ರಷ್ಯಾ ಕೊಟ್ಟ ಆಘಾತಕ್ಕೆ ಉಕ್ರೇನ್‌ಗೆ ನಡುಕ: ಉಕ್ರೇನ್ ಹಾರಿಸಿದ್ದ 125 ಡ್ರೋನ್ ಹೊಡೆದು ಉರುಳಿಸಿದ ರಷ್ಯಾ!

ರಷ್ಯಾ ವಿರುದ್ಧ ತನ್ನ ಕಿತಾಪತಿ ಮುಂದುವರಿಸಿರುವ ಉಕ್ರೇನ್ ಬರೋಬ್ಬರಿ 125 ಡ್ರೋನ್‌ನ ಮೂಲಕ ದಾಳಿಗೆ ಮುಂದಾಗಿದೆ ಎಂದು ಆರೋಪಿಸಲಾಗಿದೆ. ಕದನ ವಿರಾಮ ಘೋಷಿಸಬೇಕು ಎಂದು ಜಗತ್ತಿನ ಎದುರು ಅಂಗಲಾಚುವ ಉಕ್ರೇನ್ ತಾನೇ ರಷ್ಯಾ ವಿರುದ್ಧ ಕಿರಿಕ್ ತೆಗೆದು, ಮತ್ತೆ ಸಮಸ್ಯೆಗೆ ಸಿಲುಕುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅದರಲ್ಲೂ ಇದೀಗ ದಿಢೀರ್ ಅಂತಾ ರಷ್ಯಾ ಮೇಲೆ ಸುಮಾರು 125 ಡ್ರೋನ್ ಮೂಲಕ ದಾಳಿಗೆ ಮುಂದಾಗಿದ್ದ ಉಕ್ರೇನ್ ಸೇನೆಗೆ ಭರ್ಜರಿ ಶಾಕ್ ನೀಡಿದ್ದಾರೆ ರಷ್ಯಾ ಸೈನಿಕರು!

ರಷ್ಯಾ ಸೇನೆ ವಿಚಾರದಲ್ಲಿ ಸಾಕಷ್ಟು ಬಲಿಷ್ಠವಾಗಿದ್ದು, ತನ್ನ ಬಳಿ ಭೀಕರ ಶಸ್ತ್ರಾಸ್ತ್ರ ಸಂಗ್ರಹ ಮಾಡಿಕೊಂಡಿದೆ. ಅದರಲ್ಲೂ ರಷ್ಯಾ ಸೇನೆ ಯುದ್ಧಕ್ಕೆ ನಿಂತರೆ ಜಗತ್ತಿನ ದೊಡ್ಡ ದೊಡ್ಡ ದೇಶದ ಎದೆ ನಡುಗಿ ಹೋಗುತ್ತದೆ. ಹೀಗಿದ್ದರೂ ಉಕ್ರೇನ್ ಮಾತ್ರ ರಷ್ಯಾ ವಿರುದ್ಧ ಯುದ್ಧ ಮಾಡಿ, ಆ ಯುದ್ಧದಲ್ಲಿ ಗೆದ್ದು ಬೀಗುವ ಹುಮ್ಮಸ್ಸು ಹೊಂದಿದೆ ಅಂತಾ ಕಾಣುತ್ತದೆ. ಯಾಕೆ ಅಂದ್ರೆ ಪದೇ ಪದೇ ರಷ್ಯಾ ವಿರುದ್ಧ ದಾಳಿ ಮಾಡುತ್ತಿರುವ ಉಕ್ರೇನ್ ಹೊಸ ಸಂಚಲನಕ್ಕೆ ದಾರಿಯನ್ನ ಮಾಡಿಕೊಡುತ್ತಿದೆ. ಈ ಮೂಲಕ ರಷ್ಯಾ & ಉಕ್ರೇನ್‌ನ ಕಿತ್ತಾಟ ಸೈಲೆಂಟ್ ಆಗುವ ಬದಲು, ದಿನದಿಂದ ದಿನಕ್ಕೆ ಮತ್ತಷ್ಟು ಹೆಚ್ಚಾಗ್ತಿದೆ.

