ಗಾಜಾ ಮೇಲೆ ಅಟ್ಯಾಕ್ ಮುಂದುವರಿಸಿದ ಇಸ್ರೇಲ್ ಮಿಲಿಟರಿ

ಹಮಾಸ್ ಉಗ್ರರು ಮತ್ತು ಇಸ್ರೇಲ್‌ ಸೇನೆ ಮಧ್ಯೆ ಭೀಕರ ಯುದ್ಧ ಆರಂಭವಾಗಿ ಬರೋಬ್ಬರಿ 67 ದಿನ ಕಳೆದು ಹೋಗಿದೆ. ಇವತ್ತು ಯುದ್ಧ ನಿಲ್ಲುತ್ತೆ, ನಾಳೆ ಯುದ್ಧ ನಿಲ್ಲುತ್ತೆ ಅಂತಾನೆ ಅಲ್ಲಿ ಜನರು ಕಾಯ್ತಿದ್ದಾರೆ. ಇಷ್ಟಾದರೂ ಯುದ್ಧ ನಿಲ್ಲುತ್ತಿಲ್ಲ. ಕೆಲ ದಿನಗಳ ಹಿಂದಷ್ಟೇ, ಈ ರಕ್ತಪಾತಕ್ಕೆ ಬ್ರೇಕ್ ಹಾಕಲು ವಿಶ್ವಸಂಸ್ಥೆ ಯತ್ನ ಮಾಡಿತ್ತು. ಆದರೆ ಯುದ್ಧ ನಿಲ್ಲಿಸುವ ಪ್ರಯತ್ನಕ್ಕೆ ಅಮೆರಿಕ ಅಡ್ಡ ಬಂದ ಪರಿಣಾಮ ಯುದ್ಧ ಭೀಕರವಾಗಿದೆ ಎಂಬ ಆರೋಪವು ಕೇಳಿಬಂದಿದೆ.

ಹಮಾಸ್ ತಪ್ಪಿಗೆ ಕಳೆದ 67 ದಿನದಿಂದ ಗಾಜಾದಲ್ಲಿ ಸಾಮಾನ್ಯ ಜನರು ನರಳುತ್ತಿದ್ದು ಈಗಾಗಲೇ 17,000ಕ್ಕೂ ಹೆಚ್ಚು ಜನ ಯುದ್ಧಕ್ಕೆ ಬಲಿಯಾಗಿದ್ದಾರೆ. ಈ ನಡುವೆ ಇಸ್ರೇಲ್ 1,200 ಜನರನ್ನ ಕಳೆದುಕೊಂಡಿದೆ. ಈ ಯುದ್ಧ ನಿಲ್ಲಿಸುವ ಪ್ರಯತ್ನಗಳಿಗೆ ಅಮೆರಿಕ ಅಡ್ಡಿ ಮಾಡುತ್ತಿದೆ ಎನ್ನುವ ಆರೋಪಗಳ ನಡುವೆ, ಗಾಜಾಪಟ್ಟಿ ಜೊತೆಗೆ ಇಸ್ರೇಲ್‌ ಸೇನೆ ವೆಸ್ಟ್‌ ಬ್ಯಾಂಕ್‌ ಮೇಲೆಯು ಭಾರಿ ದಾಳಿ ನಡೆಸಿದೆ ಎನ್ನಲಾಗಿದೆ. ಇಂದು ಇಸ್ರೇಲ್ ಸೇನೆ ನಡೆಸಿದ ದಾಳಿಗೆ, ಒಟ್ಟಾರೆ ನಾಲ್ವರು ಬಲಿಯಾಗಿದ್ದಾರೆ ಅಂತಾ ಪ್ಯಾಲೆಸ್ತೀನ್‌ ಆರೋಗ್ಯ ಸಚಿವಾಲಯ ಆರೋಪ ಮಾಡಿದೆ.

 Allegedly Israel Started Strong Attack On Gaza Again

ಇಕ್ಕಟ್ಟಿಗೆ ಸಿಲುಕಿದ ಅಮೆರಿಕ?

