ಈ ದೇಶದಲ್ಲಿ ಇನ್ಮುಂದೆ ಕೊರೊನಾ ಲಸಿಕೆ ಬೇಕಾಗಿಲ್ಲ!

ವಾಷಿಂಗ್ಟನ್‌: ದೊಡ್ಡಣ್ಣ ಎಂಬ ಬಿರುದು ಇದ್ರೂ ಒಂದು ಕಣ್ಣಿಗೆ ಕಾಣದ ವೈರಸ್ ಅಮೆರಿಕ ಎಂಬ ದೈತ್ಯ, ಶ್ರೀಮಂತ ದೇಶವನ್ನು 3 ವರ್ಷ ಕಾಲ ನಲುಗಿಸಿತ್ತು. ಇದೀಗ ಪರಿಸ್ಥಿತಿ ಹಿಡಿತಕ್ಕೆ ಸಿಕ್ಕಿದ್ದು, ಅಮೆರಿಕ ಕೊರೊನಾ ಮುಕ್ತವಾಗುವತ್ತ ಹೆಜ್ಜೆ ಹಾಕುತ್ತಿದೆ. ಇದೇ ಸಂದರ್ಭದಲ್ಲಿ ಕಡ್ಡಾಯ ಕೊರೊನಾ ಲಸಿಕೆ ನೀತಿಯನ್ನು ಮುಂದಿನ ವಾರದಿಂದಲೇ ಕೈಬಿಡಲು ಅಮೆರಿಕ ಸರ್ಕಾರ ನಿರ್ಧರಿಸಿದೆ.

ಅಮೆರಿಕದ ಆಧುನಿಕ ಅಧ್ಯಾಯದಲ್ಲಿ ಕೊರೊನಾ ಬರೋದಕ್ಕೂ ಮೊದಲು ಒಂದು ಲೆಕ್ಕ. ಕೊರೊನಾ ನಂತರ ಮತ್ತೊಂದು ಲೆಕ್ಕ ಎಂಬಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕಂದ್ರೆ ಕೊರೊನಾ ವೈರಸ್ ಕೊಟ್ಟ ಪೆಟ್ಟು ಹಂಗಿತ್ತು. ಆರ್ಥಿಕವಾಗಿ & ಸಾಮಾಜಿಕವಾಗಿ ಇದೆಲ್ಲವನ್ನೂ ಮೀರಿ ಜೀವ ಉಳಿಸಿಕೊಂಡರೆ ಸಾಕಪ್ಪಾ ಅನ್ನುವಂತಹ ಪರಿಸ್ಥಿತಿ ಅಮೆರಿಕದಲ್ಲಿ ನಿರ್ಮಾಣ ಆಗಿತ್ತು. ಆದರೆ ಈಗ ಪರಿಸ್ಥಿತಿ ಹಿಡಿದಕ್ಕೆ ಸಿಕ್ಕಿದೆ, ಕೆಲವೇ ದಿನಗಳ ಹಿಂದೆ ಅಧ್ಯಕ್ಷ ಜೋ ಬೈಡನ್ ಕೊರೊನಾ ತುರ್ತು ಪರಿಸ್ಥಿತಿಯನ್ನು ಅಮೆರಿಕದಲ್ಲಿ ಅಂತ್ಯಗೊಳಿಸಿದ್ದರು. ಇದೀಗ ಕಡ್ಡಾಯ ಕೊರೊನಾ ಲಸಿಕೆ ನೀತಿಯೂ ಮುಗಿಯುತ್ತಿದೆ.

America is ended Covid vaccination compulsory policy after 2 years

ಯಾರಿಗೆಲ್ಲಾ ಕಡ್ಡಾಯ ಕೊರೊನಾ ಲಸಿಕೆ ನೀತಿ?

ಅದು ಹೇಗಾಯ್ತೋ ಗೊತ್ತಿಲ್ಲ, ಕೊರೊನಾ ಅಪ್ಪಳಿಸಿದ ಕೆಲವೇ ತಿಂಗಳ ಬಳಿಕ ಇಡೀ ಅಮೆರಿಕದ ಪರಿಸ್ಥಿತಿ ಕೈಮೀರಿತ್ತು. ಜಗತ್ತಿನ ಯಾವುದೇ ದೇಶದಲ್ಲಿ ಕಂಡುಬರದಷ್ಟು ಕೊರೊನಾ ಪ್ರಕರಣಗಳು ಮತ್ತು ಕೊರೊನಾ ಸಾವು ಅಮೆರಿಕದಲ್ಲಿ ದಾಖಲಾಗಿತ್ತು. 1 ಮಿಲಿಯನ್‌ಗೂ ಹೆಚ್ಚು ಜನ ಮೃತಪಟ್ಟರು. ಆಗ ಅನಿವಾರ್ಯವಾಗಿ ಕಡ್ಡಾಯ ಲಸಿಕೆ ನೀತಿಯನ್ನ ಅಮೆರಿಕ ಜಾರಿಗೆ ತಂದಿತ್ತು. ಸರ್ಕಾರಿ ನೌಕರರು, ಗುತ್ತಿಗೆದಾರರು ಮತ್ತು ವಿದೇಶಿ ಪ್ರಯಾಣಿಕರಿಗೆ ಅನ್ವಯವಾಗುತ್ತಿದ್ದ ಕಡ್ಡಾಯ ಲಸಿಕೆ ನಿಯಮ ಮೇ 11ರಂದು ಕೊನೆಯಾಗಲಿದೆ.

