Israel: ಇಸ್ರೇಲ್ ದಾಳಿಗೆ ಎಲ್ಲಾ ಉಡೀಸ್.. ಲೆಬನಾನ್ ರಾಜಧಾನಿ ಸ್ಮಶಾನ...
ಇಸ್ರೇಲ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಬಡಿದಾಟ ಸೈಲೆಂಟ್ ಆಗುತ್ತಿಲ್ಲ. ಹೀಗೆ ಘೋರ ಹಿಂಸೆಗೆ ಇಬ್ಬರ ನಡುವಿನ ತಿಕ್ಕಾಟ ಸಾಕ್ಷಿಯಾಗುತ್ತಿದೆ. ಒಂದು ಕಡೆ ಇಬ್ಬರ ಮಧ್ಯೆ ಗಲಾಟೆ ನಡೆಯುವಾಗಲೇ, ಇನ್ನೊಂದು ಕಡೆ ಲೆಬನಾನ್ ವಿರುದ್ಧ ಕೂಡ ಇಸ್ರೇಲ್ ಮಿಲಿಟರಿ ಭರ್ಜರಿ ಕಾರ್ಯಾಚರಣೆ ಶುರು ಮಾಡಿದೆ. ದಿಢೀರ್ ಹೀಗೆ ಇಸ್ರೇಲ್ ಸೇನೆ ಲೆಬನಾನ್ ರಾಜಧಾನಿ ಮೇಲೆ ನಡೆಸಿದ ದಾಳಿಗೆ 6 ಜನ ಜೀವ ಬಿಟ್ಟಿದ್ದಾರೆ. ಹಾಗಾದ್ರೆ ದಿಢೀರ್ ಇಸ್ರೇಲ್ ಸೇನೆ ಹೀಗೆ ಘೋರ ದಾಳಿ ನಡೆಸಿದ್ದು ಏಕೆ? ಏನಿದು ದಿಢೀರ್ ಸೇಡು? ಮುಂದೆ ಓದಿ.
ಇಸ್ರೇಲ್ & ಲೆಬನಾನ್ ಹಾಗೂ ಇಸ್ರೇಲ್ & ಇರಾನ್ ನಡುವೆ ಘೋರ ಕಾಳಗ ಶುರುವಾಗಿದೆ. ಪ್ರಪಂಚವೇ ಈಗ ಇಸ್ರೇಲ್ ಮೇಲೆ ಕಣ್ಣಿಟ್ಟು ಕೂರುವ ಪರಿಸ್ಥಿತಿ ನಿರ್ಮಾಣ ಆಗುತ್ತಿದೆ. ಇಸ್ರೇಲ್ ಒಂದಲ್ಲ ಒಂದು ಸಮಸ್ಯೆಗೆ ಸಿಲುಕುತ್ತಿದೆ, ಯಾಕಂದ್ರೆ ಗಾಜಾಪಟ್ಟಿ ಯುದ್ಧದೊಂದಿಗೆ ಹಿಜ್ಬುಲ್ಲಾ ಜೊತೆಗೂ ಇಸ್ರೇಲ್ ಕಿರಿಕ್ ಶುರುವಾಗಿದೆ. ಹೀಗಾಗಿ ಲೆಬನಾನ್ ವಿರುದ್ಧ ಕೂಡ ದಾಳಿ ಮಾಡ್ತಿದೆ. ಲೆಬನಾನ್ ದೇಶದ ನೂರಾರು ಜಾಗಗಳನ್ನು ಟಾರ್ಗೆಟ್ ಮಾಡಿ ಇಸ್ರೇಲ್ ದಾಳಿ ಮಾಡುತ್ತಿದೆ. ಈ ಪೈಕಿ ಹಿಜ್ಬುಲ್ಲಾ ಬಂಡುಕೋರ ಸಂಘಟನೆ ಸದಸ್ಯರು ಹಾಗೂ ಮುಖಂಡರ ಕಥೆಯನ್ನೇ ಮುಗಿಸಿ ಹಾಕಿದೆ ಇಸ್ರೇಲ್ . ಮೊನ್ನೆ ಮೊನ್ನೆ ಹಿಜ್ಬುಲ್ಲಾ ಸಂಘಟನೆ ಮುಖ್ಯಸ್ಥನ ಕಥೆಯನ್ನೇ ಮುಗಿಸಿತ್ತು ಇಸ್ರೇಲ್. ಹೀಗಿದ್ದಾಗಲೇ ಇಸ್ರೇಲ್ ಸೇನೆ ಲೆಬನಾನ್ ರಾಜಧಾನಿ ಬೈರೂತ್ ಮೇಲೆ ನಡೆಸಿರುವ ದಾಳಿಗೆ 6 ಜನ ಜೀವ ಬಿಟ್ಟಿದ್ದಾರೆ.

