿದಂತೆ ಅಮೆರಿಕ ಜೊತೆಗೆ ಹಲವು ವರ್ಷಗಳಿಂದ ಉತ್ತಮ ವ್ಯಾಪಾರ ಸಂಬಂಧ ಹೊಂದಿದ್ದ ದೊಡ್ಡ ದೊಡ್ಡ ದೇಶಗಳ ಜೊತೆಯಲ್ಲೂ ಟ್ರಂಪ್ ಕಿರಿಕ್ ಮಾಡಿದ್ದಾರೆ. ಇದರ ಜೊತೆಗೆ ತಮ್ಮ ಆಪ್ತ ಗೆಳೆಯ ಅಂತಾ ಕರೆಯುತ್ತಿದ್ದ ರಷ್ಯಾ ಅಧ್ಯಕ್ಷ ಪುಟಿನ್ ಜೊತೆ ಕೂಡ ಡೊನಾಲ್ಡ್ ಟ್ರಂಪ್ ವಿವಾದದ ಹೊಗೆಯನ್ನ ಈಗ ಎಬ್ಬಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. id="toptextpromo"> id='are-slot-1' class='oiad oi-axt oiadv'> id='top-searched-articles'>ಹೌದು,
ಡೊನಾಲ್ಡ್ ಟ್ರಂಪ್ ಅವರು ಇದೀಗ ಹೇರಿಕೆ ಮಾಡುತ್ತಿರುವ ತೆರಿಗೆ ಭಾರಿ ದೊಡ್ಡ ಕಾಂಟ್ರವರ್ಸಿಗೆ ಕಾರಣವಾಗಿದೆ. ಅದರಲ್ಲೂ ಡೊನಾಲ್ಡ್ ಟ್ರಂಪ್ ಅವರು ಯುರೋಪ್, ಕೆನಡಾ ಸೇರಿದಂತೆ ದೊಡ್ಡ ದೊಡ್ಡ ಒಕ್ಕೂಟಗಳ ಜೊತೆಗೆ ಕೂಡ ಕಿರಿಕ್ ಮಾಡಿದ್ದಾರೆ ಎಂಬ ಆರೋಪ ಇದೆ. ಭಾರತದ ಜೊತೆಗೆ ಕೂಡ ಇದೇ ರೀತಿ ಕಿರಿಕ್ ಮಾಡಿ, ಭಾರತದ ಶತ್ರು ಪಾಪಿ ಪಾಕಿಸ್ತಾನದ ಜೊತೆಗೆ ಕೈಜೋಡಿಸಿದ್ದಾರೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಇದು ಕೂಡ ಜಾಗತಿಕ ಮಟ್ಟದಲ್ಲಿ ದೊಡ್ಡ ವಿವಾದದ ಬೆಂಕಿ ಹಬ್ಬಿಸಿದೆ. ಇಷ್ಟೆಲ್ಲದರ ನಡುವೆ ಇದೀಗ ಉಕ್ರೇನ್ ಬುಡಕ್ಕೆ ಮತ್ತೊಂದು ಬತ್ತಿ ಇಡಲಾಗಿದೆ ಎಂಬ ಆರೋಪ ಕೇಳಿಬಂದಿದೆ! id='are-slot-2' class='oiad oi-axt oiadv'>












Click it and Unblock the Notifications