Chandrayaan-3: ಚಂದ್ರಯಾನ-3 ಸಾಧನೆಗೆ ತಲೆಬಾಗಿದ ದೊಡ್ಡಣ್ಣ ಅಮೆರಿಕ!

ಭಾರತದ ಇಸ್ರೋ ಯಾರು ಮಾಡಲಾಗದ ಸಾಧನೆ ಮಾಡಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸುವ ಮೂಲಕ ಇತಿಹಾಸ ಬರೆದಿದ್ದು, ಚಂದ್ರನ ದಕ್ಷಿಣ ಧ್ರುವಕ್ಕೆ ಎಂಟ್ರಿ ಕೊಟ್ಟ ಮೊಟ್ಟಮೊದಲ ದೇಶ ಭಾರತ ಎಂಬ ಹೆಮ್ಮೆಯೂ ಸಿಕ್ಕಿದೆ. ಇದೇ ಸಂದರ್ಭದಲ್ಲಿ ನಾಸಾ ರೀತಿ ದೊಡ್ಡ ಬಾಹ್ಯಾಕಾಶ ಸಂಸ್ಥೆ ಹೊಂದಿರುವ ಅಮೆರಿಕದಲ್ಲಿ ಕೂಡ ಭಾರತಕ್ಕೆ ಜೈ ಅಂತಿದ್ದಾರೆ ಜನ. ಅಮೆರಿಕದ ನಾಯಕರು ಕೂಡ ಭಾರತದ ಸಾಧನೆಗೆ ಶರಣಾಗಿದ್ದಾರೆ.

ಚಂದ್ರಯಾನ-2 ಸೋಲಿನ ಬಳಿಕ ಭಾರತ ಸವಾಲು ಸ್ವೀಕರಿಸಿತ್ತು. ಗೆದ್ದೇ ಗೆಲ್ಲಬೇಕು ಎಂಬ ಛಲದಲ್ಲಿ ಚಂದ್ರಯಾನ-3 ಯೋಜನೆಗೆ ಸಿದ್ಧತೆ ನಡೆಸಿತ್ತು. ಹೀಗೆ ಇದೀಗ ಚಂದ್ರಯಾನ-3 ಯೋಜನೆ ಮೂಲಕ ಚಂದ್ರಯಾನ-2 ಸೋಲಿನ ಸೇಡು ತೀರಿಸಿಕೊಂಡಿದೆ. ಹೀಗಾಗಿ ಭಾರತ ಮಾಡಿದ ಸಾಧನೆಗೆ ಎಲ್ಲೆಲ್ಲೂ ಜಯಘೋಷ ಮೊಳಗಿದೆ. ಅದ್ರಲ್ಲೂ ಅಮೆರಿಕ ನಾಯಕರು ಭಾರತಕ್ಕೆ ತಲೆಬಾಗಿ ನಮಿಸುತ್ತಿದ್ದಾರೆ. ಅಮೆರಿಕ ರಾಜಕಾರಣಿಗಳು, ಮಾಧ್ಯಮಗಳು ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

America and Indian Americans celebrated Chandrayaan 3 success in grand way

ಭಾರತ ಮೂಲದ ಅಮೆರಿಕನ್ನರ ಸಂಭ್ರಮ

ಅಮೆರಿಕದಲ್ಲಿ ಭಾರತ ಮೂಲದ ಸಾಕಷ್ಟು ಜನ ವಾಸವಿದ್ದಾರೆ. ಹತ್ತಾರು ವರ್ಷದ ಹಿಂದೆ ಅಮೆರಿಕಗೆ ತೆರಳಿ ಅಲ್ಲೇ ವಾಸ ಮಾಡುತ್ತಿದ್ದಾರೆ. ಆದರೆ ಅಮೆರಿಕದಲ್ಲಿ ಇದ್ದರೂ ಭಾರತದ ಸಂಸ್ಕೃತಿ ಮರೆತಿಲ್ಲ ಅವರು. ಭಾರತೀಯರಾಗಿ ಬದುಕುತ್ತಿರುವ ಅವರು, ಭಾರತದ ಇಸ್ರೋ ಮಾಡಿದ ಸಾಧನೆಗೆ ಗ್ರೇಟ್ ಅಂತಿದ್ದಾರೆ. ಅಲ್ಲದೆ ಭಾರತದ ಚಂದ್ರಯಾನ-3 ಸಾಧನೆ ಬಗ್ಗೆ ಸಂಭ್ರಮಿಸಿದ್ದಾರೆ. ಇದರ ಜೊತೆ ಅಮೆರಿಕದ ಮಾಧ್ಯಮಗಳು ಕೂಡ ಭಾರತದ ಈ ಅದ್ಭುತ ಸಾಧನೆ ಹೊಗಳಿ ಸುದ್ದಿ ಮಾಡಿವೆ.