ನಿದ್ದೆ ಮಾಡುತ್ತಿದ್ದವರಿಗೆ ಬಾಂಬ್ ಸೌಂಡ್!
ಹೌದು, ಲೆಬನಾನ್ ರಾಜಧಾನಿ ಬೈರೂತ್ ಮೇಲೆ ಇಸ್ರೇಲ್ ಬಾಂಬ್ ದಾಳಿ ಆರಂಭ ಮಾಡಿದೆ. ಬೈರೂತ್ ನಗರದ ಬಚೌರ ಪ್ರದೇಶದ ಸಂಸತ್ ಸಮೀಪದ ಕಟ್ಟಡಗಳನ್ನ ಗುರಿಯಾಗಿಸಿಕೊಂಡು ಇಸ್ರೇಲ್ ಮಿಲಿಟರಿ ಈ ರೀತಿಯ ದಾಳಿ ನಡೆಸಿದೆ ಎಂದು ಲೆಬನಾನ್ ಆರೋಪ ಮಾಡಿದೆ. ಈ ನಡುವೆ ಇಸ್ರೇಲ್ ದಾಳಿಯಿಂದಾಗಿ ಬೆಚ್ಚಿಬಿದ್ದಿರುವ ಲೆಬನಾನ್ ನಿವಾಸಿಗಳು ಊರು ಬಿಟ್ಟು & ಮನೆ ಬಿಟ್ಟು ಓಡಿ ಹೋಗುವ ಪರಿಸ್ಥಿತಿ ನಿರ್ಮಾಣ ಆಗಿದೆ. ಬೆಳ್ಳಂ ಬೆಳಗ್ಗೆ ಇಸ್ರೇಲ್ ಮಿಲಿಟರಿ ಬಾಂಬ್ ದಾಳಿ ನಡೆಸಿದ ಕಾರಣಕ್ಕೆ ಭೀಕರ ಶಬ್ದ ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ. ದಾಳಿಯ ಹಿನ್ನೆಲೆ 6 ಜನರು ಜೀವ ಬಿಟ್ಟಿರುವುದೂ ಅಲ್ಲದೆ ಹತ್ತಾರು ಜನ ಗಾಯಗೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಮುಟ್ಟಿದರೆ ತಟ್ಟಿಬಿಡ್ತೀವಿ ಅಂತಿದೆ ಇಸ್ರೇಲ್
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಇದೀಗ ಇರಾನ್ ವಿರುದ್ಧ ಮತ್ತೊಂದು ದೊಡ್ಡದಾದ ದಾಳಿ ಬಗ್ಗೆ ಮುನ್ಸೂಚನೆ ನೀಡಿದ್ದಾರೆ. ಯಾಕಂದ್ರೆ ಇರಾನ್ ಸೇನೆ ಕ್ಷಿಪಣಿಗಳ ಮೂಲಕವೇ ಇಸ್ರೇಲ್ ನೆಲದಲ್ಲಿ ಆತಂಕ ಹುಟ್ಟಿಸಿದ್ದು, ಅದೇ ರೀತಿಯಾಗಿ ಇಸ್ರೇಲ್ ಕೂಡ ಘೋರ ದಾಳಿ ನಡೆಸಿ ಉತ್ತರ ನೀಡಲು ತೀರ್ಮಾನ ಮಾಡಿದಂತೆ ಕಾಣುತ್ತಿದೆ. ಹೀಗಾಗಿ ಇದೀಗ ಎಚ್ಚರಿಕೆಯ ಮಾತುಗಳನ್ನ ಆಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ನಮ್ಮ ಮೇಲೆ ಯಾರು ದಾಳಿ ಮಾಡುವರೋ ನಾವೂ ಅವರ ವಿರುದ್ಧ ದಾಳಿ ಮಾಡುವುದು ಗ್ಯಾರಂಟಿ ಎಂದಿದ್ದಾರೆ ಇಸ್ರೇಲ್ ಪ್ರಧಾನಿ.












Click it and Unblock the Notifications