Israel: ಇಸ್ರೇಲ್ ಬೆನ್ನಿಗೆ ನಿಂತ ಅಮೆರಿಕ ಮತ್ತೊಮ್ಮೆ ಘೋಷಿಸಿದ್ದು ಏನು?
ಇಸ್ರೇಲ್ ಬೆನ್ನಿಗೆ ಸದಾ ನಿಲ್ಲುವ ಅಮೆರಿಕ ಮತ್ತೊಮ್ಮೆ ಮಹತ್ವದ ಹೇಳಿಕೆ ನೀಡಿದೆ. ಇದರ ಬಗ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇದೀಗ ಮಹತ್ವದ ಮಾಹಿತಿ ನೀಡಿದ್ದಾರೆ. ಅದ್ರಲ್ಲೂ ಲೆಬನಾನ್ & ಗಾಜಾ ವಿರುದ್ಧ ಇಸ್ರೇಲ್ ಸೇನೆ ಭೀಕರ ಯುದ್ಧ ನಡೆಸುತ್ತಿರುವ ಸಮಯದಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡನ್ ನೀಡಿರುವ ಹೇಳಿಕೆ ತಲ್ಲಣ ಸೃಷ್ಟಿ ಮಾಡಿದೆ. ಹಾಗಾದರೆ, ಸಂಕಷ್ಟದ ಸುಳಿಗೆ ಸಿಲುಕಿರುವ ಇಸ್ರೇಲ್‌ಗೆ ಅಮೆರಿಕ ಹೇಳಿದ ಮಾತು ಏನು? ಅಮೆರಿಕದ ಈ ಮಾತಿನಿಂದ ಇಸ್ರೇಲ್ ಸೇನೆಗೆ ಮತ್ತಷ್ಟು ಧೈರ್ಯ ಬರಲಿದೆಯಾ? ಬನ್ನಿ ತಿಳಿಯೋಣ.
ಇಸ್ರೇಲ್ ಇದೀಗ ಮಧ್ಯ ಪ್ರಾಚ್ಯದಲ್ಲಿ ಘೋರ ಯುದ್ಧ ನಡೆಸುತ್ತಿದ್ದು, ಗಾಜಾ ಪಟ್ಟಿ ಸೇರಿದಂತೆ ಲೆಬನಾನ್, ಸಿರಿಯಾ, ಇರಾನ್ ಜೊತೆಯಲ್ಲಿ ಕೂಡ ಕಿರಿಕ್ ಮಾಡಿಕೊಂಡಿದೆ ಇಸ್ರೇಲ್ ಸೇನೆ. ಹೀಗಿದ್ದಾಗ ಲೆಬನಾನ್ ವಿರುದ್ಧ ಭೂ ಸೇನೆಯನ್ನೂ ನುಗ್ಗಿಸಿರುವ ಇಸ್ರೇಲ್ ಮಿಲಿಟರಿ ಭಾರಿ ಘೋರ ಕಾರ್ಯಾಚರಣೆ ನಡೆಸುತ್ತಿದೆ. ಇಂತಹ ಸಮಯದಲ್ಲಿ ಒಂಟಿಯಾಗಿ ಬಡಿದಾಡ್ತಿರುವ ಇಸ್ರೇಲ್ ಸೇನೆಗೆ ಇದೀಗ ಅಮೆರಿಕ ಧೈರ್ಯ ತುಂಬುತ್ತಿದೆ. ಅದರಲ್ಲೂ ಕೈಯಲ್ಲಿ ಅಸ್ತ್ರಗಳೇ ಇಲ್ಲದೆ ಇಸ್ರೇಲಿ ಮಿಲಿಟರಿ ಪರದಾಡುವ ಸಮಯದಲ್ಲೂ ಸಾಕಷ್ಟು ಬಾಂಬ್ & ಮಿಸೈಲ್‌ಗಳ ರಾಶಿಯನ್ನೇ ಇದೀಗ ಅಮೆರಿಕ ಸಹಾಯ ಮಾಡುತ್ತಿದೆ. ಈ ಸಮಯದಲ್ಲೇ ದಿಢೀರ್ ಇಸ್ರೇಲ್ ಪ್ರಧಾನಿಗೆ ಫೋನ್ ಮಾಡಿರುವ ಅಮೆರಿಕ ಅಧ್ಯಕ್ಷ ಬೈಡನ್ ಹೇಳಿದ್ದು ಏನು?

