ಪೇಜರ್ಸ್ ಸ್ಫೋಟಕ್ಕೆ ಭಾರತ ಮೂಲದ ವ್ಯಕ್ತಿ ನಂಟು? ಕೇರಳ ಮೂಲದ ವ್ಯಕ್ತಿಗಾಗಿ ಹುಡುಕಾಟ!
ಲೆಬನಾನ್ ಸ್ಫೋಟಕ್ಕೂ & ಇಸ್ರೇಲ್ ಗುಪ್ತಚರ ಸಂಸ್ಥೆಗೂ ಲಿಂಕ್ ಮಾಡಿ ಆರೋಪ ಮಾಡಿ ದೊಡ್ಡ ಸಂಚಲನ ಸೃಷ್ಟಿಯಾದ ನಂತರ ಈಗ, ಭಾರತಕ್ಕೂ ಈ ಸ್ಫೋಟದ ನಂಟು ಇದೀಗ ಬೆರೆತು ಹೋಗಿದೆ. ಮೊದಲಿಗೆ ಪೇಜರ್ಸ್ ಅಂದ್ರೆ ಮೊಬೈಲ್ ರೀತಿ ಮೆಸೇಜ್ ಕಳುಹಿಸೋದಕ್ಕೆ ಇರುವ ಡಿವೈಸ್‌ಗಳು ಸ್ಫೋಟವಾದ ನಂತರ, ವಾಕಿ-ಟಾಕಿ ಸ್ಫೋಟವಾಗಿದ್ದವು. ಇಷ್ಟೆಲ್ಲದರ ನಡುವೆ ಇದೀಗ ಪೇಜರ್ಸ್ ಸ್ಫೋಟಕ್ಕೆ ಭಾರತ ಮೂಲದ ವ್ಯಕ್ತಿಗೂ ನಂಟು ಇದೆಯಾ? ಕೇರಳದ ವ್ಯಕ್ತಿ ಈ ಘಟನೆಯಲ್ಲಿ ಎಂತಹ ಪ್ರಭಾವ ಬೀರಿದ್ದಾರೆ? ಅನ್ನೋ ಚರ್ಚೆ ಶುರುವಾಗಿದೆ.
ಅಂದಹಾಗೆ ಲೆಬನಾನ್ ದೇಶದಲ್ಲಿ ಕೆಲ ದಿನಗಳ ಹಿಂದೆ ಹಿಜ್ಭುಲ್ಲಾ ಸಂಘಟನೆಯನ್ನ ಟಾರ್ಗೆಟ್ ಮಾಡಿ ದಾಳಿ ಮಾಡಲಾಗಿತ್ತು. ಪೇಜರ್ಸ್ & ವಾಕಿಟಾಕಿ ಸ್ಫೋಟ ಮಾಡಿ ಹಿಜ್ಭುಲ್ಲಾ ಸಂಘಟನೆ ಮುಖಂಡರಿಗೆ ಶಾಕ್ ನೀಡಲಾಗಿತ್ತು. ಈ ಘಟನೆಯಲ್ಲಿ ಸುಮಾರು 12 ಜನರು ಮೃತಪಟ್ಟು, ಸಾವಿರಾರು ಜನ ಸಾವು & ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಘಟನೆಗೆ ಮತ್ತು ಭಾರತ ಮೂಲದ ವ್ಯಕ್ತಿಗೂ ಇದೀಗ ಲಿಂಕ್ ಮ್ಯಾಚ್ ಆಗಿದೆಯಂತೆ. ಈ ಕುರಿತು ಈಗ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿ ಬೆಚ್ಚಿ ಬೀಳಿಸುತ್ತಿದೆ!

ಕೇರಳದ ವ್ಯಕ್ತಿಗೆ ನಂಟು ಹೇಗೆ?
