Russia & Ukraine: ಬಿತ್ತು.. ಬಿತ್ತು.. ಕ್ಷಿಪಣಿಗಳ ಮಳೆ ಬಿತ್ತು... ರಷ್ಯಾ ಹಾವಳಿಗೆ ಉಕ್ರೇನ್ ಉಡೀಸ್!
ಉಕ್ರೇನ್ ಸೇನೆ ರಷ್ಯಾ ಎದುರು ಇವತ್ತು ಶರಣಾಗುತ್ತೆ, ನಾಳೆ ಶರಣಾಗುತ್ತೆ ಅಂತಾ ಜಗತ್ತೇ ಈಗ ಕಾಯುತ್ತಿದೆ. ಯಾಕಂದ್ರೆ ಈಗಾಗಲೇ ಒಟ್ಟು 1 ಮಿಲಿಯನ್ ಅಂದ್ರೆ ಸುಮಾರು 10,00,000 ಜನರು ಮೃತಪಟ್ಟಿದ್ದಾರೆ ಎಂಬ ಆರೋಪ ಇದೆ. ಅಲ್ಲದೆ ಇನ್ನೊಂದು ಕಡೆ ರಷ್ಯಾ ಕೊಡ್ತಾ ಇರುವ ಏಟಿಗೆ ಈಗಾಗಲೇ ಭಾಗಶಃ ಉಕ್ರೇನ್ ನೆಲ ನಲುಗಿ ಹೋಗಿದೆ. ಪರಿಸ್ಥಿತಿ ಕೈಮೀರಿದ್ದು ಯಾವ ಕ್ಷಣದಲ್ಲಿ ಈ ರಷ್ಯಾ & ಉಕ್ರೇನ್ ಯುದ್ಧ 3ನೇ ಮಹಾಯುದ್ಧವಾಗಿ ಬದಲಾಗುತ್ತೋ? ಎಂಬ ಭಯ ಕಾಡುತ್ತಿದೆ, ಇಂತಹ ಸಮಯದಲ್ಲೇ....
ರಷ್ಯಾ ಸೇನೆ ಬಲಿಷ್ಠವಾಗಿದ್ದು, ಉಕ್ರೇನ್ ಮಿಲಿಟರಿಗೆ ಹೋಲಿಕೆ ಮಾಡಿದರೆ ರಷ್ಯಾ ಮಿಲಿಟರಿ ತುಂಬಾ ಸ್ಟ್ರಾಂಗ್ ಆಗಿದೆ. ಇದೇ ಕಾರಣಕ್ಕೆ ರಷ್ಯಾ & ಉಕ್ರೇನ್ ಕಾಳಗದಲ್ಲಿ ರಷ್ಯಾ ಸೇನೆಯ ಏಟಿಗೆ ಉಕ್ರೇನ್ ನಲುಗಿ ಹೋಗಿದೆ. ಪರಿಸ್ಥಿತಿ ಈಗ ಭಯ ಹುಟ್ಟಿಸುತ್ತಿದ್ದು, ಮುಂದೆ ಏನೆಲ್ಲಾ ನಡೆಯುತ್ತೆ ದೇವರೆ ಅಂತಾ ಜನ ಕೂಡ ಚಿಂತೆ ಮಾಡುವಂತೆ ಆಗಿದೆ. ಇಷ್ಟೆಲ್ಲದರ ನಡುವೆ ಉಕ್ರೇನ್ ದೇಶದ ವಿದ್ಯುತ್ ವ್ಯವಸ್ಥೆಯನ್ನೇ ನಾಶ ಮಾಡಲು, ರಷ್ಯಾ ಇದೀಗ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಉಕ್ರೇನ್ ವಿದ್ಯುತ್ ವ್ಯವಸ್ಥೆ ಉಡೀಸ್?
