ಅಮೆರಿಕ ಪತ್ರಕರ್ತನಿಗೆ ರಷ್ಯಾದಲ್ಲಿ ಭಾರಿ ಸಂಕಷ್ಟ?
ಅಮೆರಿಕ & ರಷ್ಯಾ ನಡುವೆ ಸಂಘರ್ಷ ಜೋರಾಗಿದ್ದು, ಇಬ್ಬರೂ ಒಬ್ಬರ ಮೇಲೊಬ್ಬರು ಕತ್ತಿ ಮಸೆಯುತ್ತಿದ್ದಾರೆ. ಕಳೆದ 50ಕ್ಕೂ ಹೆಚ್ಚು ವರ್ಷಗಳಿಂದ ಇಬ್ಬರ ನಡುವೆ ತಿಕ್ಕಾಟ ಇದ್ದು, ಉಕ್ರೇನ್ ವಿರುದ್ಧ ರಷ್ಯಾ ಯುದ್ಧ ಶುರು ಮಾಡಿದ ನಂತರ ಮತ್ತಷ್ಟು ಜೋರಾಗಿದೆ. ಇದೇ ಸಮಯದಲ್ಲಿ ಅಮೆರಿಕ ಮೂಲದ ಪತ್ರಕರ್ತನಿಗೆ ರಷ್ಯಾದಲ್ಲಿ ಜೈಲೂಟದ ರುಚಿ ತೋರಿಸಲಾಗಿದೆ.
ರಷ್ಯಾ & ಉಕ್ರೇನ್ ಯುದ್ಧ ಶುರುವಾದ ನಂತರ ಜಗತ್ತಿನಲ್ಲಿ 3ನೇ ಮಹಾಯುದ್ಧದ ಭೀತಿ ಆವರಿಸಿದೆ. ಆ ಕಡೆ ಅಮೆರಿಕ ಪರೋಕ್ಷವಾಗಿ ಉಕ್ರೇನ್ ಬೆನ್ನಿಗೆ ನಿಂತಿದೆ ಎಂಬ ಗಂಭೀರ ಆರೋಪ ಇದೆ. ಮತ್ತೊಂದು ಕಡೆ ರಷ್ಯಾ ಕೂಡ ಉತ್ತರ ಕೊರಿಯಾ & ಚೀನಾ ಮೂಲಕ ಸಹಾಯ ಪಡೆದು ಯುದ್ಧ ಮುಂದುವರಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಹೀಗೆಲ್ಲಾ ಫೈಟಿಂಗ್ ನಡೆಯುವ ಸಮಯದಲ್ಲೇ, ಅಮೆರಿಕ ಮೂಲದ ಪತ್ರಕರ್ತನ ವಿರುದ್ಧ ರಷ್ಯಾ ಗಂಭೀರ ಆರೋಪ ಮಾಡಿದೆ. ಅಮೆರಿಕ ಪರವಾಗಿ ರಷ್ಯಾದ ನೆಲದಲ್ಲಿ ಬೇಹುಗಾರಿಕೆಯನ್ನ ನಡೆಸಿದ ಆರೋಪದ ಹಿನ್ನೆಲೆ ಇವಾನ್ ಗೆರ್ಶ್ಕೋವಿಚ್ ಎಂಬಾತನ ಬಂಧಿಸಲಾಗಿದೆ.

ಟ್ಯಾಂಕರ್ ತಂತ್ರಜ್ಞಾನ ಕಳವಿಗೆ ಯತ್ನ?
