Russia & Ukraine: ಉಕ್ರೇನ್ ವಿರುದ್ಧ ಅಣ್ವಸ್ತ್ರ ಎತ್ತಲು ಸಜ್ಜಾದ ರಷ್ಯಾ?
ಉಕ್ರೇನ್ ದೇಶಕ್ಕೆ ಇದೀಗ ಅಣ್ವಸ್ತ್ರ ಅಂದ್ರೆ ಪರಮಾಣು ಬಾಂಬ್‌ಗಳ ಭಯ ಶುರುವಾಗಿದ್ದು, ಈ ಮೂಲಕ ಮತ್ತೊಂದು ಮಹಾಯುದ್ಧದ ಭೀತಿ ಎದುರಾಗಿದೆ. ಯಾಕಂದ್ರೆ ರಷ್ಯಾ ವಿರುದ್ಧ ಯುದ್ಧ ಮಾಡುತ್ತಿರುವ ಉಕ್ರೇನ್ ಇದೀಗ ಹಲವು ರೀತಿಯ ತಪ್ಪುಗಳನ್ನ ಮಾಡುತ್ತಿದ್ದು, ಈ ಕಾರಣಕ್ಕೆ ರೊಚ್ಚಿಗೆದ್ದು ರಷ್ಯಾ ಇದೀಗ ಪರಮಾಣು ಅಸ್ತ್ರ ಬಳಸಬಹುದು ಎಂಬ ಭಯವೂ ಮೂಡಿದೆ. ಹಾಗಾದ್ರೆ ರಷ್ಯಾ ಬಳಿ ಇದೀಗ ಎಷ್ಟು ಪರಮಾಣು ಅಸ್ತ್ರಗಳು ಇವೆ? ಅಕಸ್ಮಾತ್ ರಷ್ಯಾ ತನ್ನ ಬಳಿ ಇರುವ ಅತ್ಯಂತ ಶಕ್ತಿಶಾಲಿ ಪರಮಾಣು ಬಾಂಬ್ ಸ್ಫೋಟಗೊಳಿಸಿದರೆ ಈ ಪರಿಸ್ಥಿತಿ ಹೇಗೆ ಇರಲಿದೆ?
ರಷ್ಯಾ ದೇಶ ನೋಡಲು ಎಷ್ಟು ದೊಡ್ಡದಾಗಿ ಇದೆಯೋ, ರಷ್ಯಾ ಸೇನೆ ಕೂಡ ಅಷ್ಟೇ ಶಕ್ತಿ ಹೊಂದಿದೆ. ಹೀಗೆ ಶಕ್ತಿಶಾಲಿ ಸೈನ್ಯ ಇಟ್ಟುಕೊಂಡಿರುವ ರಷ್ಯಾ ದೇಶ ತನ್ನ ಶಕ್ತಿ ಏನು ಅಂತಾ ಇಡೀ ಜಗತ್ತಿಗೇ ತೋರಿಸಿದೆ, ಅಲ್ಲದೆ ರಷ್ಯಾ ಬಳಿ ಇರುವ ಅಸ್ತ್ರಗಳು ಒಂದಕ್ಕಿಂತ ಒಂದು ಭಾರಿ ಭಯಾನಕ ಎನ್ನಬಹುದು. ಈ ಪೈಕಿ ರಷ್ಯಾ ಬಳಿ ಹೈಡ್ರೋಜನ್ ಬಾಂಬ್ ಇದ್ದು, ಇದನ್ನು ಮತ್ತೊಂದು ರೀತಿಯ ಪರಮಾಣು ಬಾಂಬ್ ಎನ್ನಬಹುದು. ಹಾಗಾದ್ರೆ ರಷ್ಯಾ ಬಳಿ ಇರುವ, ಅತ್ಯಂತ ಶಕ್ತಿ ಶಾಲಿ ಹೈಡ್ರೋಜನ್ ಬಾಂಬ್ ಪ್ರಯೋಗ ಮಾಡಿದರೆ ಏನಾಗಬಹುದು? ಬನ್ನಿ ಈ ಬಗ್ಗೆ ಮುಂದೆ ತಿಳಿಯೋಣ.

ರಷ್ಯಾ ರಾಶಿ ರಾಶಿ ಪರಮಾಣು...
