ಇಸ್ರೇಲ್ ಸೇನೆಯಿಂದ ಎಡವಟ್ಟುಗಳ ಮೇಲೆ ಎಡವಟ್ಟು?
ಇಸ್ರೇಲ್ ಸೇನೆ ಸಿಕ್ಕಾಪಟ್ಟೆ ಎಡವಟ್ಟು ಮಾಡಿಕೊಳ್ಳುತ್ತಿದ್ದು, ಈ ಕಾರಣಕ್ಕೆ ಸಾಕಷ್ಟು ಕೆಟ್ಟ ಹೆಸರು ಪಡೆಯುತ್ತಿದೆ. ಅನಗತ್ಯ ಘರ್ಷಣೆಗೆ ಇಸ್ರೇಲ್ ದಾರಿ ಮಾಡಿಕೊಡುತ್ತಿದೆ ಎಂಬ ಆರೋಪಗಳ ಮಧ್ಯೆ ಇದೀಗ ಮತ್ತೊಮ್ಮೆ ಅಮಾಯಕ ನಾಗರಿಕರ ಮೇಲೆ ದಾಳಿ ನಡೆಸಿರುವ ಆರೋಪ ಕೇಳಿಬರುತ್ತಿದೆ. ಹಾಗಾದ್ರೆ ಅಸಲಿಗೆ ಆಗಿದ್ದು ಏನು? ಇಸ್ರೇಲ್ ಮಾಡುತ್ತಿರುವ ಈ ಎಡವಟ್ಟು ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳ ಮೇಲೆ ಯಾವ ರೀತಿ ಪ್ರಭಾವ ಬೀರುತ್ತಿದೆ..? ಬನ್ನಿ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ.
ಅಂದಹಾಗೆ ಹಮಾಸ್ ಲೀಡರ್ ಮೊಹಮ್ಮದ್ ಡೀಫ್ ಮೇಲೆ ದಾಳಿ ಮಾಡಲು ಹೋದ ಇಸ್ರೇಲ್ ಸೇನೆ ಎಡವಟ್ಟು ಮಾಡಿಕೊಂಡಿದೆ. ಮೊಹಮ್ಮದ್ ಡೀಫ್ ಬದಲಾಗಿ, ಇಸ್ರೇಲ್ ಸೇನೆಯ ಟಾರ್ಗೆಟ್ ಮಿಸ್ ಆಗಿ ಸಾಮಾನ್ಯ ಜನರು ಇದ್ದ ಪ್ರದೇಶದಲ್ಲಿ ಬಿದ್ದಿದೆ. ಹೀಗಾಗಿ ಕನಿಷ್ಠ 71 ಪ್ಯಾಲೆಸ್ಟೇನ್‌ನ ಪ್ರಜೆಗಳು ಮೃತಪಟ್ಟಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹೀಗಿದ್ರೂ ಇಸ್ರೇಲ್ ದಾಳಿಗೆ ಯಶಸ್ಸು ಕೂಡ ಸಿಕ್ಕಲ್ಲ. ಯಾಕಂದ್ರೆ ಈ ದಾಳಿಯ ಉದ್ದೇಶವೇ ಹಾಳಾಗಿ ಹೋಗಿದ್ದು, ಹಮಾಸ್ ಲೀಡರ್ ಮೊಹಮ್ಮದ್ ಡೀಫ್ ಸತ್ತಿದ್ದಾನಾ? ಎಂಬುದು ಕೂಡ ಇನ್ನೂ ಕನ್ಫರ್ಮ್ ಆಗಿಲ್ಲ. ಹೀಗಾಗಿ ಇಸ್ರೇಲ್ ಸೇನೆ ಮಾಡಿಕೊಂಡ ಎಡವಟ್ಟು ಇದೀಗ ಚರ್ಚೆಗೆ ಕೂಡ ಗ್ರಾಸವಾಗಿದೆ.
{image-israelnews022-1720890753.jpg kannada.oneindia.com
ಕಿರಾತಕ ಡೀಫ್ ಯಾರು ಗೊತ್ತಾ?
ಅಷ್ಟಕ್ಕೂ 2023ರ ಅಕ್ಟೋಬರ್ 7 ರಂದು ಹಮಾಸ್ ಬಂಡುಕೋರರು ನಡೆಸಿದ್ದ ದಾಳಿಯ ಮಾಸ್ಟರ್ ಮೈಂಡ್ ಇದೇ ಮೊಹಮ್ಮದ್ ಡೀಫ್ ಆಗಿದ್ದ. ಅಕ್ಟೋಬರ್ 7 ರಂದು ಇಸ್ರೇಲ್ ನೆಲದ ಮೇಲೆ ಭಾರಿ ಘೋರ ದಾಳಿ ಮಾಡಿತ್ತು. ಈ ದಾಳಿ ನಂತರವೇ ಪ್ಯಾಲೇಸ್ತೀನ್ ವಿರುದ್ಧ ಯುದ್ಧವನ್ನ ಘೋಷಣೆ ಮಾಡಿದ್ದ ಇಸ್ರೇಲ್ ಸೇನೆ ಎಲ್ಲೋ ಎಡವಟ್ಟು ಮಾಡಿಕೊಳ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ಇಂತಹ ಸಮಯದಲ್ಲೇ ತಪ್ಪು ಮಾಡಿದ ಉಗ್ರರನ್ನು ಬಿಟ್ಟು, ಅಮಾಯಕ ಜನರ ಮೇಲೆ ಹೀಗೆಲ್ಲ ದಾಳಿ ಮಾಡುತ್ತಿರುವ ಬಗ್ಗೆ ಚರ್ಚೆ ಶುರುವಾಗಿದೆ.
35,000ಕ್ಕೂ ಹೆಚ್ಚು ಜನ ಬಲಿ?
ಜಾಗತಿಕ ಮಟ್ಟದಲ್ಲಿ ಇಸ್ರೇಲ್ ನಡೆಯ ಬಗ್ಗೆ ಬೇಸರ ವ್ಯಕ್ತವಾಗಿದೆ. ಇಸ್ರೇಲ್ ವಿರುದ್ಧ ಜಗತ್ತು ಬೇಸರ ಹೊರಹಾಕಲು ಸ್ವತಃ ಇಸ್ರೇಲ್ ಕಾರಣ ಎಂಬ ಆರೋಪ ಕೂಡ ಇದೆ. ಯಾಕೆ ಅಂದ್ರೆ, ಹಮಾಸ್ ಉಗ್ರರನ್ನು ಹೊಡೆದು ಉರುಳಿಸುವ ನೆಪದಲ್ಲಿ ಇಸ್ರೇಲ್ ಸೇನೆ ಗಾಜಾ ಪ್ರದೇಶದಲ್ಲಿ ಸಾಮಾನ್ಯ ಜನರು ಮತ್ತು ನಿರಾಶ್ರಿತ ಶಿಬಿರದ ಮೇಲೆ ದಾಳಿ ಮಾಡಿ ಸಾಯಿಸುತ್ತಿದೆ ಎಂಬ ಆರೋಪವು ಇದೆ. 35000ಕ್ಕೂ ಹೆಚ್ಚು ನಿರಾಶ್ರಿತರು ಈಗಾಗಲೇ ಜೀವ ಬಿಟ್ಟಿರುವಾಗ, ಮೇಲಿಂದ ಮೇಲೆ ಎಡವಟ್ಟು ನಡೆಯುತ್ತಿದೆ.












Click it and Unblock the Notifications