ಬೈಡನ್ ನಡೆಯಿಂದ ತೀವ್ರ ಕುತೂಹಲ
ಅಂದಹಾಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು ಜೊತೆ ಫೋನ್ ಮೂಲಕ ಮಾತನಾಡಿ ಮಾಹಿತಿ ಪಡೆದಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಇಸ್ರೇಲ್‌ಗೆ ಈಗ ಬೆಂಬಲದ ಮಾತು ಹೇಳಿದ್ದಾರೆ. ಅಲ್ಲದೆ ಇಸ್ರೇಲ್ ಭದ್ರತೆಗೆ ಅಮೆರಿಕದ ಅಚಲ ಬದ್ಧತೆಯನ್ನು ಕೂಡ ಬೈಡನ್, ಇದೇ ಸಮಯದಲ್ಲಿ ಮತ್ತೆ ಪ್ರಸ್ತಾಪ ಮಾಡಿದ್ದಾರೆ. ಹಾಗೇ ಇಸ್ರೇಲ್ ಇದೀಗ ಗಾಜಾ ಪಟ್ಟಿಯ ವಿರುದ್ಧ ಯುದ್ಧ ನಡೆಸುತ್ತಿರುವಾಗಲೇ, ಇಸ್ರೇಲ್ ಪರ ಮಾತನಾಡಿದ್ದಾರೆ ಅಮೆರಿಕ ಅಧ್ಯಕ್ಷ. ಗಾಜಾದ ವಿರುದ್ಧ ಯುದ್ಧ ಶುರುವಾಗಿ ಒಂದು ವರ್ಷ ಕಳೆದ ಸಮಯದಲ್ಲೇ ಈ ರೀತಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮಾತನಾಡಿರುವುದು ತೀವ್ರ ಕುತೂಹಲ ಕೂಡ ಕೆರಳಿಸಿದೆ.
ಹೆಚ್ಚಾಗುತ್ತಿದೆ ಯುದ್ಧದ ತೀವ್ರತೆ...
ಒಟ್ನಲ್ಲಿ ಇಸ್ರೇಲ್ ಪರವಾಗಿ ಇದೀಗ ಅಮೆರಿಕ ನೇರವಾಗಿ ಮತ್ತು ನಿರ್ಭೀತಿಯಿಂದ ಬೆಂಬಲ ಘೋಷಣೆ ಮಾಡಿದೆ. ಅಲ್ಲದೆ ಈ ವಿಚಾರದಲ್ಲಿ ಅಂದ್ರೆ ಗಾಜಾ ಸೇರಿದಂತೆ ಲೆಬನಾನ್ ಮತ್ತು ಇರಾನ್ ವಿರುದ್ಧ ತಿಕ್ಕಾಟ ನಡೆಸುತ್ತಿರುವ ಇಸ್ರೇಲ್ ವಿಚಾರದಲ್ಲಿ ಅಮೆರಿಕ ಸಪೋರ್ಟ್ ಮಾಡಿ ಮಾತನಾಡಿದೆ. ಮುಂದಿನ ದಿನಗಳಲ್ಲಿ ಇಸ್ರೇಲ್‌ಗೆ ಇನ್ನಷ್ಟು ಸೇನಾ ನೆರವು ನೀಡುವ ಬಗ್ಗೆ, ಈ ಮೂಲಕ ಅಮೆರಿಕ ಮುನ್ಸೂಚನೆ ನೀಡಿದಂತೆ ಕಾಣುತ್ತಿದೆ. ಹಾಗೇ ಮಧ್ಯ ಪ್ರಾಚ್ಯದಲ್ಲೀಗ ಯುದ್ಧ ಹೆಚ್ಚಾಗುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ತಿಕ್ಕಾಟ ತೀವ್ರಗೊಳ್ಳುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.












Click it and Unblock the Notifications