Russia & Ukraine: ಉಕ್ರೇನ್ ಹಳ್ಳಿಗಳು ಕಬ್ಜಾ, ರಷ್ಯಾ ಕೊಟ್ಟ ಏಟಿಗೆ ಶತ್ರುಪಡೆ ತತ್ತರ!

ರಷ್ಯಾ & ಉಕ್ರೇನ್ ಫೈಟಿಂಗ್ ನೋಡಿ ಏನು ಮಾಡಬೇಕು ಅಂತಾ ಜಗತ್ತಿಗೇ ಗೊತ್ತಾಗುತ್ತಿಲ್ಲ. ಈ ಪೈಕಿ ಯುರೋಪ್ ಖಂಡದ ದೇಶಗಳಲ್ಲಿ ಇನ್ನೂ ಆತಂಕಕಾರಿ ವಾತಾವರಣ ನಿರ್ಮಾಣ ಆಗಿದೆ. ಯಾಕಂದ್ರೆ ಈಗಾಗಲೇ ಯುರೋಪ್ ದೇಶಗಳಲ್ಲಿ ಸಾಕಷ್ಟು ಸಮಸ್ಯೆಗಳು ಶುರುವಾಗಿದ್ದು, ಈ ರೀತಿ ರಷ್ಯಾ & ಉಕ್ರೇನ್ ಬಡಿದಾಡುತ್ತಿರುವ ರೀತಿ ನೋಡಿ ವಿಶ್ವಸಂಸ್ಥೆ ಕೂಡ ಆತಂಕದ ಸುಳಿಗೆ ಸಿಲುಕಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ರಷ್ಯಾ ತನ್ನದೇ ಆದ ತಂತ್ರ ಹೂಡಿ ಉಕ್ರೇನ್ ಬುಡ ಅಲುಗಾಡಿಸುತ್ತಿದೆ!

ಉಕ್ರೇನ್ ಭೂಮಿಯನ್ನ ಈಗಾಗಲೇ ಭಾಗಶಃ ನಾಶ ಮಾಡಿರುವ ರಷ್ಯಾ ಮಿಲಿಟರಿ, ಯಾರೇ ಕೆಮ್ಮಿದರೂ ಕಥೆ ಮುಗಿಸುತ್ತಿದೆ. ಹೀಗೆ ಒಂದೊಂದು ಹಂತದಲ್ಲೂ ಉಕ್ರೇನ್‌ಗೆ ಕರೆಂಟ್ ಶಾಕ್ ಕೊಟ್ಟು ರಷ್ಯಾ ಮುಂದೆ ನುಗ್ಗುತ್ತಿದೆ. ಹೀಗೆ ಶತ್ರುಪಡೆ ತನ್ನ ನೆಲದ ಒಳಗೆ ನುಗ್ಗಿ ಬಂದರೂ ಅಸಹಾಯಕ ಸ್ಥಿತಿಯಲ್ಲಿ ಉಕ್ರೇನ್ ನರಳುತ್ತಿದ್ದು, ಸೋಲು ಒಪ್ಪಿಕೊಂಡಂತೆ ಕೂತಿದೆ.

Allegedly Russia Is Capturing Ukrainian Villages One By One From Last Few Days

ರಷ್ಯಾ ಸೇನೆ ಹಿಡಿತದಲ್ಲಿ ಉಕ್ರೇನ್ ಹಳ್ಳಿಗಳು?

ಹೀಗೆ ಸೋಲು ಕಂಡಿದ್ದರೂ, ಡ್ರೋನ್ & ಮಿಸೈಲ್ ಮೂಲಕ ಉಕ್ರೇನ್ ಸೇನೆ ರಷ್ಯಾ ವಿರುದ್ಧ ತನ್ನ ದಾಳಿ ಮುಂದುವರಿಸಿದೆ. ಇಷ್ಟೆಲ್ಲದರ ನಡುವೆ, ಉಕ್ರೇನ್ ಹಳ್ಳಿಗಳನ್ನು ಒಂದೊಂದಾಗಿ ಕಬ್ಜಾ ಮಾಡುತ್ತಿರುವ ರಷ್ಯಾ ಹೊಸ ಆಘಾತ ನೀಡುತ್ತಿದೆ. ಇದೀಗ ಸಿಗುತ್ತಿರುವ ಮಾಹಿತಿಯ ಪ್ರಕಾರ ಉಕ್ರೇನ್ ರಾಜಧಾನಿ ಕೀವ್ ಸುತ್ತಮುತ್ತಲ ಬಹುತೇಕ ಹಳ್ಳಿಗಳು ಈಗಾಗಲೇ ರಷ್ಯಾ ಸೇನೆ ಹಿಡಿತಕ್ಕೆ ಸಿಲುಕಿದೆ ಎನ್ನಲಾಗುತ್ತಿದೆ.

