ಇಲ್ಲೂ ನೆಮ್ಮದಿ ಇಲ್ಲ, ಅಲ್ಲೂ ನೆಮ್ಮದಿ ಇಲ್ಲ: ಥೂ ಏನ್ ಗುರೂ ಇದು!

ಇಸ್ರೇಲ್ & ಪ್ಯಾಲೆಸ್ತೀನ್ ನಡುವೆ ಶುರುವಾಗಿರುವ ಭೀಕರ ಕದನ ಅಲ್ಲಿನ ಸಾಮಾನ್ಯ ಜನರ ಜೀವಕ್ಕೆ ಹಾಗೂ ಜೀವನಕ್ಕೆ ಕಂಟಕ ತಂದಿದೆ. ಅದರಲ್ಲೂ ಗಾಜಾಪಟ್ಟಿ ಇದೀಗ ಥೇಟ್ ನರಕ ಎನ್ನವುಂತಾಗಿದೆ. ಪರಿಸ್ಥಿತಿ ಹೀಗಿದ್ದಾಗಲೇ ಸ್ಫೋಟಕ ಸತ್ಯವೊಂದು ಬಹಿರಂಗವಾಗಿದೆ. ಅಲ್ಲಿನ ಜನ ಸಾಮಾನ್ಯರ ಭೀಕರ ಕಥೆ ಜಾಗತಿಕವಾಗಿ ಅನಾವರಣಗೊಂಡಿದೆ.

ಹಮಾಸ್ ಉಗ್ರರು ತಮ್ಮ ಮೇಲೆ ದಾಳಿ ಮಾಡಿದ್ದರು ಅಂತಾ ಇಸ್ರೇಲ್ ಸೇನೆ ಗಾಜಾಪಟ್ಟಿಯ ಮೇಲೆ ಮರು ದಾಳಿ ಆರಂಭ ಮಾಡಿತ್ತು. ನೋಡ ನೋಡುತ್ತಲೇ ಈ ಯುದ್ಧ ಇದೀಗ 5ನೇ ತಿಂಗಳು ಪೂರೈಸುತ್ತಿದೆ. ಪರಿಸ್ಥಿತಿ ಕೈಮೀರಿ ಹೋಗಿರುವ ಸಮಯದಲ್ಲೇ ಗಾಜಾಪಟ್ಟಿ ಜನರು ಜೀವ ಉಳಿಸಿಕೊಳ್ಳಲು ಉತ್ತರ ಗಾಜಾಪಟ್ಟಿ ಬಿಟ್ಟು, ದಕ್ಷಿಣ ಗಾಜಾಪಟ್ಟಿ ಭಾಗಕ್ಕೆ ಓಡಿದ್ದರು. ಇಲ್ಲೂ ಅವರ ಜೀವಕ್ಕೆ ಗ್ಯಾರಂಟಿ ಇಲ್ಲ ಎನ್ನುವಂತಾಗಿದೆ. ಆದರೂ ಲಕ್ಷ ಲಕ್ಷ ಜನ ತಮ್ಮ ಜೀವ ಉಳಿಸಿಕೊಳ್ಳಲು ದಕ್ಷಿಣ ಗಾಜಾಪಟ್ಟಿಗೆ ಓಡಿದ್ದಾರಂತೆ.

Allegedly More Than 15,00,000 Palestinians Are Evacuated From North Gaza To South Gaza

15 ಲಕ್ಷ ಜನರು ಎಸ್ಕೇಪ್?

ಉತ್ತರ ಗಾಜಾಪಟ್ಟಿ ಭಾಗದಲ್ಲಿ ಮೊದಲಿಗೆ ಹಮಾಸ್ ಉಗ್ರರು ಹಾಗೂ ಇಸ್ರೇಲ್ ಸೇನೆ ಮಧ್ಯೆ ಜಗಳ ಶುರುವಾಗಿತ್ತು. ಆ ನಂತರ ಉತ್ತರ ಗಾಜಾದ ನಿವಾಸಿಗಳು ಎದ್ದೂ ಬಿದ್ದು ಓಡಿದ್ದರು. ಅವರೆಲ್ಲಾ ದಕ್ಷಿಣ ಗಾಜಾಪಟ್ಟಿ ಭಾಗದ ರಫಾ ನಗರಕ್ಕೆ ವಲಸೆ ಹೋಗಿದ್ದಾರೆ. ಈ ರೀತಿಯೇ ಸುಮಾರು 15 ಲಕ್ಷ ಜನರು ತಮ್ಮ ತಮ್ಮ ಜೀವ ಉಳಿಸಿಕೊಳ್ಳಲು, ಉತ್ತರ ಗಾಜಾಪಟ್ಟಿ ಬಿಟ್ಟು ಓಡಿ ಹೋಗಿದ್ದಾರೆ ಎನ್ನುತ್ತಿವೆ ಅಂಕಿ ಅಂಶ. ಹಾಗೇ ಈವರೆಗೂ ಸುಮಾರು 30 ಸಾವಿರಕ್ಕು ಹೆಚ್ಚು ಜನರು ಈ ಕಿತ್ತಾಟದಲ್ಲಿ ಜೀವ ಬಿಟ್ಟಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

