ಒಂದಲ್ಲ.. ಎರಡಲ್ಲ.. 35,700 ಜನ ಯುದ್ಧದ ರಕ್ತದಾಹಕ್ಕೆ ಬಲಿ!

ಅಲ್ಲಿ ಎಲ್ಲಿ ನೋಡಿದರೂ ಬರೀ ಹೆಣಗಳ ರಾಶಿಯೇ ಕಾಣುತ್ತಿದೆ. ಕುಸಿದು ಬಿದ್ದ ಕಟ್ಟಡಗಳ ಕೆಳಗೆ ಬರೀ ಶವಗಳೇ ತುಂಬಿ ಹೋಗಿವೆ. ಇಡೀ ಊರಿಗೆ ಊರೇ, ಕೊಳೆತ ಶವಗಳ ವಾಸನೆಗೆ ನರಳಿ ಹೋಗಿದೆ. ಕುಡಿಯಲು ನೀರು ಇಲ್ಲ, ತಿನ್ನಲು ಅನ್ನ ಸಿಗುತ್ತಿಲ್ಲ. ಅಂದಹಾಗೆ ಇದು ಯಾವುದೋ ಪುಸ್ತಕದಲ್ಲಿ ಬರುವ ಕಥೆಯಲ್ಲ, ಇಸ್ರೇಲ್ ದಾಳಿಗೆ ನಲುಗಿ ಹೋಗಿರುವ ಗಾಜಾ ಪಟ್ಟಿ ಪ್ರದೇಶದ ಸದ್ಯದ ಸ್ಥಿತಿ.

ಭೂಮಿ ಮೇಲೆ ಈಗ ಅಕ್ಷರಶಃ ನರಕದ ದರ್ಶನ ಮಾಡಬೇಕು ಎಂದು ಆಸೆ ಇದ್ದವರು ನೇರ ಗಾಜಾ ಪಟ್ಟಿ ಪ್ರದೇಶಕ್ಕೆ ಹೋಗಬೇಕು. ಯಾಕಂದ್ರೆ ಗಾಜಾ ಈಗ ಭೂಮಿ ಮೇಲಿನ ನಕರವೇ ಆಗಿ ಬದಲಾಗಿ ಹೋಗಿದೆ. ಜನರು ನಲುಗಿ ಹೋಗಿದ್ದು, ಜೀವ ಉಳಿಸಿಕೊಳ್ಳಲು ಮಕ್ಕಳು & ಮಹಿಳೆಯರು ಊರು ಬಿಟ್ಟು ಓಡಿ ಹೋಗುತ್ತಿದ್ದಾರೆ. ಈ ರೀತಿ ಸುಮಾರು 20,00,000 ಜನ ಅತಂತ್ರರಾಗಿ ಮನೆ & ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕೇವಲ 8 ತಿಂಗಳ ಹಿಂದೆ, ತಮ್ಮದೇ ಮನೆಯಲ್ಲಿ ಹಾಯಾಗಿ ಇದ್ದವರು ಇಂದು ಬೀದಿಗೆ ಬಿದ್ದು ನರಳಿ ಹೋಗಿದ್ದಾರೆ.

Allegedly More Than 35 700 People Were Killed In Gaza After The War Starts From 7th October 2023

35,000 ಜನರನ್ನು ಕೊಂದ ಇಸ್ರೇಲ್?

ಈಗಿರುವ ಮಾಹಿತಿ ಪ್ರಕಾರ ಈವರೆಗೂ ಇಸ್ರೇಲ್ ಸೇನೆ ಗಾಜಾ ಪಟ್ಟಿ ಮೇಲೆ ನಡೆಸಿರುವ ಈ ಭೀಕರ ದಾಳಿಯಲ್ಲಿ ಒಟ್ಟು 35,700 ಜನ ಮೃತಪಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅದ್ರಲ್ಲೂ ಗಾಜಾ ನಗರದಲ್ಲಿ ಶವಗಳ ರಾಶಿಯೇ ಕಂಡು ಬರುತ್ತಿದೆ. ಇನ್ನು ಕುಸಿದು ಕುಸಿದು ಬಿದ್ದಿರುವ ಕಟ್ಟಡಗಳ ಕೆಳಗೆ ಶವಗಳ ರಾಶಿಯೇ ಕಾಣುತ್ತಿದೆ. ಇದು ವಿಶ್ವಸಂಸ್ಥೆಗೆ ತಲೆನೋವು ತರಿಸಿದೆ. ಹೀಗಾಗಿ, ಯುದ್ಧ ನಿಲ್ಲಿಸಬೇಕು ಎಂದು ಪಣತೊಟ್ಟಿದ್ದರೂ ಅದು ಸಾಧ್ಯವಾಗಿಲ್ಲ. ವಿಶ್ವಸಂಸ್ಥೆ ಮಾತಿಗೆ ಇಸ್ರೇಲ್ ಬೆಲೆ ನೀಡುತ್ತಿಲ್ಲ ಎಂಬ ಆರೋಪವೂ ಕೇಳಿಬಂದಿದೆ.

ಒಂದೇ ದಿನ 25 ಜನ ಬಲಿ

ನಿನ್ನೆ ಕೂಡ ಇಸ್ರೇಲ್ ಸೇನೆ ಭೀಕರ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ 25 ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಎಂದು ಪ್ಯಾಲೆಸ್ತೀನ್ ಅಧಿಕಾರಿಗಳು ಮಾಹಿತಿ ನೀಡಿದ್ದು, ಹೀಗಾಗಿ ಮತ್ತೆ ಕಿಚ್ಚು ಹೊತ್ತಿಕೊಂಡಿದೆ. ಹಮಾಸ್ ವಿರುದ್ಧ ಮತ್ತಷ್ಟು ತೀವ್ರ ಕಾರ್ಯಾಚರಣೆಗೆ ಇಸ್ರೇಲ್ ಯೋಜನೆ ರೂಪಿಸಿದೆ ಎನ್ನಲಾಗಿದೆ. ಈ ಹಿನ್ನೆಲೆ ಮತ್ತಷ್ಟು ಹಿಂಸಾಚಾರ ಭುಗಿಲೇಳುವ ಭಯ ಆವರಿಸಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಕೈಮೀರಿ ಹೋಗುತ್ತಿದೆ.

ಭಾಗಶಃ ಗಾಜಾ ಪಟ್ಟಿ ಮೇಲೆ ಇಸ್ರೇಲಿ ಪಡೆಗಳು ತಮ್ಮ ಹಿಡಿತ ಸಾಧಿಸಿವೆ ಗಾಜಾದ ಆಸ್ಪತ್ರೆಗಳಿಂದ ಹಿಡಿದು ಶಾಲಾ ಕಟ್ಟಡಗಳ ತನಕ ಎಲ್ಲಾ ನಾಶವಾಗಿವೆ. ಹೀಗಾಗಿ ಮುಂದೆ ಏನು ಮಾಡುವುದು? ಅಂತಾ ಗಾಜಾ ನಿವಾಸಿಗಳು ಚಿಂತೆ ಮಾಡುತ್ತಿದ್ದಾರೆ. ಇಷ್ಟೆಲ್ಲದರ ನಡುವೆ ಸಾವಿನ ಸಂಖ್ಯೆಯು ಭಾರಿ ಏರಿಕೆ ಕಾಣುತ್ತಿದೆ. ಲಕ್ಷಾಂತರ ಜನ ಗಾಯಗೊಂಡು ಚಿಕಿತ್ಸೆ ಸಿಗದೆ ನರಳುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+