ಇವಾನ್ ಗೆರ್ಶ್ಕೋವಿಚ್ ವಿರುದ್ಧ ರಷ್ಯಾ ಗಂಭೀರ ಆರೋಪ ಹೊರಿಸಿದ್ದು, ಅದು ಏನು ಅಂದ್ರೆ ಈಗ ಉಕ್ರೇನ್ ವಿರುದ್ಧ ಯುದ್ಧ ನಡೆಸುತ್ತಿರುವ ರಷ್ಯಾಗೆ ಟ್ಯಾಂಕರ್ ಉತ್ಪಾದನೆ ಮಾಡಿ ಕೊಡುತ್ತಿರುವ ಸಂಸ್ಥೆ ಬಗ್ಗೆ ಬೇಹುಗಾರಿಕೆ ನಡೆಸಿರುವುದು. ಈ ಆರೋಪದ ಅರ್ಥ, ಪರೋಕ್ಷವಾಗಿ ಟ್ಯಾಂಕರ್ ತಂತ್ರಜ್ಞಾನ ಕಳವು ಮಾಡುವುದೇ ಆಗಿದೆ ಎನ್ನಬಹುದು. ಹೀಗೆ, ರಷ್ಯಾ ಗುಪ್ತವಾಗಿ ವಿಚಾರಣೆ ನಡೆಸುತ್ತಿರುವ ಬಗ್ಗೆ ಮಾಹಿತಿ ನೀಡ್ತಿದೆ. ಈ ಬಗ್ಗೆ ಇದೀಗ ಅಮೆರಿಕ ಆಕ್ರೋಶ ಹೊರಹಾಕುತ್ತಿದೆ.
ಇದೆಲ್ಲಾ ಸುಳ್ಳು ಅಂತಿದೆ ಅಮೆರಿಕ
ಹೀಗೆ ರಷ್ಯಾ ಗಂಭೀರ ಆರೋಪ ಹೊರಿಸಿರುವ ಸಮಯದಲ್ಲೇ ಈ ಆರೋಪದ ಕುರಿತು ಅಮೆರಿಕ ಪ್ರತಿಕ್ರಿಯೆ ನೀಡಿದ್ದು ಇದೆಲ್ಲಾ ಸುಳ್ಳು ಅನ್ನುತ್ತಿದೆ. ಆದರೆ ರಷ್ಯಾ ತನ್ನ ಬಳಿ ಸಾಕ್ಷಿ ಇದೆ ಎನ್ನುತ್ತಿದೆ. ಇಬ್ಬರ ತಿಕ್ಕಾಟದ ನಡುವೆ ಅಮೆರಿಕ ಮೂಲದ ಪತ್ರಕರ್ತನಿಗೆ ಶಿಕ್ಷೆ ಆಗುವ ಭಯ ಆವರಿಸಿದೆ. ಅಕಸ್ಮಾತ್ ಇವಾನ್ ಗೆರ್ಶ್ಕೋವಿಚ್ ವಿರುದ್ಧ ರಷ್ಯಾದ ಅಧಿಕಾರಿಗಳು ಹೊರಿಸಿರುವ ಗಂಭೀರ ಆರೋಪ ಸಾಬೀತು ಮಾಡಿದರೆ ಕನಿಷ್ಠ 20 ವರ್ಷ ಶಿಕ್ಷೆ ಆಗುವ ಸಾಧ್ಯತೆ ಇದೆ.
ಅಮೆರಿಕ ಈ ಪ್ರಕರಣದ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿದ್ದು, ಸುಖಾಸುಮ್ಮನೆ ಹೀಗೆ ರಷ್ಯಾ ಆರೋಪ ಮಾಡುತ್ತಿದೆ. ಆದರೆ ಬಂಧಿತ ಪತ್ರಕರ್ತ ತನ್ನ ಕೆಲಸ ಮಾಡುತ್ತಿದ್ದರು ಎಂದು ಹೇಳಿದೆ. ಇದೀಗ ಗುಪ್ತವಾಗಿ ಅಮೆರಿಕ ಮೂಲದ ಪತ್ರಕರ್ತನ ವಿಚಾರಣೆಯನ್ನ ನಡೆಸಿರುವ ರಷ್ಯಾ ನ್ಯಾಯಾಲಯ, ಆಗಸ್ಟ್ 13ಕ್ಕೆ ವಿಚಾರಣೆ ಮುಂದೂಡಿದೆ. ಹೀಗಾಗಿ ಅಮೆರಿಕ ಮೂಲದ ಪತ್ರಕರ್ತನಿಗೆ ಜೈಲೂಟವೇ ಅನಿವಾರ್ಯ ಆಗಿದೆ.












Click it and Unblock the Notifications