ಉಕ್ರೇನ್‌ಗೆ ಇಷ್ಟು ಶಕ್ತಿ ಬಂದಿದ್ದು ಹೇಗೆ?

ಹೌದು, ರಷ್ಯಾ ವಿರುದ್ಧ ಇದೀಗ ಡ್ರೋನ್ & ಮಿಸೈಲ್ ಬಳಸಿ ಉಕ್ರೇನ್ ಈ ರೇಂಜ್‌ಗೆ ದಾಳಿ ಮಾಡುತ್ತಿರುವ ರೀತಿ ನೋಡಿದರೆ ಒಂದು ಬಲವಾದ ಅನುಮಾನ ಕಾಡುತ್ತದೆ. ಉಕ್ರೇನ್ ಸೇನೆಗೆ ದಿಢೀರ್ ಇಷ್ಟು ಶಕ್ತಿ ಬಂದಿದ್ದು ಹೇಗೆ? ಎಂಬ ಪ್ರಶ್ನೆ ಮೂಡುತ್ತದೆ. ಯಾಕಂದ್ರೆ ರಷ್ಯಾ ಕೈಲಿ ಒದೆ ತಿನ್ನುತ್ತಿದ್ದ ಉಕ್ರೇನ್ ದಿಢೀರ್ ಈ ರೀತಿಯಾಗಿ ತಿರುಗೇಟು ನೀಡುತ್ತಿರುವುದನ್ನ ನೋಡಿ ಇಡೀ ಜಗತ್ತೇ ಇದೀಗ ಆಘಾತಕ್ಕೆ ಒಳಗಾಗಿದೆ. ಯಾಕಂದ್ರೆ ಉಕ್ರೇನ್ ಆಡುತ್ತಿರುವ ರೀತಿ ನೋಡಿ ರಷ್ಯಾ ತನ್ನ ಬಳಿ ಇರುವ ಅಪಾಯಕಾರಿ ನ್ಯೂಕ್ಲಿಯರ್ ವೆಪನ್ಸ್ ಬಳಸಿಬಿಟ್ಟರೆ ಕಥೆ ಏನು?

ಹೀಗೆ ಒಂದು ಕಡೆ ರಷ್ಯಾ ದಾಳಿಯ ಬಗ್ಗೆ ಆತಂಕ ಕಾಡುವ ಬೆನ್ನಲ್ಲೇ, ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ನೀಡುತ್ತಿರುವ ಬೆಂಬಲ ಪಡೆದು ಉಕ್ರೇನ್ ಇದೀಗ ಘೋರ ದಾಳಿಯ ನಡೆಸುತ್ತಿದೆ. ನ್ಯಾಟೋ ಒಕ್ಕೂಟದ ದೇಶಗಳು ಅದರಲ್ಲೂ ಪ್ರಮುಖವಾಗಿ ಅಮೆರಿಕ ಸರ್ಕಾರ ಭಾರಿ ದೊಡ್ಡ ಪ್ರಮಾಣದ ನೆರವನ್ನು ಉಕ್ರೇನ್ ಸೇನೆಗೆ ನೀಡುತ್ತಿದೆ. ಹೀಗಾಗಿ ಉಕ್ರೇನ್ ತನ್ನ ಶತ್ರು ರಷ್ಯಾ ವಿರುದ್ಧ ತಿರುಗಿಬಿದ್ದು ದಾಳಿ ಮಾಡುತ್ತಿದೆ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+