Ukraine & Russia: 117 ಉಕ್ರೇನ್ ಡ್ರೋನ್‌ಗಳನ್ನ ಉಡೀಸ್ ಮಾಡಿದ ರಷ್ಯಾ!

ರಷ್ಯಾ & ಉಕ್ರೇನ್ ತೀವ್ರ ತಿಕ್ಕಾಟದ ನಡುವೆ, ಉಕ್ರೇನ್ ಹಾರಿಸುತ್ತಿರುವ ಡ್ರೋನ್‌ಗಳನ್ನ ಇದೀಗ ರಷ್ಯಾ ಮಿಲಿಟರಿ ಧೂಳ್ ಧೂಳ್ ಮಾಡಿದೆ. ಉಕ್ರೇನ್ ಈಗ ನೇರವಾಗಿ ರಷ್ಯಾ ನೆಲಕ್ಕೆ ನುಗ್ಗಿ ಕಾರ್ಯಾಚರಣೆ ಆರಂಭ ಮಾಡಿದೆ. ಇದೇ ಸಮಯದಲ್ಲಿ ಎಚ್ಚೆತ್ತುಕೊಂಡಿರುವ ರಷ್ಯಾ ಸೇನೆ ಡ್ರೋನ್ ದಾಳಿಯನ್ನು ವಿಫಲಗೊಳಿಸಿ, ಉಕ್ರೇನ್ ಮಿಲಿಟರಿ ಎದೆ ನಡುಗುವಂತೆ ಮಾಡಿದೆ. ಹಾಗಾದ್ರೆ ರಷ್ಯಾ ಒಳಗೆ ನುಗ್ಗಿರುವ ಉಕ್ರೇನ್ ಸೇನೆ ಕಥೆ ಏನಾಯ್ತು? ಬನ್ನಿ ತಿಳಿಯೋಣ.

ಉಕ್ರೇನ್ ಈಗ ರೊಚ್ಚಿಗೆದ್ದು ರಷ್ಯಾ ವಿರುದ್ಧ ಭೀಕರ ದಾಳಿ ನಡೆಸುತ್ತಿದೆ. ಆದರೆ ಹೀಗೆಲ್ಲಾ ಉಕ್ರೇನ್ ನಡೆಸುವ ದಾಳಿಯನ್ನ ರಷ್ಯಾ ಮಿಲಿಟರಿ ಪ್ಲಾನ್ ಮಾಡಿ ಧೂಳ್ ಧೂಳ್ ಮಾಡ್ತಿದೆ. ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳು ನೀಡಿರುವ ಭಯಾನಕ ಶಸ್ತ್ರಾಸ್ತ್ರಗಳನ್ನ ಬಳಸಿ ಹೀಗೆ ದಾಳಿ ನಡೆಸುತ್ತಿದೆ ಉಕ್ರೇನ್ ಸೇನೆ. ಅದರಲ್ಲೂ, ಅಮೆರಿಕ ಒಂದರಿಂದಲೇ ಲಕ್ಷ ಲಕ್ಷ ಕೋಟಿ ರೂಪಾಯಿ ನೆರವು ಪಡೆದಿದೆ ಉಕ್ರೇನ್. ಅದನ್ನೆಲ್ಲಾ ಬಳಸಿ ರಷ್ಯಾ ಸೋಲಿಗೆ ಈಗ ಪಣತೊಟ್ಟು ನಿಂತಿದೆ. ಆದರೆ ಹೀಗೆ ದಾಳಿ ನಡೆಸುತ್ತಿರುವ ಉಕ್ರೇನ್‌ಗೆ ಎಲ್ಲ ಉಲ್ಟಾ ಆಗುತ್ತಿದೆ.

Allegedly Russia Destroyed 117 Ukrainian Drones

ಉಕ್ರೇನ್ & ರಷ್ಯಾ ಫೈಟಿಂಗ್ ಜೋರು!

ಅಂದಹಾಗೆ ರಷ್ಯಾ & ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧ ಮತ್ತಷ್ಟು ತೀವ್ರಗೊಳ್ಳುತ್ತಿದೆ. ಇದೇ ಕಾರಣಕ್ಕೆ ನೇರವಾಗಿ ರಷ್ಯಾ ದೇಶದ ಗಡಿ ಒಳಗೆ ಉಕ್ರೇನ್ ಸೇನೆಯನ್ನ ನುಗ್ಗಿಸಿದ್ದಾರೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ. ಇದು ಸಾಲದು ಎನ್ನುವಂತೆ ರಷ್ಯಾದ ಕುರ್ಸ್ಕ್‌ ಸೇರಿದಂತೆ ಇತರೆ ಪ್ರದೇಶಗಳನ್ನ ಗುರಿಯಾಗಿಸಿ ಬರೋಬ್ಬರಿ 117 ಡ್ರೋನ್ ಹಾರಿಸಿತ್ತು ಉಕ್ರೇನ್ ಮಿಲಿಟರಿ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅಲರ್ಟ್ ಆಗಿದ್ದ ರಷ್ಯಾ ಸೇನೆ, ಉಕ್ರೇನ್ ಹಾರಿಸಿದ್ದ 117 ಡ್ರೋನ್ ಢಂ.. ಢಂ.. ಅಂತಾ ಬಡಿದು ಬಿಸಾಡಿದೆ. ಹಾಗೇ ಮತ್ತೊಂದು ಕಡೆ ರಷ್ಯಾ ಕೂಡ ಇದೇ ರೀತಿ ಡ್ರೋನ್ ದಾಳಿ ನಡೆಸಿದೆ. ಅದನ್ನು ಇದೀಗ ಉಕ್ರೇನ್ ಹೊಡೆದುರುಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+