ಅತ್ತ ಪುಟಿನ್ ಮನೆ ಮೇಲೆ ದಾಳಿ, ಇತ್ತ 16 ಜನರ ಸಾವು!

ಖೆರ್ಸನ್, ಉಕ್ರೇನ್: ರಷ್ಯಾ ಅಧ್ಯಕ್ಷ ಪುಟಿನ್ ಅಧಿಕೃತ ಸರ್ಕಾರಿ ನಿವಾಸ ಕ್ರೆಮ್ಲಿನ್ ಮನೆಯ ಮೇಲೆ ಡ್ರೋನ್ ಬಾಂಬ್ ದಾಳಿ ನಡೆಸಿದ ಬಳಿಕ ರಷ್ಯಾ-ಉಕ್ರೇನ್ ನಡುವೆ ಘರ್ಷಣೆ ಜೋರಾಗಿದೆ. ಪುಟಿನ್ ಮನೆ ಮೇಲೆ ದಾಳಿ ನಡೆಸಿದ ಕೆಲವೇ ಗಂಟೆಗಳ ಅಂತರದಲ್ಲಿ ಉಕ್ರೇನ್ ವಿರುದ್ಧ ರಷ್ಯಾ ತೀವ್ರ ಸ್ವರೂಪದ ಶೆಲ್ ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಮೂಲಕ ಉಕ್ರೇನ್ ನಾಶಕ್ಕೆ ರಷ್ಯಾ ಪಣತೊಟ್ಟಂತೆ ಕಾಣುತ್ತಿದೆ.

ಹೌದು, ಬುಧವಾರ ಬೆಳಗಿನ ಜಾವ ರಷ್ಯಾ ಅಧ್ಯಕ್ಷ ಪುಟಿನ್ ಸರ್ಕಾರಿ ನಿವಾಸ ಕ್ರೆಮ್ಲಿನ್ ಮನೆಯ ಮೇಲೆ ದಿಢೀರ್ 2 ಡ್ರೋನ್‌ಗಳು ನುಗ್ಗಿ ಬಂದಿದ್ದವು. ಅಲ್ಲದೆ ಕ್ರೆಮ್ಲಿನ್ ನಿವಾಸದ ಮೇಲೆ ಬಾಂಬ್ ದಾಳಿ ನಡೆಸಿದ್ದವು. ತಕ್ಷಣ ಎಚ್ಚೆತ್ತಿದ್ದ ರಷ್ಯಾ ಸೇನೆ ಎರಡೂ ಡ್ರೋನ್‌ಗಳನ್ನ ಹೊಡೆದುರುಳಿಸಿತ್ತು. ಈ ಘಟನೆ ನಡೆದು ಕೆಲವೇ ಗಂಟೆಗಳು ಉರುಳುವುದರ ಒಳಗಾಗಿ, ಉಕ್ರೇನ್‌ನಲ್ಲಿ ಭೀಕರ ದಾಳಿ ನಡೆದಿದೆ. ರಷ್ಯಾ ಸೇನೆಯಿಂದ ನಡೆದಿದೆ ಎನ್ನಲಾದ ದಾಳಿಯಲ್ಲಿ ಒಟ್ಟು 16 ನಾಗರಿಕರು ಮೃತಪಟ್ಟು, 22ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

Allegedly 16 civilians killed in heavy shelling in Ukraine’s Kherson region

ಪುಟಿನ್ ಮನೆ ಮೇಲಿನ ದಾಳಿಗೆ ಪ್ರತಿಕಾರ?

