Israel: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು & ಅಮೆರಿಕ ಅಧ್ಯಕ್ಷ ಬೈಡನ್...
ಇಸ್ರೇಲ್ & ಇರಾನ್ ನಡುವೆ ದೊಡ್ಡ ಪ್ರಮಾಣದಲ್ಲಿ ಯುದ್ಧ ಆರಂಭವಾಗುವ ಭಯ ಈಗ ಆವರಿಸಿದ್ದು, ಜಗತ್ತಿನಾದ್ಯಂತ ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಲ್ಲೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸಭೆಗಳ ಮೇಲೆ ಸಭೆಗಳ ನಡೆಸುತ್ತಿದ್ದಾರೆ. ಇಸ್ರೇಲ್ ಪಾಲಿನ ಆಪ್ತಮಿತ್ರ ಅಮೆರಿಕ ಜೊತೆಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮೀಟಿಂಗ್ ಮಾಡಿದ್ದು, ಈಗ ಜೋ ಬೈಡನ್ ಜೊತೆಗೆ ಯುದ್ಧದ ತಂತ್ರಗಳನ್ನ ಹೆಣೆಯಲಾಗುತ್ತಿದೆ. ಅದರಲ್ಲೂ ಇರಾನ್‌ಗೆ ಆಧಾರವಾಗಿರುವ ತೈಲ ಘಟಕಗಳನ್ನೇ ಉಡೀಸ್ ಮಾಡಲು ಅಮೆರಿಕ & ಇಸ್ರೇಲ್ ಈಗ....
ಇಸ್ರೇಲ್ ಒಂದು ಬಾರಿ ಶತ್ರುಗಳ ಮೇಲೆ ಸೇಡಿಗೆ ಬಿತ್ತು ಅಂದ್ರೆ ಸೇಡಿಗೆ ಸೇಡು ಗ್ಯಾರಂಟಿ. ಈ ಕಾರಣಕ್ಕೆ ಇದೀಗ ಮಧ್ಯಪ್ರಾಚ್ಯ ಭಾಗದಲ್ಲಿ ದೊಡ್ಡ ಯುದ್ಧ ಆರಂಭವಾಗಿದೆ. ಒಂದು ಕಡೆ ಇಸ್ರೇಲ್ ವಿರುದ್ಧ ಲೆಬನಾನ್, ಇರಾನ್, ಸಿರಿಯಾ ಒಟ್ಟಾಗಿ ದಾಳಿ ಮಾಡಲು ಸಜ್ಜಾಗಿವೆ. ಈ ಸಮಯದಲ್ಲೇ ಇರಾನ್ ನೇರವಾಗಿ ಇಸ್ರೇಲ್ ವಿರುದ್ಧ ಕ್ಷಿಪಣಿಗಳ ಮೂಲಕ ದಾಳಿ ಮಾಡಿದೆ. ಹಾಗೇ ಮತ್ತಷ್ಟು ಘೋರ ದಾಳಿಯ ಬಗ್ಗೆ ಎಚ್ಚರಿಕೆ ನೀಡುತ್ತಿದೆ ಇರಾನ್. ಇಂತಹ ಸಮಯ ಎದುರಾಗಿರುವ ಕಾರಣಕ್ಕೆ, ಇರಾನ್ ಬುಡ ಅಲುಗಾಡಿಸಲು ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಂತಹ ಸಲಹೆ ನೀಡಿದ್ದಾರೆ ಗೊತ್ತಾ?

ಇರಾನ್ ಬುಡ ಅಲುಗಾಡಿಸಲು...
ಮಧ್ಯಪ್ರಾಚ್ಯ ದೇಶಗಳ ಆದಾಯದ ಮೂಲ ಕಚ್ಚಾ ತೈಲ ಅಥವಾ ಪೆಟ್ರೋಲ್ & ಡೀಸೆಲ್. ಅದರಲ್ಲೂ ಇರಾನ್ ದೇಶದಲ್ಲಿ ಪೆಟ್ರೋಲ್ & ಡೀಸೆಲ್ ಇಲ್ಲದೆ ಬದುಕೇ ಇರುವುದಿಲ್ಲ. ಈ ದೇಶದಲ್ಲಿ ಅಂದ್ರೆ ಇರಾನ್ ದೇಶದಲ್ಲಿ ಕಚ್ಚಾ ತೈಲ ಮಾರಾಟ ಮಾಡಿ ಬದುಕು ಸಾಗಿಸುವ ಸ್ಥಿತಿ ಇದೆ. ಹೀಗಿದ್ದಾಗ ಇರಾನ್ ದೇಶಕ್ಕೆ ಆಘಾತ ನೀಡಲು ಇದೀಗ ಅಮೆರಿಕ & ಇಸ್ರೇಲ್‌ನ ನಾಯಕರು ಎಂತಹ ಕಠಿಣ ನಿರ್ಧಾರ ಕೈಗೊಳ್ಳಲು ಮುಂದಾಗಿದ್ದಾರೆ ಗೊತ್ತಾ? ಅಮೆರಿಕದ ಅಧ್ಯಕ್ಷ ಜೋ ಬೈಡನ್ & ಇಸ್ರೇಲ್ ಪ್ರಧಾನಿ ಚರ್ಚೆ ಮಾಡಿರುವುದು ಏನು? ಮುಂದೆ ಓದಿ.
ಇರಾನ್ ದೇಶದ ಮೂಲ ಆದಾಯ...
ಮೊದಲೇ ಹೇಳಿದಂತೆ ಇರಾನ್ ದೇಶ ಬದುಕಲು ಪೆಟ್ರೋಲ್ & ಡೀಸೆಲ್ ನೀಡುವ ಕಚ್ಚಾ ತೈಲ ಉತ್ಪಾದನೆ ಅತ್ಯಗತ್ಯ. ಹೀಗಿದ್ದಾಗ ಇರಾನ್ ದೇಶದ ತೈಲ ಸಂಗ್ರಹಗಾರಗಳ ಮೇಲೆ ದಾಳಿಯ ನಡೆಸಲು ಇಸ್ರೇಲ್ ಜೊತೆಗೆ ಅಮೆರಿಕ ಅಧ್ಯಕ್ಷರು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕೆ ಇದೀಗ ಜಗತ್ತಿನಾದ್ಯಂತ ಭಯ ಶುರುವಾಗಿದ್ದು, ಕಚ್ಚಾ ತೈಲದ ಬೆಲೆ ಮತ್ತೊಮ್ಮೆ ಆಕಾಶ ಮುಟ್ಟಲು ಸಜ್ಜಾಗಿದೆ. ಇದರ ಜೊತೆಗೆ ಅಮೆರಿಕದ ಸಹಾಯ ಪಡೆದು ಇರಾನ್ ಮೇಲೆ ಸೇಡಿಗೆ ಇಸ್ರೇಲ್ ಕಾದಿದೆ ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications