ಭಾರತ ಮತ್ತು ಪಾಕಿಸ್ತಾನ ಯುದ್ಧ ವಿಚಾರ ಮತ್ತೆ ಪ್ರಸ್ತಾಪಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ | American President
ಭಾರತ ಮತ್ತು ಪಾಕಿಸ್ತಾನ ಯುದ್ಧ ಒಂದು ಕ್ಷಣ ಇಡೀ ಜಗತ್ತನ್ನೇ ನಲುಗಿಸಿತ್ತು. ಯಾಕಂದ್ರೆ ಎರಡು ಪರಮಾಣು ಅಸ್ತ್ರ ಇರುವ ದೇಶಗಳ ನಡುವೆ ಗಲಾಟೆ ಶುರುವಾದರೆ, ಅದು ಮಹಾನ್ ವಿನಾಶದ ಕಡೆಗೆ ಜಗತ್ತನ್ನು ತೆಗೆದುಕೊಂಡು ಹೋಗುತ್ತದೆ. ಈ ಭಯ ಕಾಡುವಾಗಲೇ ಭಾರತ ಮತ್ತು ಪಾಕಿಸ್ತಾನ ಯುದ್ಧ ದೊಡ್ಡ ಮಟ್ಟಕ್ಕೆ ಹೋಗುವ ಮುನ್ಸೂಚನೆ ಸಿಕ್ಕಿತ್ತು, ಕೊನೆಗೆ ಹಂಗೋ & ಹಿಂಗೋ ದೊಡ್ಡ ದೇಶಗಳ ಕಾಲು ಹಿಡಿದು ಪಾಕಿಸ್ತಾನ ಯುದ್ಧ ನಿಲ್ಲಿಸಿತ್ತು. ಆದರೆ ಇದೇ ವಿಚಾರ ಮುಂದೆ ಇಟ್ಟುಕೊಂಡು ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದೇ ಪದೇ ಭಾರತ & ಪಾಕ್ ಯುದ್ಧ ನಾನೇ ನಿಲ್ಲಿಸಿದ್ದು, ನಾನೇ ನಿಲ್ಲಿಸಿದ್ದು ಅಂತಾರೆ. ಈಗಲೂ ಮತ್ತೆ ಅದೇ ವಿಚಾರ ಪ್ರಸ್ತಾಪಿಸಿ ಟ್ರಂಪ್ ಸುದ್ದಿಯಲ್ಲಿದ್ದಾರೆ.
ಭಾರತದ ತಂಟೆಗೆ ಬಂದಿದ್ದ ಪಾಕಿಸ್ತಾನ ಕೊನೆಗೆ ಸರಿಯಾಗಿ ಏಟು ತಿಂದು ಹೋಗಿತ್ತು, ಭಾರತ ಸೇನೆ ಕೊಟ್ಟ ಏಟಿಗೆ ನಲುಗಿ ಹೋಗಿದ್ದ ಪಾಕಿಸ್ತಾನ ಓಡಿ ಮೂಲೆ ಸೇರಿತ್ತು. ಅಲ್ಲದೇ ಜೀವ ಭಯದಲ್ಲಿದ್ದ ಪಾಕಿಸ್ತಾನ ಕೊನೆಗೆ ಭಾರತದ ಬಳಿ ಬಂದು ಬೇಡಿ ಯುದ್ಧ ನಿಲ್ಲಿಸಿಕೊಂಡು ಹೋಗಿತ್ತು. ಆದರೆ ಹೀಗೆ ಯುದ್ಧ ನಿಂತ ನಂತರ ಇದನ್ನು ನಿಲ್ಲಿಸಿದ್ದು ಅಮೆರಿಕ ಅಂತಾ ಓಳು ಬಿಡುತ್ತಾ ಬಂದಿದೆ. ಮತ್ತೊಂದು ಕಡೆ ಇದಕ್ಕೆ ಧನಿಗೂಡಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಮತ್ತು ಪಾಕಿಸ್ತಾನ ಯುದ್ಧ ನಾನೇ ನಿಲ್ಲಿಸಿದ್ದು ಎಂದು ಪದೇ ಪದೇ ಹೇಳುತ್ತಿದ್ದಾರೆ. ಇದೀಗ ಮತ್ತೊಮ್ಮೆ ಇದೇ ವಿಚಾರ ಹೇಳಿದ್ದು ಚರ್ಚೆಗೆ ಗುರಿಯಾಗಿದೆ.