ಅಂದಹಾಗೆ ಕೆಲವು ದಿನಗಳ ಹಿಂದಷ್ಟೇ ವಿಶ್ವಸಂಸ್ಥೆ ಹಮಾಸ್ & ಇಸ್ರೇಲ್ ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಲು ಮುಂದಾಗಿತ್ತು. ಆದರೆ ಅಮೆರಿಕ ಆಗ ದಿಢೀರ್ ಮಧ್ಯಪ್ರವೇಶ ಮಾಡಿ, ತನ್ನ 'ವಿಟೋ' ಪವರ್ ಬಳಸಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಅಮೆರಿಕ ಈ ರೀತಿ 'ವಿಟೋ' ಪವರ್ ಬಳಸಿ ರಷ್ಯಾ ಸೇರಿದಂತೆ ತನ್ನ ಶತ್ರು ರಾಷ್ಟ್ರಗಳಿಗೆ ತಿರುಗೇಟನ್ನೂ ಕೊಟ್ಟಿತ್ತು. ಇಷ್ಟೆಲ್ಲಾ ಬೆಳವಣಿಗೆ ನಡುವೆ ಇದೀಗ ಇಸ್ರೇಲ್ ಪಡೆಗಳು ಗಾಜಾ ಮತ್ತು ವೆಸ್ಟ್ ಬ್ಯಾಂಕ್ ಮೇಲೆ ದಾಳಿ ಭೀಕರಗೊಳಿಸಿವೆ. ಹೀಗಾಗಿ ಅಮೆರಿಕ ಈಗ ಇಕ್ಕಟ್ಟಿಗೆ ಸಿಲುಕಿದೆಯಾ ಅನ್ನೋ ಪ್ರಶ್ನೆಗಳು ಕೂಡ ಮೂಡಿದೆ.

ಚುನಾವಣೆ ಸಮಯದಲ್ಲೇ ಟೆನ್ಷನ್

ಹೌದು ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆದರೆ ಹೀಗೆ ಅಧ್ಯಕ್ಷೀಯ ಚುನಾವಣೆ ಹತ್ತಿರವಾಗುತ್ತಿರುವ ಸಮಯದಲ್ಲೇ ಜೋ ಬೈಡನ್ ಅವರಿಗೆ ಭಾರಿ ಹಿನ್ನಡೆ ಮಾಡುತ್ತಿದೆ ಯುದ್ಧ. ಒಂದು ಕಡೆ ರಷ್ಯಾ & ಉಕ್ರೇನ್ ಯುದ್ಧದಲ್ಲಿ ಅಮೆರಿಕವು ಉಕ್ರೇನ್ ಪರ ನಿಂತಿದೆ. ಇನ್ನೊಂದು ಕಡೆ ಹಮಾಸ್ ಹಾಗೂ ಇಸ್ರೇಲ್ ಭೀಕರ ಕಾಳಗದಲ್ಲಿ ಇಸ್ರೇಲ್ ಪರವಾಗಿ ಬ್ಯಾಟ್ ಬೀಸುತ್ತಿದೆ ಅಮೆರಿಕ. ಆದ್ರೆ ಇದೆಲ್ಲಾ ಅಮೆರಿಕದಲ್ಲಿ ಬೈಡನ್‌ಗೆ ಉಲ್ಟಾ ಆಗುತ್ತಿದ್ದು, ಅಧ್ಯಕ್ಷೀಯ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

 Allegedly Israel Started Strong Attack On Gaza Again

ಒಟ್ನಲ್ಲಿ ಸಣ್ಣದೊಂದು ಯುದ್ಧ ಜಗತ್ತಿನ ಮೇಲೆ ಗಾಢ ಪರಿಣಾಮ ಬೀರುತ್ತಿದೆ. ಭವಿಷ್ಯಕ್ಕೆ ಇದು ಮಾರಕ ಅನ್ನೋ ಮಾತುಗಳು ಕೂಡ ಕೇಳಿಬರುತ್ತಿವೆ. ಹೀಗಿದ್ದಾಗಲೇ ಇಸ್ರೇಲ್ ಮತ್ತೆ ಮತ್ತೆ ಭೀಕರ ದಾಳಿ ನಡೆಸುತ್ತಿರುವುದು ಅಮೆರಿಕದ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಏಕೆಂದ್ರೆ ಉಕ್ರೇನ್ ವಿಚಾರದಲ್ಲಿ ಒಂದು ನಿಲುವು & ಇಸ್ರೇಲ್ ವಿಚಾರದಲ್ಲಿ ಇನ್ನೊಂದು ರೀತಿಯ ನಿಲುವು ಹೊಂದಿದೆ ಎಂಬ ಆರೋಪ, ಅಮೆರಿಕದ ವಿರುದ್ಧ ಈಗ ಕೇಳಿಬರುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+