ಡೊನಾಲ್ಡ್ ಟ್ರಂಪ್ ಮೇಲೆ ಗುಂಡು ಹಾರಿಸಿದ್ದಕ್ಕೆ ಕಾರಣ ಏನು?

ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವ ಕನಸನ್ನು ಕಾಣ್ತಿದ್ದಾರೆ. ಆದರೆ ಡೊನಾಲ್ಡ್ ಟ್ರಂಪ್ ಅವರನ್ನ ಈ ಬಾರಿ ಕೂಡ ಸೋಲಿಸಿ, ಮತ್ತೊಮ್ಮೆ ಅಧ್ಯಕ್ಷ ಸ್ಥಾನಕ್ಕೆ ಟ್ರಂಪ್ ಆಯ್ಕೆ ಆಗದಂತೆ ತಡೆಯಲು ಬರಾಕ್ ಒಬಾಮ & ಬಿಲ್ ಕ್ಲಿಂಟನ್ ಸಹಿತ ಎಲ್ಲರೂ ದೊಡ್ಡ ದೊಡ್ಡ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಇತ್ತೀಚೆಗಷ್ಟೇ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು.

ಡೊನಾಲ್ಡ್ ಟ್ರಂಪ್ ಇದೀಗ ರಿಪಬ್ಲಿಕನ್ ಪಕ್ಷದಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಆಗಿದ್ದಾರೆ. ಹೀಗಾಗಿ ಡೊನಾಲ್ಡ್ ಟ್ರಂಪ್ ಅಮೆರಿಕದ ಪ್ರತಿಯೊಂದು ರಾಜ್ಯಕ್ಕೂ ತೆರಳುತ್ತಿದ್ದು, ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಆದರೆ, ಇದೇ ರೀತಿ ಮೊನ್ನೆ ಮೊನ್ನೆ ಅಂದ್ರೆ ಜುಲೈ 13 ರಂದು ಪ್ರಚಾರ ಕಾರ್ಯಕ್ಕೆ ಅಂತಾ ತೆರಳಿದ್ದಾಗ ಡೊನಾಲ್ಡ್ ಟ್ರಂಪ್ ಅವರ ಮೇಲೆ ಭೀಕರ ಗುಂಡಿನ ದಾಳಿ ನಡೆಸಲಾಗಿತ್ತು. ಪೆನ್ಸಿಲ್ವೇನಿಯಾದ ಮತದಾರರನ್ನ ಉದ್ದೇಶಿಸಿ ಟ್ರಂಪ್ ಭಾಷಣ ಮಾಡುವಾಗ ಬಂದೂಕುಧಾರಿ ಗುಂಡಿನ ದಾಳಿನ ನಡೆಸಿದ್ದ. ಇದೀಗ ಆ ದಾಳಿಯ ಅಸಲಿಯತ್ತು ಬಯಲಾಗಿದೆ.

Allegedly Security Breach Is The Main Reason For Attack On The Donald Trump

ತಲೆ ತಿರುಗಿಸಿ ಜೀವ ಉಳಿಸಿಕೊಂಡರು!

ಡೊನಾಲ್ಡ್ ಟ್ರಂಪ್ ಅವರ ಅದೃಷ್ಟ ಚೆನ್ನಾಗಿತ್ತು ಅಂತಾ ಕಾಣುತ್ತೆ. ಹೀಗಾಗಿಯೇ ಡೊನಾಲ್ಡ್ ಟ್ರಂಪ್ ಅವರ ಮೇಲೆ ಗುಂಡಿನ ದಾಳಿ ನಡೆದರೂ ಜೀವ ಉಳಿಸಿಕೊಂಡರು. ನೇರವಾಗಿ ಟ್ರಂಪ್ ಅವರ ತಲೆಗೆ ಗುರಿ ಇಟ್ಟಿದ್ದ ಹಂತಕ ಗುರಿ ತಪ್ಪಿದ್ದ. ಟ್ರಂಪ್ ಅವರು ಭಾಷಣ ಮಾಡುವಾಗ ಸ್ವಲ್ಪ ತಲೆಯನ್ನ ತಿರುಗಿಸಿದ್ದ ಕಾರಣಕ್ಕೆ ಜೀವ ಉಳಿಸಿಕೊಂಡಿದ್ದರು. ಆದರೆ ಈ ರೀತಿಯಾಗಿ ಗುಂಡಿನ ದಾಳಿ ನಡೆಯಲು ಭದ್ರತಾ ವೈಫಲ್ಯ ಕಾರಣ ಎಂದು, ಅಮೆರಿಕದ ಸೀಕ್ರೆಟ್‌ ಸರ್ವೀಸ್‌ ಏಜೆನ್ಸಿ ಒಪ್ಪಿಕೊಂಡಿದೆ. ಹೀಗಾಗಿ ಭಾರಿ ದೊಡ್ಡ ಸಂಚಲನ ಸೃಷ್ಟಿಯಾಗಿದೆ.

