• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚಿಕಾಗೋ ಆಸ್ಪತ್ರೆಯಲ್ಲಿ ಶೂಟೌಟ್: ಗನ್ ಮ್ಯಾನ್ ಸೇರಿ ಇಬ್ಬರ ಹತ್ಯೆ

|

ಚಿಕಾಗೋ, ನವೆಂಬರ್ 20: ಅಮೆರಿಕದ ಚಿಕಾಗೋ ಆಸ್ಪತ್ರೆಯಲ್ಲಿ ಸೋಮವಾರ ನಡೆದ ಶೂಟೌಟ್ ನಲ್ಲಿ ಇಬ್ಬರು ಮೃತರಾಗಿದ್ದಾರೆ.

ಮೃತರಲ್ಲಿ ಶೂಟರ್ ಸಹ ಸೇರಿದ್ದಾನೆ ಎನ್ನಲಾಗಿದೆ. ಅಪರಿಚಿತ ಗನ್ ಮ್ಯಾನ್ ವೊಬ್ಬ ಚಿಕಾಗೋದ ಸೌತ್ ಸೈಡ್ ಮರ್ಸಿ ಆಸ್ಪತ್ರೆಯ ಪಾರ್ಕಿಂಗ್ ಲಾಟ್ ನಲ್ಲಿ ಗುಂಡು ಹಾರಿಸುವುದಕ್ಕೆ ಆರಂಭಿಸಿದ್ದ. ಇದರಿಂದ ಓರ್ವ ವ್ಯಕ್ತಿ ಮೃತರಾದರೆ, ಕೆಲವರಿಗೆ ಗಾಯಗಳಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.

ಕ್ಯಾಲಿಫೋರ್ನಿಯಾದಲ್ಲಿ ಆಗಂತುಕನಿಂದ ಗುಂಡಿನ ದಾಳಿ, 13 ಜನರ ಹತ್ಯೆ

ಘಟನೆಗೆ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.

ಇತ್ತೀಚೆಗಷ್ಟೇ ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ ನಗರದ ಮ್ಯೂಸಿಕ್ ಬಾರ್ ವೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ ಬರೋಬ್ಬರಿ 13 ಜನ ಮೃತರಾಗಿದ್ದರು.

ಬಿಳಿಯರನ್ನು ಬಿಳಿಯರು ಕೊಲ್ಲೋಲ್ಲ ಎಂದು ಗುಂಡು ಹಾರಿಸಿದ ಗನ್ ಮ್ಯಾನ್!

ಅದಕ್ಕೂ ಮುನ್ನ ಪಿಟ್ಸ್ ಬರ್ಗ್ ನಲ್ಲಿ ಅಕ್ಟೋಬರ್ 28 ರಂದು ನಡೆದ ಗುಂಡಿನ ದಾಳಿಯಲ್ಲಿ 11 ಮಂದಿ ಮೃತಪಟ್ಟಿದ್ದರು.

ಯಹೂದಿಗಳೆಲ್ಲ ಸಾಯಬೇಕು ಎಂದು ಕೂಗುತ್ತಾ ಶೂಟೌಟ್, ಆರೋಪಿ ಬಂಧನ

ಕೆಂಟುಕಿಯ ಸೂಪರ್ ಮಾರ್ಕೆಟ್ ವೊಂದರ ಪಾರ್ಕಿಂಗ್ ಲಾಟ್ ನಲ್ಲಿ ನಡೆದ ಶೂಟೌಟ್ ನಲ್ಲಿ ಶೂಟರ್ ಸೇರಿದಂತೆ ಇಬ್ಬರು ಮೃತರಾಗಿದ್ದರು.

English summary
America: Suspected gunman dead, officer and 3 others in critical condition following shooting at Chicago hospital, reports The Associated Press quoting Police.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X