Ukraine: ಉಕ್ರೇನ್ ಪ್ರಯಾಣಿಕ ರೈಲಿನ ಮೇಲೆ ಭೀಕರ ದಾಳಿ, 12 ಜನ ಬಲಿ ಆರೋಪ
ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲುವ ಬದಲು ಮತ್ತಷ್ಟು ಹೆಚ್ಚಾಗುತ್ತಿದ್ದು, ಇಬ್ಬರ ನಡುವೆ ಈಗ ಮತ್ತೆ ಬೆಂಕಿ ಹೊತ್ತಿಕೊಂಡಿದೆ. ಅದರಲ್ಲೂ ಉಕ್ರೇನ್ ಪ್ರಯಾಣಿಕ ರೈಲಿನ ಮೇಲೆ ಭೀಕರ ದಾಳಿ ನಡೆದ ಆರೋಪ ಕೇಳಿಬಂದಿದೆ. ಈ ದಾಳಿಯಲ್ಲಿ ಬರೋಬ್ಬರಿ 12 ಜನ ಬಲಿಯಾಗಿ, ಹತ್ತಾರು ಮಂದಿ ಭಾರಿ ಗಂಭೀರವಾಗಿ ಗಾಯಗೊಂಡಿದ್ದಾರೆ. ತಕ್ಷಣವೇ ಗಾಯಾಳುಗಳನ್ನು ಆಸ್ಪತ್ರೆಗೆ ರವಾನಿಸಲಾಗಿದ್ದು, ಈಗ ಅವರಿಗೆ ಚಿಕಿತ್ಸೆ ಮುಂದುವರಿದಿದೆ. ಇನ್ನು ದಾಳಿಯ ತೀವ್ರತೆ ಹಿನ್ನೆಲೆ ಉಕ್ರೇನ್ ಪ್ರಯಾಣಿಕ ರೈಲು, ಸಂಪೂರ್ಣ ಹೊತ್ತಿ ಉರಿಯುವ ದೃಶ್ಯಗಳು ಇದೀಗ ವೈರಲ್ ಆಗುತ್ತಿವೆ. ಮತ್ತೊಂದು ಕಡೆ ಈ ದಾಳಿ ಬಗ್ಗೆ ಪಾಶ್ಚಿಮಾತ್ಯ ದೇಶಗಳು ತೀವ್ರ ಆಕ್ರೋಶ ಹೊರ ಹಾಕಿವೆ.
ಇನ್ನೇನು 4ನೇ ವರ್ಷ ಪೂರೈಸಲಿರುವ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ದೊಡ್ಡ ದೇಶಗಳೇ ಪ್ರಯತ್ನ ಮಾಡುತ್ತಿವೆ. ಆದರೆ ಇನ್ನೊಂದು ಕಡೆ ಈ ಯುದ್ಧ ಮಾತ್ರ ಇನ್ನಷ್ಟು ಜೋರಾಗುತ್ತಿದೆ. ರಷ್ಯಾ ಮತ್ತೊಮ್ಮೆ ಉಕ್ರೇನ್ ವಿರುದ್ಧ ಘೋರ ದಾಳಿಗೆ ಕೈಹಾಕಿ, ಇಡೀ ಉಕ್ರೇನ್ ತುಂಬಾ ನಡುಕ ಹುಟ್ಟಿಸಿದೆ ಎಂಬ ಆರೋಪ ಮಾಡಲಾಗಿದೆ. ಈ ಪೈಕಿ ಪ್ರಯಾಣಿಕರ ರೈಲಿನ ಮೇಲೆ ನಡೆದಿರುವ ದಾಳಿ ಬಗ್ಗೆ ತೀವ್ರ ಅಸಮಾಧಾನದ ಮಾತುಗಳು ಕೇಳಿಬರುತ್ತಿವೆ. ಅಲ್ಲದೆ ಈ ವಿಚಾರವನ್ನು ಇಡೀ ಜಗತ್ತು ಖಂಡಿಸಬೇಕು ಎಂದು ಉಕ್ರೇನ್ ಈಗ ಆಗ್ರಹಿಸಿದೆ.

12 ಉಕ್ರೇನ್ ನಾಗರಿಕರು ಬಲಿ?
