ಗಾಜಾ ಜನರಲ್ಲಿ ನಿಲ್ಲದ ಭಯದ ವಾತಾವರಣ, ಮತ್ತೆ ಮತ್ತೆ ಮುಂದುವರಿದ ವಾಯುದಾಳಿ
ಹಮಾಸ್ & ಇಸ್ರೇಲ್ ಬಡಿದಾಟಕ್ಕೆ ಗಾಜಾ ನೆಲ ನಾಶವಾಗಿ ಹೋಗಿದೆ, ಕೇವಲ 2 ವರ್ಷ ಅಂತರದಲ್ಲಿ ಗಾಜಾ ಪಟ್ಟಿ ನರಕವಾಗಿ ಬದಲಾಗಿದೆ. ಹಮಾಸ್ ವಿರುದ್ಧದ ಕೋಪಕ್ಕೆ ಯುದ್ಧ ಘೋಷಿಸಿ, ಗಾಜಾ ಮೇಲೆ ನುಗ್ಗಿ ಬಂದಿದ್ದ ಇಸ್ರೇಲ್ ಪಡೆಗಳು ಭಾರಿ ದೊಡ್ಡ ಪ್ರಮಾಣದ ಕಾರ್ಯಾಚರಣೆ ಆರಂಭ ಮಾಡಿದ್ದವು. ಈಗಾಗಲೇ ಹಲವು ಬಾರಿ ಕದನ ವಿರಾಮ ಘೋಷಣೆ ಮಾಡಿದ್ದರೂ, ಮತ್ತೆ ಮತ್ತೆ ಗಾಜಾ ನೆಲದಲ್ಲಿ ಹಿಂಸಾಚಾರ ಹೆಚ್ಚಾಗುತ್ತಿದೆ. ಇದರ ಪರಿಣಾಮ ಜನರಿಗೆ ತುತ್ತು ಅನ್ನಕ್ಕೂ ಭಾರಿ ದೊಡ್ಡ ಸಮಸ್ಯೆ ಆಗುತ್ತಿದೆ.
ಗಾಜಾ ಪಟ್ಟಿಯಲ್ಲಿ ಕದನ ವಿರಾಮ ಘೋಷಣೆ ಮಾಡಿ, ಯುದ್ಧವನ್ನ ನಿಲ್ಲಿಸಿದ್ದೇನೆ ಅಂತಾ ಟ್ರಂಪ್ ಹೇಳಿದ್ದರು. ಆದರೆ, ಟ್ರಂಪ್ ಅವರು ಮಾತು ಕೊಟ್ಟ ಕೆಲವೇ ದಿನಗಳಲ್ಲಿ ಮತ್ತೆ ಹಿಂಸಾಚಾರದ ಬೆಂಕಿ ಹೊತ್ತಿಕೊಂಡಿತ್ತು. ನೋಡ, ನೋಡುತ್ತಲೇ ಮತ್ತೆ ಹಮಾಸ್ & ಇಸ್ರೇಲ್ ನಡುವೆ ಗಲಾಟೆ ಕೂಡ ಜೋರಾಗಿದೆ. ಹೀಗಿದ್ದಾಗ ಗಾಜಾ ಜನರಲ್ಲಿ ನಿಲ್ಲದ ಭಯದ ವಾತಾವರಣ ಸೃಷ್ಟಿಯಾಗಿದ್ದು, ಮತ್ತೆ ಮತ್ತೆ ಮುಂದುವರಿದ ವಾಯುದಾಳಿ ಪರಿಣಾಮ ಇನ್ನಷ್ಟು ಜೀವಗಳು ಬಲಿಯಾಗಿವೆ. ಅಲ್ಲದೆ ಈ ವಿಚಾರ ಮತ್ತೆ ಜಾಗತಿಕ ಮಟ್ಟದಲ್ಲಿ ಭಾರಿ ದೊಡ್ಡ ಚರ್ಚೆಗೆ ವೇದಿಕೆಯನ್ನೂ ಒದಗಿಸಿದೆ...

ಯುದ್ಧದ ವಿಚಾರದಲ್ಲಿ ಅಮೆರಿಕ ನಿಲುವು ಏನು?
