492 ಜನರ ಸಾವಿಗೆ ಕಾರಣವಾದ ಇಸ್ರೇಲ್? ಜಗತ್ತಿನಾದ್ಯಂತ ಮೊಳಗಿತು ಆಕ್ರೋಶ!

ಇಸ್ರೇಲ್ & ಲೆಬನಾನ್ ನಡುವೆ ಕಿರಿಕ್ ಜೋರಾಗಿದೆ. ಯಾವಾಗ ಪೇಜರ್ಸ್ & ವಾಕಿಟಾಕಿಯ ಮೂಲಕ ಇಸ್ರೇಲ್ ಬಾಂಬ್ ಸ್ಫೋಟ ಮಾಡಿದೆ ಎಂಬ ಆರೋಪ ಕೇಳಿಬಂತೋ, ಆ ಕ್ಷಣವೇ ಲೆಬನಾನ್ ರೊಚ್ಚಿಗೆದ್ದಿತ್ತು. ಹೀಗಾಗಿ ಇಸ್ರೇಲ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾಗಿದ್ದ ಲೆಬನಾನ್ ರಾಕೆಟ್ ದಾಳಿ ನಡೆಸಿತ್ತು. ಇದೀಗ ಮರುದಾಳಿ ನಡೆಸಿರುವ ಇಸ್ರೇಲ್ ಸುಮಾರು 492 ಜನರ ಸಾವಿಗೆ ಕಾರಣವಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಾಗಾದ್ರೆ ಈ ಯುದ್ಧವೇ 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಲಿದೆಯಾ? ಬನ್ನಿ ತಿಳಿಯೋಣ.

ಹೌದು, ಇಸ್ರೇಲ್ ಬೇಡ ಬೇಡ ಅಂದರೂ ಭೀಕರ ದಾಳಿ ನಡೆಸುತ್ತಿದೆ. ಇದರ ಪರಿಣಾಮವಾಗಿ ಮಧ್ಯಪ್ರಾಚ್ಯ ಭಾಗದಲ್ಲಿ ಇದೀಗ ಮತ್ತೊಂದು ಭೀಕರ ಯುದ್ಧ ಶುರುವಾಗುವ ಭಯ ಕೂಡ ಆವರಿಸಿದೆ ಎಂಬ ಆರೋಪ ಕೇಳಿಬಂದಿದೆ. ಇದು ಒಂದು ಕಡೆಯಾದರೆ, ಮತ್ತೊಂದು ಕಡೆ ಲೆಬನಾನ್ ಕೂಡ ತನ್ನ ಮೇಲೆ ಇಸ್ರೇಲ್ ದಾಳಿ ಮಾಡಿರುವ ಕಾರಣಕ್ಕಾಗಿ ಸೇಡು ತೀರಿಸಿಕೊಳ್ಳಲು ಮುಂದಾಗಿದೆ. ಹೀಗೆ ಇಬ್ಬರ ನಡುವೆ ಭೀಕರ ಕಾಳಗ ನಡೆಯುತ್ತಿರುವ ಹಿನ್ನೆಲೆಯಲ್ಲಿ ಇದೇ ತಿಕ್ಕಾಟ, 3ನೇ ಮಹಾಯುದ್ಧಕ್ಕೆ ಮುನ್ನುಡಿ ಬರೆಯಲಿದೆಯಾ? ಮಾಹಿತಿಗಾಗಿ ಮುಂದೆ ಓದಿ.

Allegedly More Than 492 Died In Lebanon After Israel Airstrike

492ಕ್ಕೂ ಹೆಚ್ಚು ಜನರ ಜೀವ...

