Donald Trump: ಟ್ರಂಪ್ ನಿರ್ಧಾರದಿಂದ ಭಾರತದ ವಿದ್ಯಾರ್ಥಿಗಳಿಗೆ ಸಮಸ್ಯೆ?

ಡೊನಾಲ್ಡ್ ಟ್ರಂಪ್ ಕೈಗೆ ಅಧಿಕಾರ ಸಿಕ್ಕ ನಂತರ ಅಮೆರಿಕದ ಆಡಳಿತ ವಿವಾದಕ್ಕೆ ಸಿಲುಕಿ, ಪ್ರತಿದಿನ ನರಳುವ ವಾತಾವರಣ ನಿರ್ಮಾಣ ಆಗಿದೆ. ಒಂದು ಕಡೆ ತೆರಿಗೆ ವಿಚಾರವಾಗಿ ಇದೇ ಡೊನಾಲ್ಡ್ ಟ್ರಂಪ್ ಕೈಗೊಂಡ ನಿರ್ಧಾರ ಕಿಚ್ಚು ಹೊತ್ತಿಸಿದೆ. ಇದು ಸಾಲದು ಎನ್ನುವಂತೆ, ಅಕ್ರಮ ವಲಸಿಗರ ವಿಚಾರ ಕೂಡ ಇದೀಗ ಅಮೆರಿಕದಲ್ಲಿ ಕಿಚ್ಚು ಹೊತ್ತಿಸಿದೆ. ಭಾರತ ಸೇರಿ ವಿವಿಧ ದೇಶಗಳಿಂದ ವಲಸೆ ಹೋಗಿರುವ ಜನರು ಇದೀಗ ಸಂಕಷ್ಟದ ಸುಳಿಗೆ ಸಿಲುಕಿದ್ದಾರೆ.

ಒಂದು ಮಾಡು ಅಂದ್ರೆ ಇಲ್ಲ ಹಾಳು ಮಾಡಿದೆ ಅನ್ನೋದು ಡೊನಾಲ್ಡ್ ಟ್ರಂಪ್ ಅವರಿಗೆ ರೂಢಿ ಆಗಿದೆ. 2016ರ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಏನೆಲ್ಲಾ ರಂಪಾಟ ಮಾಡಿದ್ದರೋ ಈ ಟ್ರಂಪ್, ಈಗಲೂ ಅದೇ ರೀತಿಯಲ್ಲಿ ಕಿರಿಕ್ ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕೂಡ ಕಾರಣವಾಗಿದ್ದಾರೆ. ಅಕ್ರಮ ವಲಸಿಗರನ್ನು ಹೊರಗೆ ಹಾಕುತ್ತೇನೆ ಅಂತಾ ಹೇಳಿರುವ ಟ್ರಂಪ್ ಸ್ವತಃ ಅಮೆರಿಕದ ಪ್ರಜೆಗಳನ್ನೂ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಭಾರತ ಮೂಲದ ಲಕ್ಷಾಂತರ ಜನ ಅಮೆರಿಕದಲ್ಲಿ ಇದ್ದು, ಅವರಿಗೂ ಇದೀಗ ಸಮಸ್ಯೆ ಎದುರಾಗಿದೆ.

Allegedly Indian Students Are Facing More Problems After Visa Revoked From Trump Administration

ಡೊನಾಲ್ಡ್ ಟ್ರಂಪ್ ಹೊಸ ಆಟ ಶುರು?

ಅಂದಹಾಗೆ ಡೊನಾಲ್ಡ್ ಟ್ರಂಪ್ ಸರ್ಕಾರ & ಅಕ್ರಮ ವಲಸಿಗರ ನಡುವೆ ನಡೆಯುತ್ತಿರುವ ತಿಕ್ಕಾಟ ಇನ್ನೂ ನಿಂತಿಲ್ಲ. ಡೊನಾಲ್ಡ್ ಟ್ರಂಪ್ ಚುನಾವಣೆ ಸಮಯದಲ್ಲಿ ಅಮೆರಿಕದ ಜನರಿಗೆ ಅಥವಾ ತಮ್ಮ ಮತದಾರರಿಗೆ ಮಾತು ಕೊಟ್ಟಂತೆ ಅಕ್ರಮ ವಲಸಿಗರ ವಿರುದ್ಧ ಯುದ್ಧವನ್ನೇ ಸಾರಿದ್ದಾರೆ. ಆದ್ರೆ ಹೀಗೆ ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವ ಭರದಲ್ಲಿ ದೊಡ್ಡ ಎಡವಟ್ಟು ಕೂಡ ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ. ಅದರಲ್ಲೂ ಟ್ರಂಪ್ ಸರ್ಕಾರದ ಆದೇಶದಿಂದ ಭಾರತ ಮೂಲದ ವಿದ್ಯಾರ್ಥಿಗಳು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಆರೋಪ ಕೂಡ ಕೇಳಿ ಬಂದಿದೆ.

