Israel: 32 ಸಾವು, 54 ಜನರಿಗೆ ಸಾವು & ಬದುಕಿನ ಹೋರಾಟ... ಏನಾಗುತ್ತಿದೆ ಪ್ಯಾಲೆಸ್ತೀನ್ ನೆಲದಲ್ಲಿ?

ಇಸ್ರೇಲ್ & ಪ್ಯಾಲೆಸ್ತೀನ್ ನಡುವೆ ನಡೆಯುತ್ತಿರುವ ಘೋರ ಕಾಳಗಕ್ಕೆ ಬ್ರೇಕ್ ಬೀಳುತ್ತಿಲ್ಲ. ಈ ನಡುವೆ ಯುದ್ಧದ ತಿಕ್ಕಾಟ ಇನ್ನಷ್ಟು ಹೆಚ್ಚಾಗುತ್ತಾ ಸಾಗುತ್ತಿದೆ. ಜನರು ಕೂಡ ಈ ಯುದ್ಧ ನೋಡಿ ಸುಸ್ತಾಗಿ ಹೋಗಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಭೀಕರವಾಗಿ ಇಬ್ಬರ ಮಧ್ಯೆ ಬಡಿದಾಟ ನಡೆಯುವ ಭಯ ಕಾಡುತ್ತಿದೆ. ಇಂತಹ ಪರಿಸ್ಥಿತಿ ಇರುವಾಗಲೇ, ದಿಢೀರ್ ಇಸ್ರೇಲ್ ಸೇನೆ ನಡೆಸಿದ ದಾಳಿಯಲ್ಲಿ 32 ಜನರು ಜೀವ ಬಿಟ್ಟಿದ್ದರೆ, 54 ಜನರಿಗೆ ಸಾವು & ಬದುಕಿನ ಹೋರಾಟ ಶುರುವಾಗಿದೆ.

ಹೌದು, ಗಾಜಾ ಪಟ್ಟಿ ನಗರದ ಪ್ರಮುಖ ಭಾಗಗಳ ಮೇಲೆ ಇಸ್ರೇಲ್ ನಿರಂತರ ದಾಳಿ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಅದರಲ್ಲೂ ಇನ್ನೇನು ಈ ಯುದ್ಧಕ್ಕೆ ಬ್ರೇಕ್ ಬಿದ್ದಿದೆ ಅಂತ ಎಲ್ಲರೂ ಅಂದುಕೊಳ್ಳುವ ಸಮಯದಲ್ಲೇ ಮತ್ತೊಮ್ಮೆ ದಿಢೀರ್ ಬೆಂಕಿ ಭುಗಿಲೆದ್ದಿದೆ. ಹಾಗೇ ಈ ಬಡಿದಾಟದ ಬೆಂಕಿ ಇನ್ನಷ್ಟು ಭಯ ಹುಟ್ಟಿಸಿದೆ. ಗಾಜಾ ಪಟ್ಟಿ ಪ್ರದೇಶ ಸೇರಿದಂತೆ ಈಗ ಇಸ್ರೇಲ್ ಹಲವು ಕಡೆ ನಿರಂತರ ದಾಳಿ ನಡೆಸಿದೆ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ, ಗಾಜಾ ಪಟ್ಟಿ ಪ್ರದೇಶದಲ್ಲಿ ಎಲ್ಲವನ್ನೂ ಕಳೆದುಕೊಂಡು ಪರದಾಡುತ್ತಿರುವ ಜನರಿಗೆ ಮತ್ತೆ, ಮತ್ತೆ ಆತಂಕ ಕಾಡುತ್ತಿದೆ.

Allegedly 32 Palestinians Are Killed After Israel Attack

ಒಂದೇ ದಿನ 32 ಜನರ ಸಾವು?

ಇಸ್ರೇಲ್ ಸೇನೆ ಪ್ಯಾಲೆಸ್ತೀನ್ ಭಾಗದ ವಿವಿಧೆಡೆ ತನ್ನ ದಾಳಿಯನ್ನು ಮತ್ತಷ್ಟು ಹೆಚ್ಚಿಸಿದ್ದು, ಈ ಮೂಲಕ ಮತ್ತೊಮ್ಮೆ ಗಾಜಾ ಸೇರಿದಂತೆ ಪ್ಯಾಲೆಸ್ತೀನ್ ಜನರಿಗೆ ಆಘಾತ ನೀಡಿದೆ. ಹೀಗೆ ಇಸ್ರೇಲ್ ಸೇನೆಯ ದಾಳಿಯಲ್ಲಿ ಜನರು ಜೀವ ಬಿಡುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಈ ಬೆಳವಣಿಗೆ ಬಗ್ಗೆ ಚರ್ಚೆ ಜೋರಾಗುತ್ತಿದೆ. ಅದರಲ್ಲೂ, ಒಂದೇ ದಿನ ಇಸ್ರೇಲ್ ದಾಳಿಯಿಂದ 32 ಜನ ಮೃತಪಟ್ಟಿದ್ದರೆ, 54 ಜನರಿಗೆ ಗಂಭೀರ ಗಾಯವಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಮತ್ತೊಂದು ಕಡೆ ಗಾಜಾದಲ್ಲಿ ನೆಲೆ ಕಳೆದುಕೊಂಡ ನಿರಾಶ್ರಿತರು ಆಶ್ರಯ ಪಡೆದಿದ್ದ ವಸತಿ ಶಾಲೆ ಮೇಲೆ ಕೂಡ ಇಸ್ರೇಲ್ ಸೇನೆಯಿಂದ ವೈಮಾನಿಕ ದಾಳಿ ನಡೆದಿರುವ ಆರೋಪ ಕೇಳಿ ಬಂದಿದೆ. ಹೀಗೆ ಇಸ್ರೇಲ್ ಸೇನೆ ಗಾಜಾ ಪಟ್ಟಿ ಭಾಗದಲ್ಲಿ ತನ್ನ ಶಕ್ತಿ ಮೀರಿ ಕಾರ್ಯಾಚರಣೆ ನಡೆಸುತ್ತಿದ್ದು, ಈ ತಿಕ್ಕಾಟ ಮತ್ತಷ್ಟು ಹೆಚ್ಚಾಗುವ ಭಯ ಇದೀಗ ಆವರಿಸಿದೆ. ವಿಶ್ವಸಂಸ್ಥೆ ಸೇರಿ ಹಲವಾರು ದೇಶಗಳು ಇದೀಗ ಇಸ್ರೇಲ್ & ಗಾಜಾ ಯುದ್ಧ ನಿಲ್ಲಿಸಲು ಸಾಕಷ್ಟು ಪ್ರಯತ್ನ ಮಾಡುತ್ತಿವೆ. ಆದರೆ ಈ ಪ್ರಯತ್ನಗಳು ಈವರೆಗೂ ಫಲ ನೀಡುತ್ತಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+