ಚುನಾವಣಾ ಸಭೆಗಳ ಮೇಲೆ ಕಣ್ಣು!

ಡೊನಾಲ್ಡ್ ಟ್ರಂಪ್‌ರ ಮೇಲೆ ಗುಂಡಿನ ದಾಳಿ ನಡೆದಿರುವ ಬಗ್ಗೆ ಮಾತನಾಡಿರುವ, ಸೀಕ್ರೆಟ್‌ ಸರ್ವೀಸ್‌ನ ತಾತ್ಕಾಲಿಕ ನಿರ್ದೇಶಕ ರೊನಾಲ್ಡ್‌ ರೋವೆ ಅವರು ಕ್ಷಮೆ ಕೇಳಿದ್ದಾರೆ. ಈ ಘಟನೆಯ ವೈಫಲ್ಯದ ಹೊಣೆಯನ್ನ ಸೀಕ್ರೆಟ್‌ ಸರ್ವೀಸ್‌ ಹೊರಲಿದೆ. ರಕ್ಷಣೆ ನೀಡುವುದು ನಮ್ಮ ಕರ್ತವ್ಯ ಆಗಿತ್ತು, ಆದರೆ ಇದರಲ್ಲಿ ವಿಫಲರಾಗಿದ್ದೇವೆ. ಆದರೆ ಇಂತಹ ಯಾವುದೇ ಘಟನೆಗಳು ನಮ್ಮ ಭವಿಷ್ಯದಲ್ಲಿ ಮರುಕಳಿದಂತೆ ಕೆಲಸ ಮಾಡುತ್ತೇವೆ ಎಂದಿದ್ದಾರೆ. ಹೀಗಾಗಿ ಅಮೆರಿಕದಲ್ಲಿ ಮತ್ತೆ ಭದ್ರತೆ ಬಿಗಿ ಮಾಡಲಾಗಿದ್ದು, ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರ ಸಭೆಗಳಿಗೆ ಭಾರಿ ಭದ್ರತೆ ನೀಡಲಾಗುತ್ತಿದೆ. ಅಲ್ಲದೆ ಪ್ರತಿಯೊಬ್ಬರ ಮೇಲೆಯೂ ಹದ್ದಿನ ಕಣ್ಣಿಡುತ್ತಿದ್ದಾರೆ ಅಧಿಕಾರಿಗಳು.

ಕಮಲಾ & ಟ್ರಂಪ್ ಮುಖಾಮುಖಿ!

ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ಫೈಟಿಂಗ್ ಯಾವ ರೇಂಜ್‌ಗೆ ಇದೆ ಅಂದ್ರೆ ಇಡೀ ಜಗತ್ತು ಇದೀಗ ಅಮೆರಿಕದ ಮೇಲೆ ಗಮನ ಇಟ್ಟು ಕೂತಿದೆ. ಅಮೆರಿಕದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ? ಅನ್ನೋ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಅದ್ರಲ್ಲೂ ಒಂದು ಕಡೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವ ಕನಸು ಕಾಣುತ್ತಿದ್ದರೆ, ಇಲ್ಲಿ ಬೇರೆ ಬೇರೆ ರೀತಿಯ ಘಟನೆಗಳು ನಡೆಯುತ್ತಿವೆ. ಹಾಗೇ ಮತ್ತೊಂದು ಕಡೆ ಕಮಲಾ ಹ್ಯಾರಿಸ್ ಪರ ಮತದಾರರ ಬೆಂಬಲ ಕೂಡ ಹೆಚ್ಚಾಗುತ್ತಿದೆ. ಇದೇ ಸೆಪ್ಟೆಂಬರ್‌ 4 ರಂದು ಅಮೆರಿಕದ ಅತ್ಯಂತ ಜನಪ್ರಿಯ 'ಫಾಕ್ಸ್‌ ನ್ಯೂಸ್‌' ಸುದ್ದಿ ಸಂಸ್ಥೆ ಕಚೇರಿಯಲ್ಲಿ ಚರ್ಚಾ ಕಾರ್ಯಕ್ರಮ ನಡೆಯಲಿದೆ. ಆಗ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಮುಖಾಮುಖಿ ಚರ್ಚೆ ನಡೆಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+