ಜಿಂಗ ಲಕ.. ಲಕ ಲಕ ಎಂದ ಡೊನಾಲ್ಡ್ ಟ್ರಂಪ್: ಸ್ವಲ್ಪ ಇರಣ್ಣ ಎಂದ ಇರಾನ್!
ವಿಶ್ವದ ಸೂಪರ್ ಪವರ್ ನೇಷನ್ ಹಾಗೂ ದೈತ್ಯ ಮಿಲಿಟರಿ ಪಡೆಯನ್ನು ಹೊಂದಿರುವ ಅಮೆರಿಕ ಇದೀಗ ವಿಶ್ವದ ಮುಂದೆ ನಗೆಪಾಟಲಿಗೆ ಗುರಿಯಾಗಿದೆ. ಇದಕ್ಕೆ ಮುಖ್ಯ ಕಾರಣ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾಡಿರುವ ಎಡವಟ್ಟು. ಯಾವುದಾದರೂ ಕೆಲಸ ಪೂರ್ಣಗೊಳ್ಳುವ ಮುಂಚೆಯೇ ಆ ವಿಷಯವನ್ನು ಹೇಳುವುದು ಹಾಗೂ ಅದು ನನ್ನಿಂದಲೇ ಆಗಿದೆ ಎಂದು ಹೇಳುವ ಚಾಳಿಯನ್ನು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಮತ್ತೊಂದು ನಿರ್ದಶನ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧ. ಈ ಯುದ್ಧದ ವಿಚಾರದಲ್ಲಿ ಅಮೆರಿಕ ಹಾಗೂ ಟ್ರಂಪ್ ಅವರನ್ನು ನೋಡಿ ಜಗತ್ತೇ ನಗುತ್ತಿದೆ.
ಹೌದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೀಗ ಮತ್ತೊಮ್ಮೆ ಮುಜುಗರಕ್ಕೆ ಒಳಗಾಗಿದ್ದಾರೆ. ವೈಟ್‌ಹೌಸ್‌ನಿಂದ ಸರಣಿ ಟ್ವೀಟ್ ಬರುತ್ತಿದ್ದಂತೆಯೇ ಈ ಕಡೆಯಿಂದ ಇದೆಲ್ಲ ಏನು ಇಲ್ಲ ಆ ರೀತಿ ಯಾವುದೇ ಮಾತುಕತೆ ನಡೆದಿಲ್ಲ ಅಂತ ಇರಾನ್ ಹೇಳಿರುವುದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.

ಜಗತ್ತಿಗೆ ಅಭಿನಂದನೆಗಳು, ಇದು ಶಾಂತಿಯ ಸಮಯ! ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾಡಿದ್ದ ಟ್ವೀಟ್ ಅನ್ನು ವೈಟ್‌ಹೌಸ್ (ಶ್ವೇತಭವನ) ಖಾತೆಯಿಂದ ಹಂಚಿಕೊಳ್ಳಲಾಗಿತ್ತು. ಈ ಟ್ವೀಟ್ ವೈರಲ್ ಆಗುತ್ತಿದ್ದಂತೆಯೇ ಒಂದು ಕ್ಷಣ ಇಡೀ ವಿಶ್ವವೇ ಅಮೆರಿಕದ ಕಡೆ ತಿರುಗಿ ನೋಡಿತ್ತು. ಯಾಕೆಂದರೆ ಇರಾನ್ ಹಾಗೂ ಇಸ್ರೇಲ್‌ನ ನಡುವೆ ನಡೆಯುತ್ತಿರುವ ಈ ಭೀರಕ ಯುದ್ಧವು ಕೆಲವೇ ದಿನಗಳಲ್ಲಿ ಅಂತ್ಯ ಕಾಣಲಿದೆ ಎಂದು ಯಾರೂ ಭಾವಿಸಿರಲಿಲ್ಲ.
ಯಾಕೆಂದರೆ ಈ ಬಾರಿ ಇರಾನ್ vs ಇಸ್ರೇಲ್ ಮಾತ್ರವಾಗಿರಲಿಲ್ಲ. ಈ ಎರಡೂ ದೇಶಗಳ ನಡುವಿನ ಯುದ್ಧದಲ್ಲಿ ಅಮೆರಿಕ ಎಂಟ್ರಿ ಕೊಟ್ಟಿತ್ತು. ಇದರೊಂದಿಗೆ ರಷ್ಯಾ ಸೇರಿದಂತೆ ವಿವಿಧ ದೇಶಗಳು ಇರಾನ್ ಬೆಂಬಲಕ್ಕೆ ಬಂದಿದ್ದವು. ಇನ್ನೇನು ಈ ಯುದ್ಧವು ಮೂರನೇ ವಿಶ್ವ ಯುದ್ಧವಾಗಿ ಬದಲಾಗಲಿದೆ ಎನ್ನುವಾಗಲೇ ಟ್ರಂಪ್ ಎರಡೂ ದೇಶಗಳ ನಡುವೆ ಕದನ ವಿರಾಮವಾಗಿದೆ ಅಂತ ಘೋಷಣೆ ಮಾಡಿದ್ದು.
ಈ ರೀತಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟ್ವೀಟ್ ಮಾಡುತ್ತಿದ್ದಂತೆಯೇ ಇಡೀ ವಿಶ್ವವೇ ಒಂದೆರಡು ಕ್ಷಣ ಸಂತೋಷದಲ್ಲಿತ್ತು. ಇದರ ಬೆನ್ನಲ್ಲೇ ಅಮೆರಿಕದಲ್ಲಿ ವೈಟ್‌ಹೌಸ್ ಖಾತೆಯಿಂದ Trust in Donald Trump - ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಲ್ಲಿ ನಂಬಿಕೆ ಇರಿಸಿ ಎಂಬರ್ಥದ ಪೋಸ್ಟ್‌ಗಳು ಬರಲು ಪ್ರಾರಂಭಿಸಿದವು.
https://t.co/FvLK6djP9w pic.twitter.com/36Q8EJiqqq
— The White House (@WhiteHouse) June 23, 2025
ಅಮೆರಿಕ ಸರ್ಕಾರದ ಅಧಿಕೃತ ಖಾತೆಯಿಂದ ಬಂದ ಈ ಟ್ವೀಟ್ ಭಾರೀ ವೈರಲ್ ಆಗಲು ಪ್ರಾರಂಭವಾಯಿತು. ವಿಶ್ವದಾದ್ಯಂತ ಸಂಚಲನ ಸೃಷ್ಟಿಯಾದಾಗಲೇ ಇರಾನ್ ಸ್ಪಷ್ಟವಾಗಿ ನಾವು ಮೊದಲು ಯುದ್ಧ ಮಾಡಿಲ್ಲ. ನಾವು ಈ ರೀತಿಯ ಯಾವ ಒಪ್ಪಂದವನ್ನೂ ಮಾಡಿಕೊಂಡಿಲ್ಲ ಎಂದಿದೆ. ಇದು ಅಮೆರಿಕಗೆ ಭಾರೀ ಮುಜುಗರವನ್ನು ತಂದೊಡ್ಡಿದೆ.












Click it and Unblock the Notifications