ಅಷ್ಟಕ್ಕೂ ಲೆಬನಾನ್ & ಸಿರಿಯಾ ಪೇಜರ್ಸ್ ಸ್ಫೋಟ ಕೇಸ್‌ನಲ್ಲಿ, ನಾರ್ವೆಗೆ ವಲಸೆ ಹೋಗಿರುವ ಕೇರಳ ಮೂಲದ ವ್ಯಕ್ತಿ ಹೆಸರು ಇದೀಗ ಕೇಳಿ ಬಂದಿದೆ. ಹಿಜ್ಭುಲ್ಲಾ ಸಂಘಟನೆಗೆ ಸ್ಫೋಟಕ ವಸ್ತು ತುಂಬಿದ ಪೇಜರ್ಸ್ ಅಂದ್ರೆ ಮೊಬೈಲ್ ರೀತಿಯ ಡಿವೈಸ್ ಪೂರೈಕೆ ಮಾಡಲಾಗಿದ್ದು, ಆ ಮೂಲಕ ಕೃತ್ಯ ಎಸಗಲಾಗಿದೆ ಎಂದು ಆರೋಪ ಮಾಡಲಾಗಿದೆ. ಆದರೆ ಈ ರೀತಿಯಾಗಿ ಸ್ಫೋಟಕ ತುಂಬಿದ ಪೇಜರ್ಸ್ ಪೂರೈಕೆ ಮಾಡಿರುವುದು ಬಲ್ಗೇರಿಯಾದ ಕಂಪನಿ ಆಗಿದ್ದು, ಆ ಕಂಪನಿ ಕೇರಳ ಮೂಲದ ವ್ಯಕ್ತಿಗೆ ಸೇರಿದ್ದಾಗಿದೆ ಎಂದು ಆರೋಪ ಮಾಡಲಾಗಿದೆ.
ನಾರ್ವೆ ದೇಶಕ್ಕೆ ಹೋಗಿದ್ದು ಹೇಗೆ?
ಕೇರಳ ಮೂಲದ ವ್ಯಕ್ತಿಯು ನಾರ್ವೆ ದೇಶದ ಪೌರತ್ವ ಹೊಂದಿದ್ದಾರೆ ಎನ್ನಲಾಗಿದ್ದು, ರಿನ್ಸನ್ ಜೋಸ್ ಎಂದು ಹೆಸರಿಸಲಾಗಿದೆ. ನೋರ್ಟ್ ಗ್ಲೋಬಲ್ ಸಂಸ್ಥೆ ಈ ಪೇಜರ್‌ಗಳ ಖರೀದಿಗೆ ಹಣ ವರ್ಗಾವಣೆ ಮಾಡಿದೆ ಎಂದು ವರದಿಯಾಗಿದೆ. ಅಲ್ಲದೆ ಈ ರೀತಿಯಾಗಿ ಸ್ಫೋಟಗೊಂಡಿರುವ ಪೇಜರ್ಸ್ ವಿಚಾರದಲ್ಲಿ ಈ ವ್ಯಕ್ತಿಯ ಕೈವಾಡ ಇರುವ ಬಗ್ಗೆ ಕೂಡ ತನಿಖೆ ನಡೆಯುತ್ತಿದೆ, ಎಂದು ಇದೀಗ ತಿಳಿಸಲಾಗಿದೆ. ಅಷ್ಟಕ್ಕೂ ರಿನ್ಸನ್ ಜೋಸ್ ಸುಮಾರು 10 ವರ್ಷಗಳ ಹಿಂದೆ ವಯನಾಡ್ ಜಿಲ್ಲೆಯ ಮಾನಂದವಾಡಿಯಿಂದ ವಿದೇಶಕ್ಕೆ ತೆರಳಿದ್ದಾರಂತೆ. ನಾರ್ವೆ ಪೌರತ್ವವು ರಿನ್ಸನ್ ಜೋಸ್ ಬಳಿ ಇದ್ದು, ಕುಟುಂಬದವರಿಗೆ ಕೂಡ ಹೆಚ್ಚಿನ ಮಾಹಿತಿ ಇಲ್ಲ ಎನ್ನಲಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ಆರಂಭವಾಗಿದೆ.












Click it and Unblock the Notifications