ಭಾರತದ ವಿದ್ಯಾರ್ಥಿಗಳಿಗೆ ಕಂಟಕ ಎದುರಾಯ್ತಾ?

ಡೊನಾಲ್ಡ್ ಟ್ರಂಪ್ ಅವರು ತಮ್ಮ ಅಧಿಕಾರಿಗಳ ಮೂಲಕ ಅಕ್ರಮ ವಲಸಿಗರು ಮಾತ್ರವಲ್ಲ, ಅಮೆರಿಕ ಎಂಬ ದೈತ್ಯ ದೇಶಕ್ಕೆ ಕಾನೂನು ರೀತಿಯಲ್ಲಿ ವಲಸೆ ಹೋಗಿದ್ದ ಜನರಿಗೂ ಸಮಸ್ಯೆ ಮಾಡುತ್ತಿದ್ದಾರೆ ಎಂಬ ಆರೋಪ ಮಾಡಲಾಗಿದೆ. ಈ ಪೈಕಿ ಡೊನಾಲ್ಡ್ ಟ್ರಂಪ್ ಆಡಳಿತದ ವತಿಯಿಂದ ಕೈಗೊಂಡ ನಿರ್ಧಾರದಿಂದ ದೊಡ್ಡ ಸಮಸ್ಯೆ ಆಗುತ್ತಿರುವುದು ಭಾರತ ಮೂಲದ ವಿದ್ಯಾರ್ಥಿಗಳಿಗೆ ಎಂದು ಆರೋಪಿಸಲಾಗಿದೆ.

ಈಗಾಗಲೇ, ಹಲವು ವಿದ್ಯಾರ್ಥಿಗಳ ವಿಸಾ ಮೇಲೆ ಕಣ್ಣಿಟ್ಟು ಡೊನಾಲ್ಡ್ ಟ್ರಂಪ್ ಸರ್ಕಾರದ ಅಧಿಕಾರಿಗಳು ಕ್ರಮವನ್ನು ಕೈಗೊಂಡಿದ್ದಾರೆ. ಈ ಪೈಕಿ, ಭಾರತದ ವಿದ್ಯಾರ್ಥಿಗಳೇ ಹೆಚ್ಚಾಗಿ ಸಮಸ್ಯೆ ಎದುರಿಸಿದ್ದಾರಂತೆ. ಶೇಕಡಾ 50ಕ್ಕಿಂತ ಹೆಚ್ಚು ಭಾರತ ಮೂಲದ ವಿದ್ಯಾರ್ಥಿಗಳಿಗೇ ಈಗ ತೊಂದರೆ ಆಗಿದೆ ಎಂದು ಆರೋಪ ಮಾಡಲಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಮತ್ತೆ ಸುದ್ದಿಯಾಗುತ್ತಿದ್ದು, ಭಾರತ & ಅಮೆರಿಕದ ಸಂಬಂಧದ ನಡುವೆ ತೂಗುಗತ್ತಿ ನೇತಾಡುತ್ತಿದೆ. ಮುಂದಿನ ದಿನಗಳಲ್ಲಿ ಇದು ಎರಡೂ ದೇಶಗಳ ನಡುವೆ ಪರಿಣಾಮ ಬೀರಿ, ಭಾರತ & ಅಮೆರಿಕದ ಸಂಬಂಧ ಹಾಳು ಮಾಡುವ ಸಾಧ್ಯತೆ ಇದೆ ಎಂಬ ಮಾತು ಕೇಳಿ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+