ಜಗತ್ತಿನ ಪರಮಾಣು ಬಾಂಬ್‌ಗಳ ಪೈಕಿ ರಷ್ಯಾ ಬಳಿಯೇ ಸಾಕಷ್ಟು ಅಸ್ತ್ರಗಳು ಇವೆ. ಹೀಗಾಗಿ ರಷ್ಯಾ ಹೆಸರು ಕೇಳಿದರೆ ಸಾಕು, ಜಗತ್ತಿನ ದೊಡ್ಡ ದೊಡ್ಡ ದೇಶಗಳೇ ಒಂದು ಬಾರಿ ಹೆದರಿ ಕೂರುತ್ತವೆ. ಹೀಗಿದ್ದರೂ ಉಕ್ರೇನ್ ಮಾತ್ರ ತನ್ನ ದಾಳಿಯನ್ನ ಮುಂದುವರಿಸಿ, ರಷ್ಯಾ ಜೊತೆ ಮತ್ತಷ್ಟು ದ್ವೇಷ ಬೆಳೆಸಿಕೊಳ್ಳುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗುತ್ತಿರುವ ಹಿನ್ನೆಲೆ ಈಗಾಗಲೇ ರಷ್ಯಾ ಕೂಡ ತನ್ನ ಬಳಿ ಇರುವ ಪರಮಾಣು ಅಸ್ತ್ರಗಳನ್ನು ಒಂದು ಕಡೆ ಸಿದ್ಧ ಮಾಡಿದ್ದು, ಅಗತ್ಯ ಎನಿಸಿದ ತಕ್ಷಣ ದಾಳಿ ಮಾಡಲು ಸಿದ್ಧವಾಗಿದೆ ರಷ್ಯಾ ಮಿಲಿಟರಿ.
ರಷ್ಯಾ ಸುಮಾರು 70 ವರ್ಷಗಳಿಂದ ಕೂಡ ತನ್ನ ಬಳಿ ದೊಡ್ಡ ದೊಡ್ಡ ಪರಮಾಣು ಬಾಂಬ್ ಇಟ್ಟುಕೊಂಡು ಬದುಕುತ್ತಿದೆ. ಹಾಗೇ ಶತ್ರುಗಳಿಗೆ ಈ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸುತ್ತಾ ಯಾವಾಗ ಬೇಕಾದರೂ ನಾನು ದಾಳಿಗೆ ಸಿದ್ಧ ಎಂಬ ಸಂದೇಶ ನೀಡುತ್ತಿದೆ ರಷ್ಯಾ. ಇದನ್ನು ಬಿಡಿ, ಈಗಾಗಲೇ ರಷ್ಯಾ ಅಧ್ಯಕ್ಷ ಪುಟಿನ್ ತಮ್ಮ ಸ್ನೇಹಿತ ರಾಷ್ಟ್ರ ಬೆಲಾರಸ್ ಬಳಿ ಪರಮಾಣು ಬಾಂಬ್ ತುಂಬಿಸಿರುವ ಕ್ಷಿಪಣಿಗಳನ್ನ ಸಾಲಾಗಿ ನಿಲ್ಲಿಸಿದ್ದು, ಯಾವಾಗ ಬೇಕಾದರೂ ಈ ಕ್ಷಿಪಣಿ ರಾಶಿಯನ್ನು ರಷ್ಯಾ ಸೇನೆ ಉಕ್ರೇನ್ ವಿರುದ್ಧ ಉಡಾಯಿಸುವ ಭಯ ಕಾಡುತ್ತಿದೆ.
ರಷ್ಯಾ ಬಳಿ ಹೈಡ್ರೋಜನ್ ಬಾಂಬ್!
ಪರಮಾಣು ಬಾಂಬ್ ಅಂದ ತಕ್ಷಣ ಒಂದೇ ರೀತಿ ಇರುವುದಿಲ್ಲ, ಪ್ರಮುಖವಾಗಿ ಪರಮಾಣು ಬಾಂಬ್‌ಗಳ ಪೈಕಿ 2 ವಿಧ ಇದೆ. ಒಂದು ಪರಮಾಣು ವಿದಳನ ಪ್ರಕ್ರಿಯೆ ಮೂಲಕ ಸ್ಫೋಟ ಮಾಡುವ ಬಾಂಬ್‌ಗಳು. ಈ ಪರಮಾಣು ವಿದಳನ ಪ್ರಕ್ರಿಯೆಯ ಮೂಲಕ ಸ್ಫೋಟವಾಗುವ ಬಾಂಬ್‌ಗಳು ವಿನಾಶಕಾರಿ, ಅದೇ ಮತ್ತೊಂದು ರೀತಿಯ ಪರಮಾಣು ಬಾಂಬ್ ಇದೆ. ಅದು ಹೈಡ್ರೋಜನ್ ಬಾಂಬ್ ಆಗಿದ್ದು ಇದನ್ನು ಪರಮಾಣು ಸಮ್ಮಿಲನದ ಮೂಲಕ ದಾಳಿಗಳಲ್ಲಿ ಬಳಸಲಾಗುತ್ತದೆ. ಅಕಸ್ಮಾತ್ ಒಂದು ಬಾರಿ ಹೈಡ್ರೋಜನ್ ಬಾಂಬ್ ಬಳಸಿದರೆ ಅದು ಇಡೀ ಭೂಮಿಯನ್ನೇ ನಾಶ ಮಾಡುವ ಸಾಮರ್ಥ್ಯ ಹೊಂದಿರುತ್ತದೆ!












Click it and Unblock the Notifications