ಸಿನ್ಸಿನಾಟಿ ಶೂಟೌಟ್ ನಲ್ಲಿ ಸಾವಿಗೀಡಾದ ಗುಂಟೂರಿನ ಪೃಥ್ವಿರಾಜ್
ಸಿನ್ಸಿನ್ನಾಟಿ, ಸೆಪ್ಟೆಂಬರ್ 07: ಅಮೆರಿಕದ ಸಿನ್ಸಿನ್ನಾಟಿಯ ಫೌಂಟೇನ್ ಸ್ಕ್ವೇರ್ ನಲ್ಲಿ ಗುರುವಾರ ಸಂಭವಿಸಿದ ಶೂಟೌಟ್ ನಲ್ಲಿ ಸಾವಿಗೀಡಾದ ಮೂವರಲ್ಲಿ ಓರ್ವ ಆಂಧ್ರಪ್ರದೇಶ ಮೂಲದವರು ಎಂಬುದು ತಿಳಿದುಬಂದಿದೆ.
ಆಂಧ್ರಪ್ರದೇಶದ ಗುಂಟೂರಿನವರಾದ ಪೃಥ್ವಿರಾಜ್ ಕಂದೇಪಿ(29) ಎಂಬುವವರು ಸಾವಿಗೀಡಾಗಿದ್ದಾರೆ ಎಂದು ಭಾರತದ ನ್ಯೂಯಾರ್ಕ್ ರಾಯಭಾರಿ ಕಚೇರಿಯ ಸಂದೀಪ್ ಚಕ್ರೋಬರ್ತಿ ತಿಳಿಸಿದ್ದಾರೆ.
ಪೃಥ್ವಿರಾಜ್ ಅವರ ಪಾರ್ಥಿವ ಶರೀರವನ್ನು ಭಾರತಕ್ಕೆ ಕರೆತರುವ ವ್ಯವಸ್ಥೆ ಮಾಡಲಾಗಿದೆ ಎಂದು ಸಂಮದೀಪ್ ತಿಳಿಸಿದ್ದಾರೆ.
ಆರು ವರ್ಷಗಳ ಹಿಂದೆ ಅಮೆರಿಕದ ಸಿನ್ಸಿನಾಟಿಗೆ ತೆರಳಿದ್ದ ಪೃಥ್ವಿರಾಜ್, ಇಲ್ಲಿನ ಬ್ಯಾಂಕ್ ವೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದರು.

ಬೆಳಿಗ್ಗೆ 9 ಗಂಟೆಯ(ಸ್ಥಳೀಯ ಕಾಲಮಾನ) ಸುಮಾರಿಗೆ ಈ ಸ್ಫೋಟ ಸಂಭವಿಸಿದ್ದು, ಶಂಕಿತ ಗನ್ ಮ್ಯಾನ್ ನನ್ನು ಬಂಧಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಿನ್ಸಿನ್ನಾಟಿಯ ಮೇಯರ್ ಜಾನ್ ಕ್ರಾನ್ಲಿ, 'ಇದು ಸಹಜ ಘಟನೆಯಲ್ಲ, ಇದನ್ನು ಸಹಜ ಎಂದು ನೋಡುವುದೂ ಸರಿಯಲ್ಲ. ಇದೊಂದು ಅಸಹಜ ಘಟನೆ. ಮುಂದುವರಿದ ಮತ್ತ್ಯಾವುದೇ ದೇಶದಲ್ಲೂ ಈ ಪರಿಯ ಶೂಟೌಟ್ ಗಳನ್ನು ಪದೇ ಪದೇ ನೋಡುವುದಕ್ಕೆ ಸಾಧ್ಯವಿಲ್ಲ. ಹೀಗಾದರೆ ಎಂಥವರಿಗೂ ಇಲ್ಲಿ ಕೆಲಸ ಮಾಡುವುದಕ್ಕೆ ಹಿಂಜರಿಕೆ ಉಂಟಾಗುತ್ತದೆ' ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗಷ್ಟೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದ ಶೂಟೌಟ್ ನಲ್ಲಿ ನಾಲ್ವರು ಮೃತರಾಗಿದ್ದರು. ಕಳೆದ ಫೆಬ್ರವರಿಯಲ್ಲಿ ಇಲ್ಲಿನ ಫ್ಲೋರಿಡಾದ ಶಾಲೆಯೊಂದರಲ್ಲಿ ನಡೆದ ಭೀಕರ ಶೂಟೌಟ್ ನಲ್ಲಿ 17 ಮಂದಿ ಮೃತರಾಗಿದ್ದರು.












Click it and Unblock the Notifications