ರಷ್ಯಾ ವಿರುದ್ಧ ಭೀಕರ ದಾಳಿ ನಡೆಸಿದ ಉಕ್ರೇನ್: ಮುಂದೆ ಏನಾಯ್ತು?
ರಷ್ಯಾ & ಉಕ್ರೇನ್ ನಡುವೆ ಸೇಡು ಮತ್ತಷ್ಟು ಹೆಚ್ಚಾಗುತ್ತಿದ್ದು, ರಷ್ಯಾ ವಿರುದ್ಧ ಉಕ್ರೇನ್‌ನ ಸೇನೆ ಪದೇ ಪದೇ ಕುತಂತ್ರ ಮಾಡಿ ದಾಳಿ ಮಾಡುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ನಡುವೆ ದಿಢೀರ್ 75ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ಉಕ್ರೇನ್ ಸೇನೆ ರಷ್ಯಾ ವಿರುದ್ಧವೇ ದಾಳಿ ಮಾಡಿದೆ ಎಂದು ರಷ್ಯಾ ಹೇಳಿದ್ದು, ಅಷ್ಟೂ ಡ್ರೋನ್‌ಗಳನ್ನೂ ರಷ್ಯಾ ಸೇನೆ ಇದೀಗ ಪುಡಿ ಪುಡಿ ಮಾಡಿದೆ.
ಕಳೆದ 2 ವರ್ಷಗಳಿಂದ ರಷ್ಯಾ & ಉಕ್ರೇನ್ ಕಿತ್ತಾಡುತ್ತಿವೆ. ಹೀಗಿದ್ದರೂ ಇಬ್ಬರೂ ಯುದ್ಧದ ಬೆಂಕಿಗೆ ನೀರು ಹಾಕುವ ಕೆಲಸ ಮಾಡುತ್ತಿಲ್ಲ. ಇದರ ಬದಲಾಗಿ ಬರೀ ಕಿತ್ತಾಟ ನಡೆಸುತ್ತಿದ್ದು ಅಮಾಯಕರ ಪ್ರಾಣ ಬಲಿಯಾಗುತ್ತಿದೆ. ಅದರಲ್ಲೂ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಯುದ್ಧದ ವಿಚಾರದಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳಲು ತಯಾರಿಲ್ಲ ಎಂಬ ಸಂದೇಶ ನೀಡುತ್ತಿದ್ದಾರೆ. ಇದು ಈಗಾಗಲೇ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನ ಕೆಣಕಿದೆ. ಹೀಗಿದ್ದಾಗಲೇ, ದಿಢೀರ್ ರಷ್ಯಾ ಮೇಲೆ ಉಕ್ರೇನ್ ಭೀಕರ ದಾಳಿ ಮಾಡಿದೆ ಎಂಬ ಆರೋಪ ಸೇನೆ ವಿರುದ್ಧ ಕೇಳಿಬಂದಿದೆ.

ರೊಚ್ಚಿಗೆದ್ದ ರಷ್ಯಾ ಸೇನೆಯಿಂದ ರಿವೇಂಜ್?
ಉಕ್ರೇನ್ ಬಾಲ ಮುದುಡುತ್ತಿಲ್ಲ, ರಷ್ಯಾ ಕೂಡ ಸೈಲೆಂಟ್ ಆಗುತ್ತಿಲ್ಲ. ಹೀಗಾಗಿ ಯುದ್ಧವು ಮತ್ತಷ್ಟು ಜೋರಾಗುತ್ತಿದೆ. ಅಂದಹಾಗೆ ರಷ್ಯಾದ ವಿವಿಧ ಪ್ರದೇಶಗಳನ್ನ ಗುರಿಯಾಗಿಸಿ ಉಕ್ರೇನ್ ಸೇನೆ ಡ್ರೋನ್ ಅಟ್ಯಾಕ್ ನಡೆಸಿದೆ. ಹೀಗಾಗಿ ಉಕ್ರೇನ್ ದಾಳಿ ನಡೆಸಿದ ನಂತರ ಸುಮಾರು 75 ಡ್ರೋನ್ ಧೂಳ್ ಮಾಡಿದೆಯಂತೆ ರಷ್ಯಾ ಸೇನೆ. ಈ ಬಗ್ಗೆ ರಷ್ಯಾ ರಕ್ಷಣಾ ಸಚಿವಾಲಯದಿಂದ ಮಾಹಿತಿ ನೀಡಲಾಗಿದೆ. ಅದರಲ್ಲೂ ಪ್ರಮುಖವಾಗಿ ರೊಸ್ತೊವ್ ವಲಯದಲ್ಲಿಯೇ ಸುಮಾರು 36 ಡ್ರೋನ್ ಹೊಡೆದು ಉರುಳಿಸಲಾಗಿದೆ. ಈ ಭಾಗದಲ್ಲಿ ಒಟ್ಟು 55 ಡ್ರೋನ್ ಹಾರಿಸಿದ್ದರು ಎಂದು ಮಾಹಿತಿ ತಿಳಿದುಬಂದಿದೆ. ಈ ಘಟನೆ ರಷ್ಯಾ ಸೇನೆಯನ್ನು ಮತ್ತಷ್ಟು ರೊಚ್ಚಿಗೇಳುವ ರೀತಿ ಮಾಡಿದೆ.
ಉಕ್ರೇನ್‌ಗೆ ಬುದ್ಧಿ ಕಲಿಸುತ್ತಾ ರಷ್ಯಾ?
ಅಷ್ಟಕ್ಕೂ ರಷ್ಯಾದ ಮೊರೊಜೊವಸ್ಕ್‌ನಲ್ಲಿ ಇರುವ ಸೇನಾ ನೆಲೆ ಮತ್ತು ಶಸ್ತ್ರಾಸ್ತ್ರ ಅಡಗಿಸಿಟ್ಟಿದ್ದ ಜಾಗಗಳನ್ನೇ ಟಾರ್ಗೆಟ್ ಮಾಡಿ, ಉಕ್ರೇನ್ ಸೇನೆ ಈ ದಾಳಿ ನಡೆಸಿದೆ ಎನ್ನಲಾಗಿದೆ. ಒರಿಯೊಲ್ ವಲಯದಲ್ಲಿ ವಸತಿ ಸಂಕೀರ್ಣವನ್ನು ಗುರಿಯಾಗಿಸಿ ಕೂಡ ದಾಳಿ ಮಾಡಲಾಗಿದೆ. ಆದ್ರೆ ಇಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ. ಈ ದಾಳಿ ನಂತರ ರೊಚ್ಚಿಗೆದ್ದಿರುವ ರಷ್ಯಾ ಸೇನೆ ಉಕ್ರೇನ್ ವಿರುದ್ಧ ರಿವೇಂಜ್‌ಗೆ ತೊಡೆತಟ್ಟಿದೆ. ಹೀಗಾಗಿ ಉಕ್ರೇನ್ ವಿರುದ್ಧ ಯಾವಾಗ ಬೇಕಾದರೂ ರಷ್ಯಾ ಕಡೆಯಿಂದ ಭೀಕರ ದಾಳಿ ನಡೆಯುವ ಸಾಧ್ಯತೆ ದಟ್ಟವಾಗಿದೆ.












Click it and Unblock the Notifications