ದಕ್ಷಿಣ ಲೆಬನಾನ್‌ ಮೇಲೆ ಇಸ್ರೇಲ್‌ ನಡೆಸುತ್ತಿರುವ ದಾಳಿಗೆ 492ಕ್ಕೂ ಹೆಚ್ಚು ಜನ ಮೃತಪಟ್ಟಿದ್ದು ಸಾವಿರಾರು ಜನರು ಗಾಯಗೊಂಡಿದ್ದಾರೆಂದು ಲೆಬನಾನ್‌ನ ಆರೋಗ್ಯ ಸಚಿವಾಲಯ ಗಂಭೀರ ಆರೋಪ ಮಾಡಿದೆ. ಮೃತಪಟ್ಟ ಜನರಲ್ಲಿ ಮಕ್ಕಳು ಮತ್ತು ಮಹಿಳೆಯರು ಹೆಚ್ಚಾಗಿ ಇದ್ದಾರೆಂಬ ಆರೋಪ ಕೂಡ ಮಾಡಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಪೇಜರ್ಸ್ & ವಾಕಿಟಾಕಿ ಕೂಡ ಬ್ಲಾಸ್ಟ್ ಆಗಿದ್ದವು. ಆಗ ಕೂಡ ಹತ್ತಾರು ಜನ ಮೃತಪಟ್ಟು ಸಾವಿರಾರು ಜನ ಈಗಲೂ ಆಸ್ಪತ್ರೆಯ ಹಾಸಿಗೆ ಮೇಲೆ ನರಳುತ್ತಿದ್ದಾರೆ. ಇಂತಹ ಸಮಯದಲ್ಲೇ ಮತ್ತೊಂದು ಭೀಕರ ದಾಳಿ ನಡೆಸಿದೆ ಇಸ್ರೇಲ್ ಸೇನೆ ಎಂದು ಭಾರಿ ಗಂಭೀರ ಆರೋಪ ಮಾಡಿದೆ ಲೆಬನಾನ್.

3ನೇ ಮಹಾಯುದ್ಧಕ್ಕೆ ರಣಕಹಳೆ?

ಇಸ್ರೇಲ್ ವಾರ್ನಿಂಗ್ ಕೊಡುತ್ತಿದೆ, ಲೆಬನಾನ್ ವಿರುದ್ಧ ಇನ್ನೂ ದೊಡ್ಡ ಪ್ರಮಾಣದಲ್ಲಿಯೇ ದಾಳಿ ಮಾಡುತ್ತೇವೆ ಅನ್ನೋ ಮುನ್ಸೂಚನೆ ನೀಡುತ್ತಿದೆ ಇಸ್ರೇಲ್ ಸೇನೆ. ಹೀಗೆ ಇಸ್ರೇಲ್‌ನಿಂದ ನಡೆಯುತ್ತಿರುವ ಭೀಕರ ದಾಳಿ ಜನ ಸಾಮಾನ್ಯರ ಎದೆಯಲ್ಲಿ ನಡುಕ ಹುಟ್ಟುಹಾಕಿದೆ. ಇದು ಬಿಡಿ ಪರಿಸ್ಥಿತಿ ಹೀಗೆ ಮುಂದುವರಿದರೆ ಮಧ್ಯಪ್ರಾಚ್ಯ ಭಾಗದಲ್ಲಿ ಇನ್ನೊಂದು ಯುದ್ಧ ಕೂಡ ಶುರುವಾಗಲಿದೆ. ಈಗಾಗಲೇ ಗಾಜಾ ಪಟ್ಟಿ & ಇಸ್ರೇಲ್ ಸೇನೆ ನಡುವೆ ಭಾರಿ ಸ್ಫೋಟಕವಾದ ಯುದ್ಧ ನಡೆಯುತ್ತಿದೆ. ಪರಿಸ್ಥಿತಿ ಹೀಗಿದ್ದಾಗ ಮತ್ತೊಂದು ಯುದ್ಧ ಲೆಬನಾನ್ & ಇಸ್ರೇಲ್‌ನ ನಡುವೆ ಆರಂಭವಾದರೆ ಪರೆಸ್ಥಿತಿ ಹೇಗೆ? ಎಂಬ ಆತಂಕ ಮೂಡಿದೆ. ಯಾಕಂದ್ರೆ ಅಕಸ್ಮಾತ್ ಲೆಬನಾನ್ & ಇಸ್ರೇಲ್‌ನ ನಡುವೆ ಯುದ್ಧ ಶುರುವಾದರೆ 3ನೇ ಮಹಾಯುದ್ಧಕ್ಕೆ ರಣಕಹಳೆಯೇ ಮೊಳಗಿದಂತೆ ಎನ್ನಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+