ಉಕ್ರೇನ್‌ನ ಖಾರ್ಕಿವ್ ಪ್ರದೇಶದಲ್ಲಿ ಪ್ರಯಾಣಿಕ ರೈಲೊಂದಕ್ಕೆ ರಷ್ಯಾ ಡ್ರೋನ್‌ಗಳು ಡಿಕ್ಕಿ ಹೊಡೆದಿದ್ದು, ಈ ಘಟನೆಯಲ್ಲಿ 12 ಉಕ್ರೇನ್ ನಾಗರಿಕರು ಮೃತಪಟ್ಟಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅದರಲ್ಲೂ 200ಕ್ಕೂ ಹೆಚ್ಚು ಜನರು ಈ ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದರು, ಅದೃಷ್ಟವಷಾತ್ ಈ ಘಟನೆಯಲ್ಲಿ ಹಲವರ ಪ್ರಾಣ ಉಳಿದಿದೆ. ಆದರೆ ಇಡೀ ರೈಲು ಬೆಂಕಿಯಲ್ಲಿ ಧಗಧಗ ಹೊತ್ತಿ ಉರಿದ ಪರಿಣಾಮ ಕೆಲಕಾಲ ಆತಂಕದ ವಾತಾವರಣ ನಿರ್ಮಾಣ ಆಗಿತ್ತು. ರಷ್ಯಾ ದಾಳಿ ಬೆನ್ನಲ್ಲೇ ಉಕ್ರೇನ್ ತೀಕ್ಷ್ಣವಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, ಜಗತ್ತಿನಾದ್ಯಂತ ಖಂಡನೆ ವ್ಯಕ್ತವಾಗಬೇಕು ಎಂದು ಆಗ್ರಹ ಮಾಡಿದೆ ಉಕ್ರೇನ್.
ಉಕ್ರೇನ್ ಕೂಡ ಮರುದಾಳಿ ನಡೆಸುತ್ತಾ?
ರಷ್ಯಾ ತನ್ನ ನೆಲದಲ್ಲಿ ಪ್ರಯಾಣಿಕ ರೈಲಿನ ಮೇಲೆ ದಾಳಿ ಮಾಡಿದ ಹಿನ್ನೆಲೆ ಇದೀಗ ಉಕ್ರೇನ್ ಭಾರಿ ರೊಚ್ಚಿಗೆದ್ದು ಕೂತಿದೆ. ಇದೇ ಕಾರಣಕ್ಕೆ ರಷ್ಯಾ ಮೇಲೆ ಉಕ್ರೇನ್ ಮರುದಾಳಿ ನಡೆಸಿ ಸೇಡಿಗೆ ಸೇಡು, ಅಂತಾ ಸೇಡು ತೀರಿಸಿಕೊಳ್ಳುತ್ತಾ? ಎಂಬ ಪ್ರಶ್ನೆ ಮೂಡಿದೆ. ಮತ್ತೊಂದು ಕಡೆ ರಷ್ಯಾ ಕೂಡ ಉಕ್ರೇನ್ ಪ್ರತಿದಾಳಿ ಎದುರಿಸಲು ಸನ್ನದ್ಧವಾಗಿದೆ. ಎರಡೂ ದೇಶಗಳು ಹೀಗೆ ಒಬ್ಬರ ಮೇಲೆ ಮತ್ತೊಬ್ಬರು ದಾಳಿ & ಪ್ರತಿದಾಳಿ ಮಾಡುತ್ತಾ ಸಾಮಾನ್ಯ ಜನರ ನೆಮ್ಮದಿ ಕೆಡಿಸುತ್ತಿದ್ದಾರೆ. ಉಕ್ರೇನ್‌ನ ಬಹುತೇಕ ಭಾಗಗಳು ಈಗಾಗಲೇ ವಿದ್ಯುತ್ ಇಲ್ಲದೆ ಪರದಾಡಿ ಹೋಗಿದ್ದು, ಇಂತಹ ಸಮಯದಲ್ಲೇ ರೈಲಿನ ಮೇಲೆ ಕೂಡ ಡೆಡ್ಲಿ ಅಟ್ಯಾಕ್ ಆಗಿರುವುದು ಭಾರಿ ಬೇಸರಕ್ಕೆ ಕಾರಣವಾಗಿದೆ.












Click it and Unblock the Notifications