Allegedly Russian Military Destroyed 125 Ukrainian Drones

ಬರೋಬ್ಬರಿ 125 ಡ್ರೋನ್ ಉಡೀಸ್!

ರಷ್ಯಾ ಸೇನೆ ಇದೀಗ ತನ್ನ ದೇಶದ ಮೇಲೆ ಹಾರಿ ಬಂದಿದ್ದ ಬರೋಬ್ಬರಿ 125 ಡ್ರೋನ್‌ಗಳನ್ನ ನೆಲಕ್ಕೆ ಉರುಳಿಸಿದೆ. ದಿಢೀರ್ ಉಕ್ರೇನ್ ಸೇನೆಯಿಂದ ಈ ರೀತಿಯ ದಾಳಿ ಮಾಡಲಾಗಿದ್ದು, ಈ ದಾಳಿಯಲ್ಲಿ ರಷ್ಯಾ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ನಷ್ಟ ಅನುಭವಿಸುವ ಭಯ ಕೂಡ ಆವರಿಸಿತ್ತು. ಆದರೆ ಶತ್ರು ಪಡೆ ದಾಳಿ ಮಾಡಿರುವ ಬಗ್ಗೆ ಅಲರ್ಟ್ ಆಗಿದ್ದ ರಷ್ಯಾ ಸೈನಿಕರು ತಕ್ಷಣ ಶತ್ರುಗಳಿಗೆ ಬುದ್ಧಿ ಕಲಿಸಿದ್ದಾರೆ. ರಷ್ಯಾದ ವಸತಿ ಪ್ರದೇಶಗಳ ಕಡೆಗೆ ಹಾರಿ ಬರುತ್ತಿದ್ದ ನೂರಾರು ಡ್ರೋನ್‌ಗಳನ್ನ ಗುರುತಿಸಿ, ಕೂಡಲೇ ಉಕ್ರೇನ್‌ಗೆ ಸೇರಿದ್ದ 125 ಡ್ರೋನ್ ಉಡೀಸ್ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.

3 ವರ್ಷ ಪೂರೈಸಲಿದೆ ಯುದ್ಧ

ಒಂದು ಕಡೆ ಉಕ್ರೇನ್ ಹೀಗೆ ರಷ್ಯಾ ಮೇಲೆ ದಾಳಿ ಮಾಡೋದಕ್ಕೆ ಪ್ರಯತ್ನ ಮಾಡುತ್ತಿದ್ದರೆ ರಷ್ಯಾ ಸೇನೆ ಕೂಡ ಉಕ್ರೇನ್ ವಿರುದ್ಧ ಘೋರ ದಾಳಿ ನಡೆಸುತ್ತಿದೆ. ಇದರ ಪರಿಣಾಮ, ಇಬ್ಬರ ಈ ಜಗಳ ಲಕ್ಷಾಂತರ ಅಮಾಯಕರ ಜೀವ ತೆಗೆದಿದೆ ಎಂಬ ಗಂಭೀರ ಆರೋಪ ಕೂಡ ಕೇಳಿ ಬಂದಿದೆ. ಹಾಗೇ ಲೆಕ್ಕವಿಲ್ಲದಷ್ಟು ಜನ ಬೀದಿಗೆ ಬಿದ್ದು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. 2022ರ ಫೆಬ್ರವರಿಯಲ್ಲಿ ಆರಂಭವಾಗಿರುವ ಯುದ್ಧ ಇನ್ನೇನು ಕೆಲವೇ ದಿನದಲ್ಲಿ 3 ವರ್ಷ ಪೂರೈಸಲಿದೆ. ಇಂತಹ ಸಮಯದಲ್ಲೇ ಇಬ್ಬರ ಮಧ್ಯೆ ಸಂಧಾನವನ್ನು ನಡೆಸುವ ಪ್ರಯತ್ನ ಫಲ ನೀಡುತ್ತಿಲ್ಲ, ಹೀಗಾಗಿ ಇತ್ತೀಚೆಗೆ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ನಿಂತು ಉಕ್ರೇನ್ ಅಧ್ಯಕ್ಷ ಇಡೀ ಜಗತ್ತಿನ ಎದುರು ಯುದ್ಧ ನಿಲ್ಲಿಸುವಂತೆ ಅಂಗಲಾಚಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+