27 ಕೋಟಿ ಜನರಿಗೆ ಕೊರೊನಾ ಲಸಿಕೆ

ಇನ್ನು ಕೊರೊನಾ ಲಸಿಕೆ ಕಡ್ಡಾಯ ನೀತಿ ಹಿಂದಕ್ಕೆ ಪಡೆದ ಕಾರಣ ಹಲವು ಬದಲಾವಣೆಗೆ ಬೈಡನ್ ಸರ್ಕಾರ ಆದೇಶ ನೀಡಿದೆ. ಈ ಪೈಕಿ, ಆರೋಗ್ಯ ಸಿಬ್ಬಂದಿ, ಗಡಿಯಲ್ಲಿರುವ ವಿದೇಶಿ ಪ್ರಜೆಗಳಿಗೆ ಲಸಿಕೆ ನೀಡುವ ಪ್ರಕ್ರಿಯೆಯನ್ನು ನಿಲ್ಲಿಸಲು ಸರ್ಕಾರ ಆದೇಶ ನೀಡಿದೆ ಎನ್ನಲಾಗಿದೆ. ಇನ್ನು ಅಮೆರಿದಲ್ಲಿ ಇಲ್ಲಿವರೆಗೂ ಒಟ್ಟು 27 ಕೋಟಿಗೂ ಹೆಚ್ಚು ಜನರು ಅಥವಾ ಅಮೆರಿಕದ ಒಟ್ಟು ಜನಸಂಖ್ಯೆಯ ಶೇಕಡಾ 81ರಷ್ಟು ಪ್ರಜೆಗಳಿಗೆ ಕನಿಷ್ಠ ಒಂದು ಡೋಸ್‌ ಕೊರೊನಾ ಲಸಿಕೆ ನೀಡಲಾಗಿದೆ.

America is ended Covid vaccination compulsory policy after 2 years

ಚೀನಾದಿಂದ ವಕ್ಕರಿಸಿತ್ತು ಮಹಾಮಾರಿ!

ಕೊರೊನಾ ವೈರಸ್ ಪತ್ತೆಯಾದ ಆರಂಭದಲ್ಲಿ ಅಮೆರಿಕ ಯಾವುದೇ ಚಿಂತೆಯಿಲ್ಲದೆ ಹಾಯಾಗಿತ್ತು. ಆದರೆ ಕೊರೊನಾ ಕುರಿತು ಒಂದಷ್ಟು ಭಯಾನಕ ಅಧ್ಯಯನ ವರದಿಗಳು ಹೊರಬೀಳುತ್ತಲೇ ಅಮೆರಿಕದಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಿಸಲಾಗಿತ್ತು. ಆಗಲೇ ತಿಳಿದಿದ್ದು ಅಮೆರಿಕದಲ್ಲಿ ಅದಾಗಲೇ ಕೊರೊನಾ ಕಮ್ಯುನಿಟಿ ಸ್ಪ್ರೆಡ್ ಆಗಿದೆ ಎಂದು. ಲಕ್ಷಾಂತರ ಸೋಂಕಿತರು ಚೀನಾ ಮತ್ತು ಇತರ ಭಾಗಗಳಿಂದ ಅಮೆರಿಕದ ಮೂಲೆ ಮೂಲೆಗೂ ಸೇರಿದ್ದರು ಎಂಬುದು ಅಮೆರಿಕದ ಆರೋಪ. ಪರಿಣಾಮ 3 ವರ್ಷದಲ್ಲಿ ಬರೋಬ್ಬರಿ 10 ಕೋಟಿ ಅಮೆರಿಕನ್ನರಿಗೆ ಕೊರೊನಾ ಸೋಂಕು ತಗುಲಿಬಿಟ್ಟಿತು.

