ಇಸ್ರೇಲ್ ನಡೆಸಿದ ಬಾಂಬ್ ದಾಳಿಗೆ 22 ಮಂದಿ ಬಲಿ? ಗಾಜಾ ಪಟ್ಟಿಯಲ್ಲಿ ರಕ್ತಪಾತ...

ಇಸ್ರೇಲ್ ಮತ್ತೆ ರೊಚ್ಚಿಗೆದ್ದು ಗಾಜಾ ಪಟ್ಟಿ ಮೇಲೆ ದಾಳಿ ಮಾಡುತ್ತಿದೆ. ಅದರಲ್ಲೂ ಇದೀಗ ಇಸ್ರೇಲ್ ಸೇನೆ ನಡೆಸಿದ ಭೀಕರ ದಾಳಿ ಪರಿಣಾಮ 22 ಮಂದಿ ಬಲಿಯಾಗಿದ್ದು, ನೂರಾರು ಜನ ಗಾಯಗೊಂಡು ನರಳುತ್ತಿದ್ದಾರೆ ಎಂದು ಆರೋಪ ಮಾಡಲಾಗಿದೆ. ಹಾಗಾದ್ರೆ ಇಸ್ರೇಲ್ ಸೇನೆ ಈ ರೀತಿಯಾಗಿ ಭೀಕರ ದಾಳಿ ನಡೆಸಿದ್ದು ಯಾವ ಪ್ರದೇಶದಲ್ಲಿ? ನಿರಾಶ್ರಿತರ ಶಿಬಿರಗಳನ್ನೂ ಬಿಡದೆ ಟಾರ್ಗೆಟ್ ಮಾಡಿ ಇಸ್ರೇಲ್ ದಾಳಿ ಮಾಡುತ್ತಿದೆಯಾ? ಏನಿದು ಆರೋಪ? ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ.

ಅಂದಹಾಗೆ ಇಂತಹ ದಾಳಿ ನಡೆದಿರುವುದು ಗಾಜಾ ಪಟ್ಟಿಯ ಯುದ್ಧ ಸಂತ್ರಸ್ತರಿಗಾಗಿ ಆಶ್ರಯ ಕಲ್ಪಿಸಿರುವ ಶಾಲೆಯ ಮೇಲೆ ಅಂತ ಇಸ್ರೇಲ್ ಸೇನೆ ವಿರುದ್ಧ ಗಂಭೀರ ಆರೋಪ ಮಾಡಲಾಗಿದೆ. ಇದೀಗ ಹಮಾಸ್‌ ಕಮಾಂಡ್ ಕೇಂದ್ರವನ್ನು ಟಾರ್ಗೆಟ್ ಮಾಡಿ, ನಾವು ದಾಳಿ ಮಾಡಿದ್ದೇವೆ ಅಂತಾ ಇಸ್ರೇಲ್ ಸೇನೆ ಹೇಳಿದೆ. ಆದರೆ ದಾಳಿ ನಡೆದಿರುವುದು ಮಾತ್ರ ಗಾಜಾ ಪಟ್ಟಿ ಶಾಲೆಯ ಮೇಲೆ ಎಂದು ಆರೋಪ ಮಾಡಲಾಗಿದೆ. ಗಾಜಾ ಪಟ್ಟಿ ಪ್ರದೇಶದಲ್ಲಿರುವ ಜೀಟೌನ್‌ ನಗರದ ಶಾಲೆ ಮೇಲೆ ಈ ರೀತಿಯಾಗಿ ದಾಳಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಹಾಗಾದ್ರೆ ಈ ದಾಳಿಯಲ್ಲಿ ಮೃತಪಟ್ಟ ಮಕ್ಕಳ ಸಂಖ್ಯೆ ಎಷ್ಟು?

Allegedly Israel Attack On The Gaza Strip Is Killed 22

41,000ಕ್ಕೂ ಹೆಚ್ಚು ಜನರ ಜೀವ...

2023 ಅಕ್ಟೋಬರ್‌ 7 ರಂದು ಹಮಾಸ್ ತನ್ನ ಮೇಲೆ ದಾಳಿ ಮಾಡಿದೆ ಎಂಬ ಆರೋಪ ಕೇಳಿ ಬಂದ ನಂತರ ಇಸ್ರೇಲ್ ರೊಚ್ಚಿಗೆದ್ದು ಮರುದಾಳಿ ಶುರು ಮಾಡಿತ್ತು. ಹೀಗೆ ಆರಂಭವಾಗಿದ್ದ ದಾಳಿ & ಪ್ರತಿದಾಳಿ ಈಗಾಗಲೇ 41,000ಕ್ಕೂ ಹೆಚ್ಚು ಜನರ ಜೀವ ತೆಗೆದಿದೆ. ಇದೇ ರೀತಿಯಾಗಿ ಇದೀಗ ಗಾಜಾ ಪಟ್ಟಿ ಪ್ರದೇಶದಲ್ಲಿರುವ ಜೀಟೌನ್‌ ನಗರದ ಶಾಲೆ ಮೇಲೆ ಇಸ್ರೇಲ್ ಸೇನೆಯಿಂದ ಭಾರಿ ಘೋರ ದಾಳಿ ನಡೆದಿದೆ ಎಂದು ಆರೋಪಿಸಲಾಗಿದೆ. ಈ ದಾಳಿಯಲ್ಲಿ 3 ತಿಂಗಳ ಮಗು ಸೇರಿ 13 ಮಕ್ಕಳು & 6 ಮಹಿಳೆಯರು ಬಲಿಯಾಗಿದ್ದಾರೆ ಎಂದು ಆರೋಪ ಮಾಡಲಾಗಿದೆ.

ಹಮಾಸ್ ವಿರುದ್ಧ ಇಸ್ರೇಲ್ ಆರೋಪವೇನು?

ಮತ್ತೊಂದು ಕಡೆಯಲ್ಲಿ ಇದೀಗ ದಾಳಿ ನಡೆಸಿರುವ ಶಾಲೆಯನ್ನು ಹಮಾಸ್ ಬಂಡುಕೋರರ ಗುಂಪು, ಮಿಲಿಟರಿ ಉದ್ದೇಶಕ್ಕೆ ಬಳಸುತ್ತಿತ್ತು. ಆದರೆ ನಾವು ಹಮಾಸ್‌ ಕಮಾಂಡ್‌ ಕಚೇರಿಯನ್ನ ಗುರಿಯಾಗಿಸಿ ದಾಳಿ ಮಾಡಿದ್ದೇವೆ ಎಂದು ವಿವರಣೆ ನೀಡಿದೆ ಇಸ್ರೇಲ್ ಮಿಲಿಟರಿ. ಈ ಮೂಲಕ ಇಸ್ರೇಲ್ & ಗಾಜಾ ಪಟ್ಟಿ ಯುದ್ಧ ನಿಲ್ಲಬಹುದು ಎಂಬ ನಿರೀಕ್ಷೆ ಇದೀಗ ಸುಳ್ಳಾಗಿ ಹೋಗಿದೆ. ಮತ್ತೊಂದು ಕಡೆ ಜಾಗತಿಕ ಮಟ್ಟದಲ್ಲಿ ಕೂಡ ಈ ಬೆಳವಣಿಗೆ ಭಯ ಮೂಡಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+