ರಷ್ಯಾ ಸೇನೆ ತನ್ನ ಬಳಿ ಇರುವ ಎಲ್ಲಾ ರೀತಿಯ ಅತ್ಯಾಧುನಿಕ ಅಸ್ತ್ರಗಳನ್ನು ಬಳಸಿಕೊಂಡು ಉಕ್ರೇನ್ ರಾಜಧಾನಿ ಭಾಗವನ್ನು ತನ್ನ ವಶಕ್ಕೆ ಪಡೆಯಲು ಮುನ್ನುಗ್ಗುತ್ತಿದೆ. ಆದರೆ ಅದಕ್ಕೂ ಮೊದಲು ಉಕ್ರೇನ್ ರಾಜಧಾನಿ ಕೀವ್ ಭಾಗದ ವಿದ್ಯುತ್ ವ್ಯವಸ್ಥೆಯನ್ನ ನಾಶ ಮಾಡುತ್ತಾ, ಏನೋ ದೊಡ್ಡದಾಗಿ ಪ್ಲಾನ್ ಮಾಡಿದಂತೆ ಕಾಣುತ್ತಿದೆ. ಇದೇ ಕಾರಣಕ್ಕೆ ರಷ್ಯಾ ಮಿಲಿಟರಿ, ತನ್ನ ಬಳಿ ಇರುವ ಅಸ್ತ್ರಗಳ ಪೈಕಿ ಇದೀಗ 100ಕ್ಕೂ ಹೆಚ್ಚು ಕ್ಷಿಪಣಿ ಅಂದ್ರೆ ಮಿಸೈಲ್ ಮತ್ತು ಡ್ರೋನ್ ಬಳಿಸಿ ಡೆಡ್ಲಿ ಅಟ್ಯಾಕ್ ಮಾಡಿದೆ ಎಂಬ ಆರೋಪ ಕೇಳಿ ಬಂದಿದೆ.
ಕರೆಂಟ್ ಇಲ್ಲದೆ ಜನರ ನರಳಾಟ
ಹೀಗೆ ರಷ್ಯಾ ಸೇನೆಯಿಂದ 100ಕ್ಕೂ ಹೆಚ್ಚು ಕ್ಷಿಪಣಿ & ಡ್ರೋನ್‌ಗಳ ಮೂಲಕ ದಾಳಿ ನಡೆದ ಬೆನ್ನಲ್ಲೇ, ಉಕ್ರೇನ್ ರಾಜಧಾನಿ ಕೀವ್‌ನ ಸುತ್ತಮುತ್ತ ವಿದ್ಯುತ್ ಸರಬರಾಜು ನಿಂತು ಹೋಗಿದೆ. ಮತ್ತೊಂದು ಕಡೆ ಉಕ್ರೇನ್ ದೇಶದಲ್ಲಿ ಇದೀಗ ಚಳಿಗಾಲ ಶುರುವಾಗಿದ್ದು ವಿದ್ಯುತ್ ವ್ಯವಸ್ಥೆ ಕೈಕೊಟ್ಟಿರುವ ಕಾರಣಕ್ಕೆ ಜನರು ನರಳುವಂತೆ ಆಗಿದೆ. ಇದರ ಜೊತೆಗೆ ಉಕ್ರೇನ್ ಸೈನಿಕರು ಕೂಡ ವಿದ್ಯುತ್ ಇಲ್ಲದೆ ಪರದಾಡುತ್ತಿದ್ದಾರೆ.
ಇದನ್ನೆಲ್ಲಾ ನೋಡುತ್ತಿದ್ದರೆ ರಷ್ಯಾ & ಉಕ್ರೇನ್ ಸೈಲೆಂಟ್ ಆಗಿ ಶಾಂತಿ ಮಾತುಕತೆ ಮಾಡಿ, ಪರಿಸ್ಥಿತಿ ತಣ್ಣಗೆ ಮಾಡಬೇಕಿದೆ. ಇಲ್ಲವಾದರೆ ಚಳಿಗಾಲದ ತೀವ್ರತೆಗೆ ಉಕ್ರೇನ್ ದೇಶದಲ್ಲಿರುವ ಜನ ಸಾಮಾನ್ಯರು ನರಳುವ ಪರಿಸ್ಥಿತಿ ಎದುರಾಗಲಿದೆ. ಅದರಲ್ಲೂ ಅಮೆರಿಕ ಕೂಡ ಇದೀಗ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಿದ್ದು, ಮುಂದಿನ ದಿನಗಳಲ್ಲಿ ಅಮೆರಿಕದ ಕಡೆಯಿಂದಲು ನೆರವು ಕಡಿತವಾಗುವ ಭಯ ಉಕ್ರೇನ್‌ಗೆ ಈಗ ಕಾಡುತ್ತಿದೆ.












Click it and Unblock the Notifications