ಇಸ್ರೋಗೆ ಈ ವರ್ಷ ಯುಗಾದಿ & ಸಂಕ್ರಾಂತಿ 2ನೇ ಬಾರಿ ಬಂದಂತಾಗಿದೆ ಯಾಕಂದ್ರೆ ತಾನು ಅಂದುಕೊಂಡಂತೆ ಗುರಿಸಾಧಿಸಿದೆ ಇಸ್ರೋ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿದ್ದ ಯೋಜನೆಯಲ್ಲಿ ಇಸ್ರೋಗೆ ಸಕ್ಸಸ್ ಸಿಕ್ಕಿದೆ. ಇಸ್ರೋ ಕಳೆದ ಬಾರಿಗಿಂತ, ಅಂದರೆ ಚಂದ್ರಯಾನ 2ಕ್ಕಿಂತ ಚಂದ್ರಯಾನ 3ಕ್ಕಿಂತ ಖಡಕ್ ಆಗಿ ಕಾರ್ಯನಿರ್ವಹಿಸಿತ್ತು. ಆಗಸ್ಟ್ 23 ಸಂಜೆ 6 ಗಂಟೆ 4 ನಿಮಿಷಕ್ಕೆ ಇಸ್ರೋ ಸಂಸ್ಥೆ ಲ್ಯಾಂಡರ್ ಆಗಿದ್ದ 'ವಿಕ್ರಮ್' ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸಿಬಿಟ್ಟಿದೆ. ಹೀಗೆ ಇಸ್ರೋ ಸಾಧನೆಯು ಇತಿಹಾಸದ ಪುಟದಲ್ಲಿ ಎಂದೂ ಮಾಸದೆ ಉಳಿಯಲಿದೆ ಅನ್ನೋದು ಗ್ಯಾರಂಟಿ.

ಅತ್ಯಾಧುನಿಕ ತಂತ್ರಜ್ಞಾನ ಬಳಸಿದ್ದ ಇಸ್ರೋ

ಕಳೆದ ಬಾರಿ ಭಾರತ ಚಂದ್ರನ ಮೇಲೆ ಲ್ಯಾಂಡರ್ ಇಳಿಸುವಾಗಲೆ ಸ್ವಲ್ಪ ಎಡವಟ್ಟಾಗಿತ್ತು. ಹೀಗೆ ಸಣ್ಣ ಸಮಸ್ಯೆ ಯೋಜನೆ ಹಾಳು ಮಾಡಿತ್ತು. ಹೀಗಾಗಿ ಎಚ್ಚರಿಕೆ ವಹಿಸಿ, ಲ್ಯಾಂಡರ್ ಇಳಿಸುವ ಪ್ರತಿಕ್ಷಣವೂ ಇಸ್ರೋಗೆ ಗೊತ್ತಾಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಲ್ಯಾಂಡರ್ ಪೊಸಿಷನ್ ಡಿಟೆಕ್ಷನ್ ಕ್ಯಾಮೆರಾ (LPDC) ವಿಕ್ರಮ್‌ಗೆ ಸರಿಯಾದ ಲ್ಯಾಂಡಿಂಗ್ ಸ್ಥಳ ತೋರಿಸುತ್ತೆ. ಹಾಗೂ ಲ್ಯಾಂಡರ್‌ನ ಅಪಾಯ ಪತ್ತೆ & ಅಪಾಯ ತಪ್ಪಿಸುವ ಕ್ಯಾಮರಾ (LHDAC) ಕೂಡ ಇದರಲ್ಲಿತ್ತು.

America and Indian Americans celebrated Chandrayaan 3 success in grand way

ಸಮತಟ್ಟು ಜಾಗದಲ್ಲಿ ಇಳಿದಿದ್ದ ಲ್ಯಾಂಡರ್

LPDC, LHDAC ಜತೆ ಲೇಸರ್ ಆಲ್ಟಿಮೀಟರ್ (LASA) & ಲೇಸರ್ ಡಾಪ್ಲರ್ ವೆಲಾಸಿಟಿಮೀಟರ್ (LDV) & ಲ್ಯಾಂಡರ್ ಹಾರಿಜಾಂಟಲ್ ವೆಲಾಸಿಟಿ ಕ್ಯಾಮೆರಾ (LHVC) ಪೇಲೋಡ್‌ ಜತೆ ಕೆಲಸ ಮಾಡಿವೆ. ಈ ಮೂಲಕ ಸಮತಟ್ಟಾದ ಜಾಗದ ಮೇಲೆ, ಚಂದ್ರನ ಮೇಲ್ಮೈ ಮೇಲೆ ಲ್ಯಾಂಡರ್ ಇಳಿಸಿದೆ ಇಸ್ರೋ. ಭಾರತದ ಈ ಸಾಧನೆಯನ್ನ ಜಗತ್ತಿನಲ್ಲೇ ಇದುವರೆಗೆ ಯಾವುದೇ ರಾಷ್ಟ್ರವೂ ಮಾಡಿಲ್ಲ. ಚಂದ್ರನ ದಕ್ಷಿಣ ಧ್ರುವದಲ್ಲಿ ಭಾರತ ಮೊದಲ ಬಾರಿಗೆ ಎಂಟ್ರಿ ಕೊಟ್ಟಿದೆ. ಇದೀಗ ನೀರಿಗಾಗಿ ಹುಡುಕಾಟ ಆರಂಭವಾಗಿದೆ.

ಒಟ್ನಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋಗೆ ಈಗ ಶುಭಾಶಯ ಮಾತ್ರವಲ್ಲ, ಸಖತ್ ಡಿಮ್ಯಾಂಡ್ ಕೂಡ ಬಂದಿದೆ. ಇಸ್ರೋ ಜೊತೆ ಕೈಜೋಡಿಸಿ ಯೋಜನೆ ಕೈಗೊಳ್ಳಲು ಇದೀಗ ಸಾಕಷ್ಟು ದೇಶಗಳು ಮುಂದೆ ಬರ್ತಿವೆ. ಹೀಗೆ ಭಾರತಕ್ಕೆ ಸಾವಿರಾರು ಕೋಟಿ ಲಾಭವಾಗುವ ನಿರೀಕ್ಷೆ ಇದೆ. ಜೊತೆಗೆ ಇಸ್ರೋ ಸಂಸ್ಥೆಯ ಮುಂದಿನ ಯೋಜನೆಗಳಿಗೂ ಇದು ಸಹಾಯ ಮಾಡಲಿದೆ. ಇಸ್ರೋ ಭಾರತದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಹಾರಿಸಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+