ತೈವಾನ್ ಸುತ್ತಲೂ 62 ಸೇನಾ ವಿಮಾನ & 27 ಯುದ್ಧನೌಕೆ ನಿಯೋಜನೆ!
ಚೀನಾ ತಾನು ಹೇಳಿದಂತೆ ಮಾಡುತ್ತಿದೆ, ಕೆಲವೇ ಗಂಟೆಗಳ ಹಿಂದೆ ತೈವಾನ್ ವಿರುದ್ಧ ಯುದ್ಧ ಸಾರುವ ಎಚ್ಚರಿಕೆ ನೀಡಿದ್ದ ಚೀನಾ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಇದೀಗ ದ್ವೀಪರಾಷ್ಟ್ರ ತೈವಾನ್ ಸುತ್ತಲೂ ಭಾರಿ ಪ್ರಮಾಣದ ಯುದ್ಧ ವಿಮಾನ & ಯುದ್ಧ ನೌಕೆಗಳ ನಿಯೋಜನೆ ಮಾಡಿದೆ ಚೀನಾ. ಈ ಮೂಲಕ ಯುದ್ಧ ಶುರುವಾಗಲು ಕ್ಷಣಗಣನೆ ಆರಂಭವಾಗಿದೆ ಎಂದು ಆರೋಪ ಮಾಡಲಾಗಿದೆ.
ಚೀನಾ ಫುಲ್ ಗರಂ ಆಗಿದ್ದು, ತೈವಾನ್ ವಿರುದ್ಧ ಸೇಡಿಗೆ ಸೇಡು ಅಂತಾ ತೊಡೆತಟ್ಟಿದೆ. ಈ ಕಾರಣಕ್ಕೆ ಹೇಗಾದರೂ ಮಾಡಿ ತೈವಾನ್ ನಾಶ ಮಾಡಬೇಕು ಅಂತಾ ಚೀನಾ ಯತ್ನಿಸುತ್ತಿದೆ. ಅಲ್ಲದೆ ಚೀನಾ ಇದೀಗ ತೈವಾನ್ ದೇಶವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗೆ ಅಮೆರಿಕ & ಪಾಶ್ಚಿಮಾತ್ಯ ದೇಶಗಳು ಚೀನಾ ವಿರುದ್ಧ ಆರೋಪವನ್ನ ಮಾಡುತ್ತಿರುವ ಸಮಯದಲ್ಲೇ, ತೈವಾನ್ ಸುತ್ತಲೂ 62 ಸೇನಾ ವಿಮಾನ & 27 ಯುದ್ಧನೌಕೆ ನಿಯೋಜನೆ ಮಾಡಿದೆ ಚೀನಾ ಸೇನೆ. ಇದು ಭಯ ಹುಟ್ಟುಹಾಕಿದ್ದು, ಯಾವಾಗ ಯುದ್ಧವು ಶುರುವಾಗುತ್ತೋ ಅನ್ನೋ ಭಯ ಆವರಿಸಿದೆ.

ಚೀನಾ ವಿರುದ್ಧ ತೈವಾನ್ ಯುದ್ಧ?
ಹೀಗೆ ಚೀನಾ ಸೇನೆ ಭಾರಿ ಪ್ರಮಾಣದಲ್ಲಿ ಯುದ್ಧ ವಿಮಾನಗಳು & ಯುದ್ಧನೌಕೆ ನಿಯೋಜನೆಯ ಮಾಡಿದ ನಂತರ ತೈವಾನ್ ಕೂಡ ಎಚ್ಚೆತ್ತುಕೊಂಡಿದೆ. ತನ್ನ ವಾಯು ಪ್ರದೇಶದಲ್ಲಿ ಚೀನಾದ ಸೇನೆ ಕಾರ್ಯಾಚರಣೆ ನಡೆಸಿರುವುದನ್ನ ತೈವಾನ್‌ನ ರಕ್ಷಣಾ ಸಚಿವಾಲಯ ಪತ್ತೆ ಮಾಡಿ, ಇದರ ಬಗ್ಗೆ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಿಗೆ ಮಾಹಿತಿ ನೀಡಿದೆ. ತನ್ನ ವಾಯು ರಕ್ಷಣಾ ಗಡಿ ವಲಯದಲ್ಲಿ ಚೀನಾ ವಿಮಾನಗಳು ಹಾರಾಟವನ್ನ ನಡೆಸಿವೆ ಅಂತಾ ಈಗ ತೈವಾನ್ ರಕ್ಷಣಾ ಸಚಿವಾಲಯ ಗಂಭೀರ ಆರೋಪ ಮಾಡಿದೆ.
ಬೆಳಗ್ಗೆ 6 ಗಂಟೆಗೆ ಹಾಜರ್!
ಈ ಕುರಿತು ಸಂಪೂರ್ಣ ಮಾಹಿತಿ ನೀಡಿರುವ ತೈವಾನ್ ರಕ್ಷಣಾ ಸಚಿವಾಲಯವು, ಶನಿವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ತನ್ನ 62 ವಿಮಾನಗಳು & 27 ಯುದ್ಧನೌಕೆಗಳ ಮೂಲಕ ತೈವಾನ್ ಸುತ್ತಲೂ ಚೀನಾ ಕಾರ್ಯಾಚರಣೆ ನಡೆಸಿದೆ ಎಂದು ಆರೋಪ ಮಾಡಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯೇ ಇದರ ಹಿಂದೆ ಇದೆ, ಈ ಪೈಕಿ 47 ವಿಮಾನಗಳು ತೈವಾನ್‌ನ ನೈಋತ್ಯ ಆಗ್ನೇಯ & ಪೂರ್ವ ವಾಯು ರಕ್ಷಣಾ ವಲಯ ಪ್ರವೇಶ ಮಾಡಿವೆ ಎಂದು ಆರೋಪಿಸಲಾಗಿದೆ.

ಈ ಮೂಲಕ ಇಬ್ಬರ ನಡುವೆ ಯುದ್ಧಕ್ಕೆ ರಣಕಹಳೆ ಮೊಳಗಿದೆ ಎಂಬ ಮಾತು ಕೇಳಿಬಂದಿದೆ. ಎಲ್ಲಾ ಘಟನೆಗಳನ್ನು ಅಮೆರಿಕ ಸೇರಿ ಪಾಶ್ಚಿಮಾತ್ಯ ದೇಶಗಳು ಸೂಕ್ಷ್ಮವಾಗಿ ಗಮನಿಸುತ್ತಿವೆ ಎನ್ನಲಾಗಿದೆ. ಆದರೆ ಯಾವುದೂ ಇನ್ನೂ ಅಧಿಕೃತವಾಗಿಲ್ಲ, ಮತ್ತೊಂದು ಕಡೆ ಈಗಾಗಲೇ ಜಗತ್ತಿನಲ್ಲಿ 2 ಘೋರ ಯುದ್ಧಗಳು ನಡೆಯುತ್ತಿರುವುದು ಹೊಸ ತಲೆನೋವು ತರಿಸಿದೆ.












Click it and Unblock the Notifications