ಉಕ್ರೇನ್ ಡ್ರೋನ್ ದಾಳಿ ವಿರುದ್ಧ ರೊಚ್ಚಿಗೆದ್ದ ರಷ್ಯಾ ಪಡೆಗಳು!

ಕೀವ್: ರಷ್ಯಾ ಹಾಗೂ ಉಕ್ರೇನ್ ನಡುವೆ ಯುದ್ಧ ದಿನದಿಂದ ದಿನಕ್ಕೆ ಭೀಕರವಾಗುತ್ತಿದ್ದು, ಇಬ್ಬರ ಜಗಳದಲ್ಲಿ ಈಗಾಗಲೇ ಲಕ್ಷಾಂತರ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆಂಬ ಆರೋಪ ಇದೆ. ಆದರೂ ಯುದ್ಧ ನಿಲ್ಲಿಸಲು ಎರಡೂ ದೇಶಗಳು ಸಿದ್ಧವಿಲ್ಲ. ಹೀಗಾಗಿಯೇ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದು, ಇದೀಗ ಉಕ್ರೇನ್ ತನ್ನ ನೆಲೆಗಳ ಮೇಲೆ ಭೀಕರವಾದ ಡ್ರೋನ್ ದಾಳಿ ನಡೆಸಿದೆ ಎಂದು ರಷ್ಯಾ ರೊಚ್ಚಿಗೆದ್ದಿದೆ.

2014ರ ಬಳಿಕ ರಷ್ಯಾ ವಶದಲ್ಲಿರುವ ಕ್ರಿಮಿಯಾ ಸೇರಿದಂತೆ ರಷ್ಯಾ ಗಡಿ ಭಾಗದ ರಾಜ್ಯಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ ದಾಳಿಗೆ ಓರ್ವ ಮಹಿಳೆ ಕೂಡ ಬಲಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಯಾಗಿ 9 ಉಕ್ರೇನ್ ಡ್ರೋನ್‌ಗಳನ್ನ ಪುಡಿಪುಡಿ ಮಾಡಿರುವುದಾಗಿ ರಷ್ಯಾ ಸೇನೆ ಹೇಳಿದೆ. ಇಷ್ಟಾದರೂ ಪರಿಸ್ಥಿತಿ ತಣ್ಣಗಾಗಿಲ್ಲ, ಉಕ್ರೇನ್ ನಡೆಸಿರುವ ದಾಳಿಗೆ ಪ್ರತಿಯಾಗಿ ರಷ್ಯಾ ಕೂಡ ಅಟ್ಯಾಕ್ ಮಾಡಲು ಸಿದ್ಧತೆ ನಡೆಸಿದೆ. ಹೀಗಾಗಿ ಗಡಿ ಭಾಗದಲ್ಲಿ ಜನರು ಬೆಚ್ಚಿಬಿದ್ದಿದ್ದಾರೆ. ಈಗಾಗಲೇ ಉಕ್ರೇನ್ ಭಾಗಶಃ ಸ್ಮಶಾನ ರೂಪ ಪಡೆದಿದೆ.

Allegedly Russia destroyed 9 Ukrainian drones

ಉಕ್ರೇನ್ ನೆರವಿಗೆ ನಿಂತ ದಕ್ಷಿಣ ಕೊರಿಯಾ

ರಷ್ಯಾ ವಿರುದ್ಧ ಹೋರಾಟ ನಡೆಸಲು ಉಕ್ರೇನ್‌ಗೆ ಪಾಶ್ಚಿಮಾತ್ಯ ದೇಶಗಳು ದೊಡ್ಡ ನೆರವು ನೀಡುತ್ತಿವೆ. ಅದೇ ರೀತಿ ಪಾಶ್ಚಿಮಾತ್ಯ ರಾಷ್ಟ್ರಗಳ ಜೊತೆಗೆ ಗುರುತಿಸಿಕೊಂಡಿರುವ ದಕ್ಷಿಣ ಕೊರಿಯಾ ಕೂಡ ಉಕ್ರೇನ್ ನೆರವಿಗೆ ನಿಂತಿದೆ. ಹೊಸದಾಗಿ ಸುಮಾರು 150 ಮಿಲಿಯನ್ ಡಾಲರ್ ನೆರವು ನೀಡುವುದಾಗಿ ದಕ್ಷಿಣ ಕೊರಿಯಾ ಘೋಷಿಸಿದ್ದು, ಇದರಲ್ಲಿ ಲ್ಯಾಂಡ್ ಮೈನ್ ಕಂಡುಹಿಡಿಯುವ ಉಪಕರಣಗಳು ಕೂಡ ಸೇರಲಿವೆ. ಹಾಗೇ ಇದರ ಜೊತೆಯಲ್ಲೇ ಉಕ್ರೇನ್ ಜನರಿಗೆ ಅಗತ್ಯವಿರುವ ವಸ್ತುಗಳನ್ನ ಕೂಡ ಪೂರೈಸಲಾಗುವುದು ಎಂದಿದೆ ದಕ್ಷಿಣ ಕೊರಿಯಾ.

