ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಭೇಟಿ: ಸ್ವಾಗತಕ್ಕಾಗಿ ಭರ್ಜರಿ ಸಿದ್ಧತೆ ನಡೆಸಿದ ಅಮೆರಿಕ!

ಅಮೆರಿಕ ಮತ್ತೊಮ್ಮೆ ಭಾರತದ ಜೊತೆಗಿನ ಅತ್ಯುತ್ತಮ ಸಂಬಂಧವನ್ನು ಜಗತ್ತಿಗೆ ಸಾರಿ, ಸಾರಿ ಹೇಳಲು ಸಿದ್ಧತೆ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ 'ಕ್ವಾಡ್' ಶೃಂಗಸಭೆಗಾಗಿ ಅಮೆರಿಕದ ಅಂಗಳಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಅಮೆರಿಕದ ನಾಯಕರು ಕೂಡ ಸಕಲ ಸಿದ್ಧತೆಗಳ ನಡೆಸಿದ್ದಾರೆ. ಹಾಗಾದ್ರೆ ಪ್ರಧಾನಿ ನರೇಂದ್ರ ಮೋದಿ ಅವರು 'ಕ್ವಾಡ್' ಶೃಂಗಸಭೆಗೆ ಅಂತಾ ಅಮೆರಿಕಗೆ ಭೇಟಿ ನೀಡಿದಾಗ ಕೈಗೊಳ್ಳಲಿರುವ ಪ್ರಮುಖ ನಿರ್ಧಾರಗಳು ಯಾವುವು? ರಷ್ಯಾ & ಉಕ್ರೇನ್ ಯುದ್ಧದ ಈ ಸಮಯದಲ್ಲೇ ಭಾರತಕ್ಕೆ ಇಷ್ಟೊಂದು ಡಿಮ್ಯಾಂಡ್ ಯಾಕೆ? ಬನ್ನಿ ತಿಳಿಯೋಣ.

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕಗೆ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ಭಾರತ ದೇಶದ ಶತ್ರುಗಳ ಕಣ್ಣು ಈಗ ಆ ಕಡೆಯೇ ನೆಟ್ಟಿದೆ. ಇಂದು ಜಗತ್ತಿನ ದೊಡ್ಡಣ್ಣ ಅಮೆರಿಕದ ನೆಲಕ್ಕೆ ಎಂಟ್ರಿ ಕೊಡಲಿರುವ ಪ್ರಧಾನಿ ಮೋದಿ ಅವರು, ಮೊದಲಿಗೆ 'ಕ್ವಾಡ್' ಶೃಂಗಸಭೆಯ ಭಾಗವಾಗಲಿದ್ದಾರೆ. ಜೋ ಬೈಡನ್‌ರ ತವರು & ಸ್ವಂತ ಮನೆಯಲ್ಲಿಯೇ ಈ ಸಭೆ ಆಯೋಜನೆ ಮಾಡಲಾಗಿದೆ. ಆಸ್ಟ್ರೇಲಿಯಾ, ಜಪಾನ್ ಪ್ರಧಾನಿಗಳ ಜೊತೆಯಲ್ಲಿ ಭಾರತದ ಪ್ರಧಾನಿ ಮೋದಿ ಅವರು 'ಕ್ವಾಡ್' ಶೃಂಗಸಭೆಯಲ್ಲಿ ಭಾಗವಹಿಸುವರು. 6ನೇ 'ಕ್ವಾಡ್' ಶೃಂಗಸಭೆ ಇದಾಗಿದ್ದು, ಜೋ ಬೈಡನ್ ಅವರ ಕೊನೆಯ ಶೃಂಗಸಭೆ ಆಗಿದೆ. ಯಾಕಂದ್ರೆ ಈಗಾಗಲೇ ರಾಜಕೀಯದಿಂದ ಜೋ ಬೈಡನ್ ನಿವೃತ್ತಿ ಘೋಷಣೆ ಮಾಡಿದ್ದಾರೆ.

American Leaders Preparing To Welcome India PM Narendra Modi

ಸಿಇಒ ಸಭೆಯಲ್ಲಿ ಪ್ರಧಾನಿ ಭಾಗಿ

'ಕ್ವಾಡ್' ಶೃಂಗಸಭೆ ಮುಗಿಸಿದ ನಂತರ ನ್ಯೂಯಾರ್ಕ್‌ಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿ ಅವರು, ಹಲವು ಕಂಪನಿಗಳ ಸಿಇಒ ಜೊತೆಯಲ್ಲಿ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಪ್ರಧಾನಿ ಮೋದಿ ಅವರು ತಮ್ಮ 3 ದಿನಗಳ ಅಮೆರಿಕ ಭೇಟಿಯ ಕೊನೆಯ ದಿನ ವಿಶ್ವಸಂಸ್ಥೆಗೆ ಕೂಡ ಭೇಟಿ ನೀಡುವರು. ಅಲ್ಲಿ ವಿಶೇಷ ಚರ್ಚೆಯಲ್ಲಿ ಪ್ರಧಾನಿ ಮೋದಿ ಅವರು ಭಾಗವಹಿಸಲಿದ್ದು, ನರೇಂದ್ರ ಮೋದಿ ಅವರ ಈ ಭೇಟಿಯು ಸಾಕಷ್ಟು ಗಮನ ಸೆಳೆದಿದೆ. ಅದರಲ್ಲೂ ಉಕ್ರೇನ್ VS ರಷ್ಯಾ ಯುದ್ಧ ನಡೆಯುವ ಸಮಯದಲ್ಲಿ ಭಾರತದ ಪ್ರಧಾನಿ ಮೋದಿ ಅವರು ಮತ್ತೊಮ್ಮೆ ಅಮೆರಿಕಗೆ ಭೇಟಿ ನೀಡುತ್ತಿರುವುದು ಸಹಜವಾಗಿ ಜಗತ್ತಿನ ಗಮನ ಸೆಳೆದಿದೆ.

'ಕ್ವಾಡ್‌' ಮೀಟಿಂಗ್‌ಗೆ ಬರುವವರು ಇವರು!

ಜೋ ಬೈಡನ್‌ ಆಯೋಜನೆ ಮಾಡಿರುವ 'ಕ್ವಾಡ್‌' ರಾಷ್ಟ್ರಗಳ ಶೃಂಗಸಭೆಗೆ ಭಾರತ ಸೇರಿದಂತೆ, ಆಸ್ಟ್ರೇಲಿಯಾ, ಜಪಾನ್‌ನ ಪ್ರಧಾನ ಮಂತ್ರಿಗಳು ಭಾಗವಹಿಸುವರು. ಆಸ್ಟ್ರೇಲಿಯಾದ ಪ್ರಧಾನಿ ಆಂಥೋನಿ ಅಲ್ಬನೀಸ್‌ ಹಾಗೂ ಜಪಾನ್‌ನ ಪ್ರಧಾನಿ ಫ್ಯುಮಿಯೊ ಕಿಶಿಡಾ ಈ ಸಭೆಗೆ ಹಾಜರ್ ಆಗಲಿದ್ದಾರೆ. ಹಾಗೇ ಭಾರತದ ಪರ ಖುದ್ದಾಗಿ, ಪ‍್ರಧಾನಿ ನರೇಂದ್ರ ಮೋದಿ ಅವರೆ ಅಮೆರಿಕಗೆ ತೆರಳಿ ಶೃಂಗಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಹೀಗಾಗಿ, ಜಗತ್ತಿನ ಕಣ್ಣು ಈಗ ಅಮೆರಿಕದ ಈ ಸಭೆ ಮೇಲೆ ಕೇಂದ್ರಿಕೃತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+