5000 ರಾಕೆಟ್‌ ಉಡಾಯಿಸಿದ್ದ ಉಗ್ರರು

ಹಮಾಸ್ ಉಗ್ರರು ಎಸಗಿದ ಕೃತ್ಯಕ್ಕೆ ಗಾಜಾಪಟ್ಟಿ ಸಾಮಾನ್ಯ ಜನರು ನಲುಗಿದ್ದು ಅಕ್ಟೋಬರ್ 7ರ ಶನಿವಾರ ಹಮಾಸ್ ಉಗ್ರರು, ಇಸ್ರೇಲ್‌ ವಿರುದ್ಧ 5000 ರಾಕೆಟ್‌ ಉಡಾಯಿಸಿದ್ದರು. ಜೊತೆಗೇ, ಉಗ್ರರು ಶಸ್ತ್ರಾಸ್ತ್ರ & ಬಾಂಬ್‌ ಹಿಡಿದು ಇಸ್ರೇಲ್ ಒಳಗಡೆ ನುಗ್ಗಿದ್ದರು. ರೊಚ್ಚಿಗೆದ್ದಿದ್ದ ಇಸ್ರೇಲ್, ಹಮಾಸ್ ಉಗ್ರರ ವಿರುದ್ಧ ಯುದ್ಧ ಘೋಷಣೆ ಮಾಡಿತ್ತು. ಘಟನೆ ನಡೆದು ಭರ್ಜರಿ 4 ತಿಂಗಳು ಕಳೆದಿದೆ. ಇದೀಗ ಈ ಯುದ್ಧ 5ನೇ ತಿಂಗಳಿಗೆ ಕಾಲಿಟ್ಟಿದ್ದು ಭಾರಿ ಆತಂಕ ಎದುರಾಗಿದೆ.

Allegedly More Than 15,00,000 Palestinians Are Evacuated From North Gaza To South Gaza

ಎಲ್ಲಿ ಹೋಗುವುದು ಗೊತ್ತಾಗುತ್ತಿಲ್ಲ!

ಗಾಜಾಪಟ್ಟಿ ಜನರ ಪರಿಸ್ಥಿತಿ ಹೇಗಾಗಿದೆ ಅಂದ್ರೆ, ಒಂದು ಕಡೆ ಉಗ್ರರ ಸರ್ಕಾರ ಹಮಾಸ್‌ಗೆ ಹೆದರಿ ಬದುಕುತ್ತಿದ್ದಾರೆ. ಇನ್ನೊಂದು ಕಡೆ ಹಮಾಸ್ ಉಗ್ರರು ಮಾಡಿದ್ದ ತಪ್ಪಿಗೆ ಇಸ್ರೇಲ್‌ನ ಸೇನೆ ಈಗ ಗಾಜಾ ಸಾಮಾನ್ಯ ಜನರ ಪ್ರಾಣ ತೆಗೆಯುತ್ತಿದೆ ಎಂಬ ಗಂಭಿರ ಆರೋಪವನ್ನ ಮಾಡಲಾಗುತ್ತಿದೆ. ಆದರೆ ಇದ್ಯಾವುದಕ್ಕೂ ಇಸ್ರೇಲ್ ಕೇರ್ ಮಾಡುತ್ತಿಲ್ಲ ಯಾಕಂದ್ರೆ ಈ ಬಾರಿ ಹಮಾಸ್ ಉಗ್ರರನ್ನು ಬುಡ ಸಮೇತ ಕಿತ್ತು ಹಾಕಲು, ಇಸ್ರೇಲ್ ದೇಶದ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಿರ್ಧಾರ ಮಾಡಿದ್ದಾರೆ. ಇದೇ ವಿಚಾರವಾಗಿ ಜಾಗತಿಕವಾಗಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+