ಅಮೆರಿಕದಿಂದಲೂ ಸಾಕಷ್ಟು ಸಹಾಯ

ರಷ್ಯಾ ವಿರುದ್ಧ ಹೋರಾಡಲು ಅಮೆರಿಕ ಶಸ್ತ್ರಾಸ್ತ್ರಗಳನ್ನ ಉಕ್ರೇನ್‌ಗೆ ಕಳುಹಿಸುತ್ತಿದೆ. ಉಕ್ರೇನ್ ಮೇಲೆ ರಷ್ಯಾದ ಸೇನೆ ಆಕ್ರಮಣ ಆರಂಭಿಸಿದ ಬಳಿಕ ಅಮೆರಿಕ ಭಾರಿ ನೆರವು ನೀಡ್ತಿದೆ. ರಷ್ಯಾ ದೀರ್ಘಕಾಲದ ಯುದ್ಧಕ್ಕೆ ಸಿದ್ಧವಾಗಿ ಬಂದಿದೆ. ರಷ್ಯಾ ಅಧ್ಯಕ್ಷ ಪುಟಿನ್‌ರ ಆಪ್ತರೇ ಈ ಮಾಹಿತಿ ನೀಡಿದ್ದರು. ಮುಂದಿನ 10 ವರ್ಷಗಳಲ್ಲೂ ರಷ್ಯಾ & ಉಕ್ರೇನ್ ಯದ್ಧ ನಿಲ್ಲಲ್ಲ ಎಂದಿದ್ದರು. ಹೀಗೆ ಅಮೆರಿಕಗೆ ಕೂಡ ತನ್ನ ತಂತ್ರಗಳಲ್ಲಿ ಫ್ಲಾಪ್ ಆಗುತ್ತಿದ್ದಿದ್ದು ಗೊತ್ತಾಗಿದೆ. ಈ ಕಾರಣಕ್ಕೆ ಅಮೆರಿಕ & ನ್ಯಾಟೋ ಪಡೆಗಳು ಕೂಡ ರಷ್ಯಾ ವಿರುದ್ಧ ದೀರ್ಘ ಕಾಲದ ಯುದ್ಧಕ್ಕೆ ಸನ್ನದ್ಧವಾಗಿ ಉಕ್ರೇನ್ ಪರ ನಿಲ್ಲುತ್ತಿವೆ. ಇದೇ ಸಂದರ್ಭದಲ್ಲಿ ದಕ್ಷಿಣ ಕೊರಿಯಾ ಕೂಡ ನೆರವು ನೀಡ್ತಿದೆ.

ಅವರ ಮೇಲೆ ಇವರು, ಇವರ ಮೇಲೆ ಅವರು!

ಅತ್ತ ರಷ್ಯಾ ದಾಳಿ ಮಾಡಿದೆ ಅಂತಾ ಉಕ್ರೇನ್ ದಾಳಿ ಮಾಡುತ್ತಿದೆ. ಇತ್ತ ಉಕ್ರೇನ್ ನಮ್ಮ ಮೇಲೆ ದಾಳಿ ಮಾಡಿದೆ ಅಂತಾ ರಷ್ಯಾ ದಾಳಿ ನಡೆಸುತ್ತಿದೆ. ಹೀಗೆ ಎರಡೂ ದೇಶಗಳು ಹೊಡೆದಾಟ ಮುಂದುವರಿಸಿವೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಸ್ಥಿತಿ ನೋಡುತ್ತಿದ್ದರೆ ಸೇಡಿಗೆ ಸೇಡು ತೀರಿಕೊಳ್ಳುತ್ತಾ ಎರಡೂ ಬಣಗಳು ಮತ್ತಷ್ಟು ದಿನ ಕಚ್ಚಾಡುವುದು ಪಕ್ಕಾ. ಹೀಗಾಗಿ ಯುದ್ಧ ನಿಲ್ಲಿಸೋಕೆ ಜಗತ್ತು ಒಂದಾಗಬೇಕು ಎಂಬ ಒತ್ತಾಯ ಕೂಡ ಕೇಳಿಬರುತ್ತಿದೆ. ಆದರೆ ಆ ಒತ್ತಾಸೆ ಈಡೇರುತ್ತಿಲ್ಲ, ಅತ್ತ ಉಕ್ರೇನ್ ಕೂಡ ಮಾತುಕತೆಗೆ ಸಿದ್ಧವಿಲ್ಲ. ಇತ್ತ ರಷ್ಯಾ ಕೂಡ ತನ್ನ ಹಠ ಬಿಡ್ತಿಲ್ಲ.

Allegedly Russia destroyed 9 Ukrainian drones

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮ ಎರಡೂ ದೇಶಗಳ ಅಮಾಯಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಈವರೆಗೆ ಸೈನಿಕರು ಸೇರಿ ಲಕ್ಷಾಂತರ ಅಮಾಯಕರು ಪ್ರಾಣ ಬಿಟ್ಟಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಒಟ್ನಲ್ಲಿ ಇದನ್ನೆಲ್ಲಾ ನೋಡುತ್ತಿದ್ದರೆ ಯುದ್ಧ ಇನ್ನಷ್ಟು ವರ್ಷಗಳ ಕಾಲ ಮುಂದುವರಿಯುವುದು ಗ್ಯಾರಂಟಿ ಎಂಬಂತಾಗಿದೆ. ಹೀಗಾಗಿ ಜಗತ್ತು ಕೂಡ ಮೂರನೇ ಮಹಾಯುದ್ಧದ ಬಗ್ಗೆ ಭಾರಿ ಭಯಗೊಂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+