ಯುದ್ಧ ನಿಲ್ಲಿಸಿದ ಬಗ್ಗೆ ಟ್ರಂಪ್ ಮಾತು
ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ನಂತರ ಸಾಲು, ಸಾಲು ವಿವಾದ ಸೃಷ್ಟಿಯಾಗುತ್ತಿವೆ ಎಂಬ ಆರೋಪ ಇದೆ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರು ಅಧಿಕಾರಕ್ಕೆ ಬಂದು 1 ವರ್ಷವಾಗಿದ್ದು, ಈ ಅವಧಿಯಲ್ಲಿ ಭಾರಿ ದೊಡ್ಡ ಏರುಪೇರು ಉಂಟಾಗಿದೆ. ಅದರಲ್ಲೂ ಅಂತಾರಾಷ್ಟ್ರೀಯ ಸಂಬಂಧಗಳೇ ಬದಲಾಗಿದ್ದು, ಟ್ರಂಪ್ ಅವರ ಹೆಸರನ್ನು ಕೇಳಿದರೆ ಸಾಕು ಸ್ವತಃ ಅಮೆರಿಕದ ಸ್ನೇಹಿತ ದೇಶಗಳೇ ಹೆದರುವ ಸನ್ನಿವೇಶ ಹಾಗೂ ವಾತಾವರಣ ಇದೀಗ ನಿರ್ಮಾಣ ಆಗಿದೆ. ಹೀಗಿದ್ದಾಗ ಭಾರತದ ಬಗ್ಗೆ ಕೂಡ ಪದೇ, ಪದೇ ವಿವಾದ ಸೃಷ್ಟಿ ಮಾಡುವ ಹೇಳಿಕೆ ಕೊಡುತ್ತಿರುವ ಟ್ರಂಪ್ ಅವರು ಈಗ ಮತ್ತೊಮ್ಮೆ ಭಾರತ & ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನು ಎಂದಿದ್ದಾರೆ. ಈ ಮೂಲಕ ಸುಮಾರು 90ನೇ ಬಾರಿಗೆ ಟ್ರಂಪ್ ಅವರು ಈ ವಿಚಾರ ಪ್ರಸ್ತಾಪ ಮಾಡಿದಂತೆ ಆಗಿದೆ.
8 ಯುದ್ಧ ನಿಲ್ಲಿಸಿದ್ದಾರಾ ಟ್ರಂಪ್?
ಅಮೆರಿಕದಲ್ಲಿ ಆಯೋಜನೆ ಮಾಡಿದ್ದ ಉಪಹಾರ ಕೂಟ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ, 1 ವರ್ಷದಲ್ಲಿ ನಾನು 8 ಯುದ್ಧ ಕೊನೆಗೊಳಿಸಿದ್ದೇನೆ ಎಂದಿದ್ದಾರೆ. ಇದೇ ವೇಳೆ ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ಕಾಂಬೋಡಿಯಾ ಮತ್ತು ಥೈಲ್ಯಾಂಡ್, ಕೊಸೊವೊ ಮತ್ತು ಸೆರ್ಬಿಯಾ, ಇಸ್ರೇಲ್ & ಇರಾನ್, ಅರ್ಮೇನಿಯಾ ಮತ್ತು ಅಜೆರ್ಬೈಜಾನ್ ಹೆಸರು ಪ್ರಸ್ತಾಪ ಮಾಡಿದ್ದಾರೆ. ಟ್ರಂಪ್ ಅವರು ಎಷ್ಟು ಬಾರಿ ಈ ರೀತಿ ಹೇಳಿದರೂ ಭಾರತ ಮಾತ್ರ ಅದಕ್ಕೆ ತಕ್ಕ ತಿರುಗೇಟು ನೀಡುತ್ತಾ ಬಂದಿದೆ, ಈಗಾಗಲೇ ಇದೇ ವಿಚಾರವಾಗಿ ಭಾರತ ಸ್ಪಷ್ಟನೆ ಕೊಟ್ಟು ಯುದ್ಧ ನಿಲ್ಲಿಸಿದ್ದು ಯಾರೂ ಅಲ್ಲ. 3ನೇ ವ್ಯಕ್ತಿಯಿಂದ ಯುದ್ಧ ನಿಂತಿಲ್ಲ ಎಂದು ಟ್ರಂಪ್ ಅವರ ಹೇಳಿಕೆಗೆ ತಿರುಗೇಟು ನೀಡಿದೆ. ಹೀಗಿದ್ದರೂ ಅಮೆರಿಕ ಅಧ್ಯಕ್ಷರು ಮಾತ್ರ ಪದೇ ಪದೇ ಕಿರಿಕ್ ಮಾಡುವ ಹೇಳಿಕೆ ನೀಡುತ್ತಿದ್ದಾರೆ ಎಂಬ ಚರ್ಚೆ ಶುರುವಾಗಿದೆ.












Click it and Unblock the Notifications