ಉಕ್ರೇನ್ ತೈಲ ಘಟಕ & ವಿದ್ಯುತ್ ಘಟಕ ಉಡೀಸ್ ಮಾಡಿ ಕ್ರಿಸ್‌ಮಸ್ ದಿನವೇ ಶಾಕ್ ನೀಡಿದ ರಷ್ಯಾ!

ಕ್ರಿಸ್‌ಮಸ್ ತುಂಬಾ ದೊಡ್ಡ ಹಬ್ಬವಾಗಿ ಆಚರಣೆ ಮಾಡುತ್ತವೆ ಪಾಶ್ಚಿಮಾತ್ಯ ದೇಶಗಳು. ಈ ನಡುವೆ ಕ್ರಿಶ್ಚಿಯನ್ ಧರ್ಮ ಪಾಲನೆ ಮಾಡುವ ದೇಶಗಳಲ್ಲಿ ಈ ಹಬ್ಬವೇ ದೊಡ್ಡದು. ಅದೇ ರೀತಿ ಉಕ್ರೇನ್ ದೇಶದಲ್ಲಿ ಕೂಡ, ಕ್ರಿಸ್‌ಮಸ್ ಆಚರಣೆ ದೊಡ್ಡದಾಗಿ ನಡೆಯುತ್ತಾ ಬಂದಿದೆ. ಇಷ್ಟೆಲ್ಲದರ ನಡುವೆ ಕಳೆದ 2 ಕ್ರಿಸ್‌ಮಸ್ ಹಬ್ಬಗಳು ಉಕ್ರೇನ್ ಪಾಲಿಗೆ ರಕ್ತಸಿಕ್ತವಾಗಿದ್ದು, ಅದೇ ರೀತಿ ನಿನ್ನೆ ಕ್ರಿಸ್‌ಮಸ್ ದಿನ ಕೂಡ ಉಕ್ರೇನ್ ದೇಶದಲ್ಲಿ ಘೋರ ದುರಂತ ನಡೆದು ಹೋಗಿದೆ.

ಉಕ್ರೇನ್ ದೇಶವು ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇದ್ದು, ಹೀಗಾಗಿ ಸಾಕಷ್ಟು ಚಳಿಯ ವಾತಾವರಣ ಅಲ್ಲಿ ಇರುತ್ತದೆ. ಅದರಲ್ಲೂ ಚಳಿಗಾಲ ಶುರುವಾದರೆ ಸುಮಾರು 5 ರಿಂದ 6 ತಿಂಗಳು ನಿರಂತರವಾಗಿ ಹಿಮ ಬೀಳುತ್ತಲೇ ಇರುತ್ತದೆ. ಜನರು ಕೂಡ ನಡುಗುವ ಚಳಿ ನಡುವೆ ಜೀವ ಉಳಿಸಿಕೊಂಡು ಜೀವನ ನಡೆಸಬೇಕು. ಆದರೆ ಹೀಗೆ ಚಳಿಯಿಂದ ರಕ್ಷಣೆ ಪಡೆಯೋಕೆ ಉಕ್ರೇನ್ ಪ್ರಜೆಗಳಿಗೆ ವಿದ್ಯುತ್ ಬೇಕು & ಪೆಟ್ರೋಲ್, ಗ್ಯಾಸ್ ಅತ್ಯಗತ್ಯ. ಆದರೆ ಈಗ ರಷ್ಯಾ ಸೇನೆ ಹುಡುಕಿ ಹುಡುಕಿ ಉಕ್ರೇನ್‌ನ ವಿದ್ಯುತ್ & ತೈಲ ಘಟಕಗಳನ್ನೇ ಉಡೀಸ್ ಮಾಡ್ತಿದೆ!

Allegedly Russia Has Been Attacks The Ukraine Energy Network On Christmas Day

ಕ್ರಿಸ್‌ಮಸ್ ದಿನವೇ ಘೋರ ಘಟನೆ!