ತುರ್ತು ಪರಿಸ್ಥಿತಿ ಘೋಷಿಸಿದ್ದ ಅಮೆರಿಕ

ಇನ್ನು ಕೊರೊನಾ ಕಂಟ್ರೋಲ್ ಮಾಡಲು ಹರಸಾಹಸ ಮುಂದುವರಿದ ಸಂದರ್ಭದಲ್ಲೇ, ಸಾಂಕ್ರಾಮಿಕ ತುರ್ತು ಪರಿಸ್ಥಿತಿಯ ಘೋಷಣೆ ಮಾಡಬೇಕಾದ ಅನಿವಾರ್ಯತೆ ಎದುರಾಗಿತ್ತು. ಕೂಡಲೇ ಅಂದಿನ ಟ್ರಂಪ್ ಸರ್ಕಾರ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇದೀಗ COVID-19 ಸಾಂಕ್ರಾಮಿಕ ರೋಗಕ್ಕೆ ಸಂಬಂಧಿಸಿದ ರಾಷ್ಟ್ರೀಯ ತುರ್ತು ಪರಿಸ್ಥಿತಿ ಕೊನೆಗೊಳಿಸುವ ಕೈಗೊಂಡ ಕೆಲವೇ ದಿನದಲ್ಲಿ ಕಡ್ಡಾಯ ಲಸಿಕೆ ನಿರ್ಧಾರ ಕೂಡ ಹಿಂದಕ್ಕೆ ಪಡೆಯಲಾಗಿದೆ. ಈ ಮೂಲಕ 3 ವರ್ಷಗಳ ಕರಾಳ ಅಧ್ಯಾಯ ಕೊನೆಗೂ ಅಂತ್ಯವಾದಂತಾಗಿದೆ.

ಆರ್ಥಿಕವಾಗಿ ಹಿನ್ನಡೆ ಕಂಡ ಅಮೆರಿಕ

ಕೊರೊನಾ ಅಪ್ಪಳಿಸಿದ ಬಳಿಕ ಅನಿವಾರ್ಯ ಕಾರಣಗಳಿಂದ ಅಮೆರಿಕದಲ್ಲಿ ಉದ್ದಿಮೆಗಳು ಬಂದ್ ಆದವು. ಲಕ್ಷಾಂತರ ಜನ ಉದ್ಯೋಗ ಕಳೆದುಕೊಂಡರು. ಅದೆಷ್ಟೋ ಜನರಿಗೆ ಸೂಕ್ತ ಚಿಕಿತ್ಸೆ ಒದಗಿಸಲು ಕೂಡ ಅಮೆರಿಕದ ಸರ್ಕಾರಕ್ಕೆ ಕಷ್ಟವಾಗಿತ್ತು. ಇದೆಲ್ಲದರ ಪರಿಣಾಮ ಅಮೆರಿಕದ ಆರ್ಥಿಕತೆ ಕುಸಿದಿದೆ. ಜಗತ್ತಿನ ಸೂಪರ್ ಪವರ್ ರಾಷ್ಟ್ರವಾಗಿ ಗುರುತಿಸಿಕೊಂಡಿದ್ದ ರಾಷ್ಟ್ರಕ್ಕೆ ಭೀಕರ ಪರಿಸ್ಥಿತಿ ಎದುರಾಗಿದೆ. ಈ ಹೊತ್ತಲ್ಲೇ ಹೊಸ ಹುರುಪಿನೊಂದಿಗೆ ಅಮೆರಿಕ ತುರ್ತು ಪರಿಸ್ಥಿತಿ ಕೊನೆಗೊಳಿಸಿ, ಲಸಿಕೆ ಅವಲಂಬನೆ ಬಿಟ್ಟು ಹೊಸ ಅಧ್ಯಾಯ ಆರಂಭಿಸುತ್ತಿದೆ.

ಸೋಂಕಿತರ ಪಟ್ಟಿಯಲ್ಲಿ ನಂ.1 ಅಮೆರಿಕ!

ಎಲ್ಲದರಲ್ಲೂ ತಾನೇ ನಂಬರ್ 1 ಅಂತಾ ಬಿಲ್ಡಪ್ ಕೊಡೋದು ಅಮೆರಿಕ ಮತ್ತು ಅಮೆರಿಕನ್ನರಿಗೆ ರೂಢಿ. ಇದೇ ರೀತಿ ಕೊರೊನಾ ಕೂಪದಲ್ಲಿ ಬಿದ್ದಾಗ ಅಮೆರಿಕ ಬೇಡ ಎಂದರೂ ನಂಬರ್ 1 ಆಗಿತ್ತು. ಸುಮಾರು 10 ಕೋಟಿಗೂ ಹೆಚ್ಚು ಜನರಿಗೆ ಸೋಂಕು ತಗುಲಿದ ಕಾರಣ, ಕೊರೊನಾ ಸೋಂಕಿತರ ಪಟ್ಟಿಯಲ್ಲಿ ಅಮೆರಿಕ ಮೊದಲ ಸ್ಥಾನ ಅಲಂಕರಿಸಿತ್ತು. ಆದರೆ ಹೆಮ್ಮಾರಿ ಕಟ್ಟಿಹಾಕಲು ಅಲ್ಲಿನ ಸರ್ಕಾರ ಕೈಗೊಂಡ ಕಾರ್ಯ ಹಾಗೂ ಪ್ರತಿಯೊಬ್ಬರಿಗೂ ಲಸಿಕೆ ಹಾಕಲು ವಹಿಸಿದ ಶ್ರಮದ ಫಲವಾಗಿ ಕೊರೊನಾ ಕಂಟ್ರೋಲ್‌ಗೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+