Israel & Gaza: ಗಾಜಾ ಪಟ್ಟಿಯಲ್ಲಿ ಮಕ್ಕಳ ಜೀವಕ್ಕೆ ಕಂಟಕ & ಹಸಿವಿನಿಂದ ಸಾವಿನ ಭಯ?

ಇಸ್ರೇಲ್ & ಹಮಾಸ್ ನಡುವೆ ಜಗಳ ಶುರುವಾದ ನಂತರ ಗಾಜಾ ಪಟ್ಟಿಯಲ್ಲಿ ರಕ್ತಪಾತವೇ ನಡೆದು ಹೋಗಿ, ಜನರ ಬದುಕು ನರಕವಾಗಿದೆ. ಅದರಲ್ಲೂ ಅತಿಹೆಚ್ಚು ಮಕ್ಕಳೇ ಇರುವ ಈ ಗಾಜಾ ಪಟ್ಟಿಯಲ್ಲಿ ನಿರಂತರವಾಗಿ ಹಿಂಸಾಚಾರ ನಡೆಯುತ್ತಿದೆ. ಇದರ ಪರಿಣಾಮ ಲಕ್ಷ, ಲಕ್ಷ ಜನರು ಬಲಿಯಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲೇ ಮತ್ತೊಂದು ಬೆಚ್ಚಿ ಬೀಳಿಸುವ ಆರೋಪ ಕೂಡ ಕೇಳಿ ಬಂದಿದ್ದು, 2,90,000 ಮಕ್ಕಳ ಜೀವಕ್ಕೆ ಕಂಟಕ ಎದುರಾಗಿದೆಯಂತೆ.

ಹೌದು, ಇಸ್ರೇಲ್ ಹಾಗೂ ಹಮಾಸ್ ನಡುವೆ ನಿರಂತರ ದಾಳಿ ನಡೆಯುತ್ತಿದೆ. ಈ ಕಾರಣದಿಂದ ಹಿಂಸಾಚಾರ ಜೋರಾಗಿದೆ. ಇಬ್ಬರ ಮಧ್ಯೆ ಯುದ್ಧ ಶುರುವಾಗಿ ಬರೋಬ್ಬರಿ ಒಂದೂವರೆ ವರ್ಷ ಕಳೆದು ಹೋಗಿದ್ದು, ಹೀಗಿದ್ದಾಗ ಇಸ್ರೇಲ್ ಮಾತ್ರ ಹಿಂದೆ ಮುಂದೆ ಯೋಚಿಸದೆ ನಿರಂತರವಾಗಿ ದಾಳಿ ನಡೆಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇಸ್ರೇಲ್ ನಡೆಸಿರುವ ದಾಳಿ ಪರಿಣಾಮ ಇಡೀ ಗಾಜಾ ಪಟ್ಟಿಯಲ್ಲಿ ನರಕ ನಿರ್ಮಾಣ ಆಗಿದ್ದು, ಪರಿಸ್ಥಿತಿ ಕೂಡ ಕೈಮೀರಿ ಹೋಗಿದೆ. ಇದೇ ಸಮಯದಲ್ಲಿ ಮತ್ತೊಂದು ಆರೋಪ ಕೂಡ ಇಸ್ರೇಲ್ ವಿರುದ್ಧ ಕೇಳಿಬಂದಿದೆ.

Allegedly Israel s Blockade on Gaza Threatens Lives of 290 000 Children

3ನೇ ಮಹಾಯುದ್ಧ ನಡೆಯೋದು ಗ್ಯಾರಂಟಿ?