ಕಳೆದ 1 ತಿಂಗಳಿಂದಲೂ ನಿರಂತರವಾಗಿ ಈ ರೀತಿ ರಷ್ಯಾ ಮಿಲಿಟರಿ ತನ್ನ ದಾಳಿ ನಡೆಸುತ್ತಾ ಇದ್ದು, ಉಕ್ರೇನ್ ಪ್ರಜೆಗಳು ಬೆಚ್ಚಿಬಿದ್ದು ನಲುಗಿ ಹೋಗಿದ್ದಾರೆ. ಅದೇ ರೀತಿಯಾಗಿ ನಿನ್ನೆಯು ಕೂಡ ಉಕ್ರೇನ್ ಶಕ್ತಿ ಘಟಕಗಳ ಮೇಲೆ ಭೀಕರ ದಾಳಿ ನಡೆಸಲಾಗಿದೆ. ಈ ಮೂಲಕ ಭಾರಿ ದೊಡ್ಡ ಎಡವಟ್ಟು ನಡೆದು ಹೋಗಿದ್ದು, ಹಲವರ ಜೀವ ಬಲಿಯಾಗಿದ್ದರೆ ಹತ್ತಾರು ಜನರಿಗೆ ಸಾವು & ಬದುಕಿನ ಹೋರಾಟ ಶುರುವಾಗಿದೆ. ಮತ್ತೊಂದು ಕಡೆ ಶಾಂತಿಯ ಸಂದೇಶವನ್ನು ಸಾರಬೇಕಿದ್ದ ಕ್ರಿಸ್‌ಮಸ್ ಹಬ್ಬದ ದಿನವೇ ಈ ರೀತಿಯ ಘೋರ ಘಟನೆ ನಡೆದು ಹೋಗಿದೆ.

ಟ್ರಂಪ್ ಬರುತ್ತಿದ್ದಂತೆ ಯುದ್ಧ ನಿಲ್ಲುತ್ತಾ?

ರಷ್ಯಾ ತನ್ನ ಶಕ್ತಿಯನ್ನು ಮೀರಿ ಇದೀಗ ಉಕ್ರೇನ್ ಮೇಲೆ ದಾಳಿ ನಡೆಸುತ್ತಿರುವ ಆರೋಪವು ಕೇಳಿ ಬರುತ್ತಿದೆ. ಇನ್ನೊಂದು ಕಡೆ ಪಾಶ್ಚಿಮಾತ್ಯ ದೇಶಗಳ ಎದುರು ಗೌರವ ಉಳಿಸಿಕೊಂಡು ತನ್ನ ಭೂಮಿ ಕಾಪಾಡಿಕೊಳ್ಳುವ ಜವಾಬ್ದಾರಿ ಪುಟಿನ್ ಅವರ ಮೇಲೆ ಇದೆ. ಇಷ್ಟೆಲ್ಲ ಸವಾಲು & ಸಮಸ್ಯೆ ನಡುವೆ ಡೊನಾಲ್ಡ್ ಟ್ರಂಪ್ ಅವರು ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ತಕ್ಷಣವೇ ರಷ್ಯಾ & ಉಕ್ರೇನ್ ಯುದ್ಧ ನಿಲ್ಲುತ್ತಾ? ಎಂಬ ಪ್ರಶ್ನೆ ಮೂಡಿದೆ.

ಒಟ್ನಲ್ಲಿ ಡೊನಾಲ್ಡ್ ಟ್ರಂಪ್ ಅವರ ಎಂಟ್ರಿಗೆ ಕೌಂಟ್‌ಡೌನ್ ಶುರುವಾಗಿದ್ದು, ಜೋ ಬೈಡನ್ ಆಡಳಿತ ಇನ್ನೇನು ಕೊನೆಯಾಗುತ್ತಿದೆ. ಹೀಗಾಗಿ ಟ್ರಂಪ್ ಅವರು ಚಾಲೆಂಜ್ ಮಾಡಿದ್ದಂತೆಯೇ, ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ 24 ಗಂಟೆಗಳ ಒಳಗಾಗಿ ಯುದ್ಧ ನಿಲ್ಲುವ ನಿರೀಕ್ಷೆಯೂ ಮೂಡಿದೆ. ಆದರೆ ಇದಕ್ಕೆಲ್ಲಾ ಉತ್ತರ ಹುಡುಕಲು ಇನ್ನಷ್ಟು ದಿನ ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+