ಮಧ್ಯಪ್ರಾಚ್ಯ ಭಾಗದ ಗಾಜಾ ಪ್ರದೇಶದಲ್ಲಿ ಅಮೆರಿಕ ಬಿಗಿಯಾದ ಹಿಡಿತ ಹೊಂದಿದೆ. ಇಸ್ರೇಲ್‌ನ ಮೂಲಕ ಮಧ್ಯಪ್ರಾಚ್ಯ ಭೂಭಾಗಕ್ಕೂ ತನ್ನ ಶಕ್ತಿಯನ್ನು ವಿಸ್ತರಣೆ ಮಾಡಿಕೊಂಡಿದೆ. ಇದೆಲ್ಲವನ್ನೂ ಮೀರಿ ಇಸ್ರೇಲ್ & ಅಮೆರಿಕ ಅತ್ಯಾಪ್ತ ರಾಷ್ಟ್ರಗಳು. ಹೀಗಾಗಿ ಇಬ್ಬರ ನಡುವೆ ಮಾತುಕತೆ ಮಾಡಿ ಯುದ್ಧ ನಿಲ್ಲಿಸುವ ಪ್ರಯತ್ನವನ್ನು ಪದೇ ಪದೇ ಮಾಡುತ್ತಿದೆ ಡೊನಾಲ್ಡ್ ಟ್ರಂಪ್ ಆಡಳಿತ.
ಹಾಗೇ ಇದೇ ವಿಚಾರದಲ್ಲಿ ತಮಗೆ ನೊಬೆಲ್ ಪ್ರಶಸ್ತಿಯನ್ನು ಕೂಡ ಕೊಡಬೇಕು ಎಂದು ಹೇಳಿದ್ದರು ಟ್ರಂಪ್ ಅವರು. ಆದರೆ ಇದೀಗ ಬೇರೆಯದ್ದೇ ರೀತಿಯ ಕಿರಿಕ್ ಶುರುವಾಗಿದೆ. ಈಗಾಗಲೇ ಸುಮಾರು 60,000 ಜನರು ಗಾಜಾ ನೆಲದಲ್ಲಿ ಯುದ್ಧಕ್ಕೆ ಬಲಿಯಾಗಿರುವ ಆರೋಪ ಕೇಳಿಬರುತ್ತಿದೆ. ಇದರ ಜೊತೆಗೆ ಲಕ್ಷಾಂತರ ಗಾಯಾಳುಗಳು ಕೂಡ ನರಳುತ್ತಿದ್ದಾರೆ.
ಯುದ್ಧ ನಿಲ್ಲಿಸದೇ ಹೋದರೆ ಪರಿಸ್ಥಿತಿ ಭೀಕರ?
ಹೌದು, ಅಮೆರಿಕ ಎದುರು ಇದೀಗ ಎರಡು ಆಯ್ಕೆಗಳು ಇವೆ. ಮೊದಲ ಆಯ್ಕೆ ಗಾಜಾ ಯುದ್ಧ ನಿಲ್ಲಿಸಿ ಎಲ್ಲವನ್ನೂ ಸೈಲೆಂಟ್ ಮಾಡುವುದು. ಇಲ್ಲವಾದರೆ ಮಧ್ಯಪ್ರಾಚ್ಯ ದೇಶಗಳ ಜೊತೆಯಲ್ಲಿ ದ್ವೇಷ ಕಟ್ಟಿಕೊಳ್ಳುವುದು. ಹೀಗೆ ಅಮೆರಿಕ ಕೂಡ ಭಾರಿ ದೊಡ್ಡ ಗೊಂದಲದಲ್ಲಿ ನರಳಿ ಹೋಗಿದೆ. ಜೊತೆಗೆ ಇಸ್ರೇಲ್ ತನ್ನ ಮಾತು ಕೇಳುತ್ತಿಲ್ಲ ಎಂಬುದನ್ನು ಹೊರಗೆ ಹೇಳಲು ಕೂಡ ಅಮೆರಿಕದ ಆಡಳಿತ ಸಂಕಟಪಡುತ್ತಿದೆ. ಇದನ್ನೆಲ್ಲಾ ನೋಡುತ್ತಿದ್ದರೆ ಯುದ್ಧ ಇನ್ನಷ್ಟು ದಿನ ಅಬ್ಬರಿಸುವುದು ಗ್ಯಾರಂಟಿ ಎನ್ನಬಹುದು.












Click it and Unblock the Notifications