ಹಮಾಸ್ & ಇಸ್ರೇಲ್ ಸೇನೆ ನಡುವಿನ ಸಮರ ದಿನದಿಂದ ದಿನಕ್ಕೆ ರಕ್ತಮಯ ಆಗ್ತಿದೆ. ಒಂದು ಕಡೆ ವಿಶ್ವಸಂಸ್ಥೆ ಯುದ್ಧ ನಿಲ್ಲಿಸಲು ಪ್ರಯತ್ನ ಮುಂದುವರಿಸಿದೆ. ಆದರೆ ಅದೇ ಸಮಯಕ್ಕೆ ಅಮೆರಿಕ ಕೂಡ ಯುದ್ಧ ನಿಲ್ಲಿಸಲು ಆಗದೆ ಒದ್ದಾಡುತ್ತಿದೆ. ಇದರ ಜೊತೆಗೇ ರಷ್ಯಾ VS ಉಕ್ರೇನ್ ವಾರ್ ಕೂಡ ತಲ್ಲಣ ಸೃಷ್ಟಿ ಮಾಡಿದೆ.

ಈ ಯುದ್ಧ ಬೆಳವಣಿಗೆಗಳು ಎಲ್ಲಿ 3ನೇ ಮಹಾಯುದ್ಧಕ್ಕೆ ನಾಂದಿ ಹಾಡುತ್ತೋ? ಅನ್ನೋ ಭಯ ಆವರಿಸಿರುವ ಸಮಯದಲ್ಲೇ ಇಸ್ರೇಲ್ ಕೈಗೊಂಡ ನಿರ್ಧಾರದಿಂದ ಈಗ ಸುಮಾರು 2,90,000 ಮಕ್ಕಳ ಜೀವಕ್ಕೆ ಕಂಟಕ ಎದುರಾಗಿದೆ ಎಂಬ ಭಾರಿ ಗಂಭೀರ ಆರೋಪ ಮಾಡಲಾಗಿದೆ. ಇದು ಮಧ್ಯಪ್ರಾಚ್ಯ ಭಾಗದಲ್ಲಿ ಹೊಸ ತಲ್ಲಣ ಸೃಷ್ಟಿ ಮಾಡಿದೆ. ಇಸ್ರೇಲ್ ಸರಿಯಾದ ಸಮಯಕ್ಕೆ ಗಾಜಾ ಪಟ್ಟಿಗೆ ಅಗತ್ಯ ವಸ್ತುಗಳ ಪೂರೈಕೆಗೆ ಅಡ್ಡಿ ಮಾಡುತ್ತಿದೆ ಎಂಬ ಆರೋಪದ ಪರಿಣಾಮ ಈ ತಲ್ಲಣ ಸೃಷ್ಟಿಯಾಗಿದೆ.

ಭೀಕರ ಯುದ್ಧ ಶುರುವಾಗಿದ್ದು ಯಾವಾಗ?

ಹಮಾಸ್ & ಇಸ್ರೇಲ್ ಮಧ್ಯೆ ಘೋರ ಕಾಳಗ ನಡೀತ್ತಿದ್ದು, ಈ ಇಬ್ಬರ ನಡುವಿನ ತಿಕ್ಕಾಟ ಕೊನೆಗೆ ಗಾಜಾ ಪಟ್ಟಿ ಸರ್ವನಾಶ ಮಾಡುತ್ತಿದೆ. ಹೀಗೆ ಗಾಜಾ & ಇಸ್ರೇಲ್ ನಡುವಿನ ಫೈಟಿಂಗ್ ಕಾರಣಕ್ಕೆ 2023ರ ಅಕ್ಟೋಬರ್ ತಿಂಗಳಲ್ಲಿ ಘೋರ ಯುದ್ಧ ಆರಂಭವಾಗಿತ್ತು. ಯುದ್ಧದ ಪರಿಣಾಮವಾಗಿ ಭಾರಿ ದೊಡ್ಡ ಪ್ರಮಾಣದಲ್ಲಿ ಜನ ಬಲಿಯಾಗಿದ್ದಾರೆ ಎಂಬ ಆರೋಪವೂ ಇದೆ. ಹೀಗಿದ್ದರೂ ಯುದ್ಧಕ್ಕೆ ಮಾತ್ರ ಬ್ರೇಕ್ ಬೀಳುತ್ತಿಲ್ಲ. ಕೆಲವು ದಿನ ಸೈಲೆಂಟ್ ಆಗಿದ್ದ ಯುದ್ಧ ಈಗ ಮತ್ತೆ ಆರ್ಭಟಿಸುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+