ಈಗ ಉಕ್ರೇನ್ ಮೇಲೆ ರಷ್ಯಾ ಸೇನೆ ನಡೆಸಿದೆ ಎಂದು ಆರೋಪಿಸಲಾಗಿರುವ ದಾಳಿ, ರಷ್ಯಾ ಅಧ್ಯಕ್ಷ ಪುಟಿನ್ ಅವರ ಮನೆ ಮೇಲೆ ನಡೆದಿರುವ ದಾಳಿಗೆ ಪ್ರತಿಕಾರವೇ? ಎಂಬ ಪ್ರಶ್ನೆ ಕೂಡ ಉದ್ಭವಿಸಿದೆ. ಮತ್ತೊಂದು ಕಡೆ ರಷ್ಯಾ ಇನ್ನಷ್ಟು ಭೀಕರ ದಾಳಿ ನಡೆಸುವ ಭಯ ಕಾಡುತ್ತಿದೆ. ಉಕ್ರೇನ್ ಮತ್ತು ರಷ್ಯಾ ನಡುವೆ ಯುದ್ಧ ಶುರುವಾಗಿ 1 ವರ್ಷ ಕಳೆದಿದ್ದು, ಈಗಲೂ ಪರಿಸ್ಥಿತಿ ಸುಧಾರಿಸುತ್ತಿಲ್ಲ. ಇದರ ನಡುವೆ ರಷ್ಯಾ ಅಧ್ಯಕ್ಷರ ಮನೆಯ ಮೇಲೆಯೇ ದಾಳಿ ನಡೆದಿದೆ. ಇದಾದ ಕೆಲವೇ ಗಂಟೆಗಳಲ್ಲಿ ಉಕ್ರೇನ್ ಕೂಡ ನಡುಗಿದೆ.

ಪುಟಿನ್ ಶತ್ರುಗಳಿಗೆ ಮಾರಿಹಬ್ಬ ಗ್ಯಾರಂಟಿ?

ಮೊದಲೇ ಕೊತ ಕೊತ ಕುದಿಯುತ್ತಿದ್ದ ರಷ್ಯಾ, ಉಕ್ರೇನ್ ವಿರುದ್ಧ ಯಾವುದಾದರು ಬಲವಾದ ಕಾರಣ ಸಿಗಲಿ ಎಂದು ಕಾಯುತ್ತಿತ್ತು. ಪರಿಸ್ಥಿತಿ ಹಿಡಿತಕ್ಕೆ ಸಿಕ್ಕರೆ ಉಕ್ರೇನ್ ವಿರುದ್ಧ ಭೀಕರ ದಾಳಿ ನಡೆಸುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡು ಸನ್ನದ್ಧವಾಗಿತ್ತು ರಷ್ಯಾ ಸೇನೆ. ಈಗ ಸ್ವತಃ ಉಕ್ರೇನ್ ಮಹಾ ಅಪರಾಧ ಮಾಡಿದಂತೆ ತೋರುತ್ತಿದೆ. ಇದೇ ಕಾರಣವನ್ನು ನೆಪವಾಗಿ ಇರಿಸಿಕೊಂಡು ರಷ್ಯಾ ಮತ್ತೊಮ್ಮೆ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಆರೋಪ ಮಾಡಲಾಗುತ್ತಿದೆ. ಆದರೆ 16 ಅಮಾಯಕ ಉಕ್ರೇನ್ ನಾಯಕರು ಮೃತಪಟ್ಟಿರುವುದು ದುರಂತ.

Allegedly 16 civilians killed in heavy shelling in Ukraine’s Kherson region

ಉಕ್ರೇನ್ ಸರ್ಕಾರದಿಂದ ಅಧಿಕೃತ ಹೇಳಿಕೆ

ರಷ್ಯಾ ಅಧ್ಯಕ್ಷ ಪುಟಿನ್ ಮನೆ ಮೇಲೆ ದಾಳಿ ನಡೆಯುತ್ತಿದ್ಧಂತೆ ಉಕ್ರೇನ್ ವಿರುದ್ಧ ರಷ್ಯಾ ಸೇನೆ ಭೀಕರ ದಾಳಿ ಮಾಡುವ ಸಾಧ್ಯತೆ ಇದೆ. ಹೀಗಾಗಿ ತಕ್ಷಣ ಉಕ್ರೇನ್ ಸರ್ಕಾರ ಅಧಿಕೃತ ಹೇಳಿಕೆ ನೀಡಿದೆ. ದಾಳಿಯಲ್ಲಿ ನಮ್ಮ ಪಾತ್ರವಿಲ್ಲ ಅಂತಾ ಸ್ವತಃ ಉಕ್ರೇನ್ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಾಹಿತಿ ನೀಡಿದ್ದಾರೆ. ಅಲ್ಲದೆ ಇಂತಹ ದಾಳಿಯಿಂದ ಸಮಸ್ಯೆಗೆ ನಾವು ಪರಿಹಾರ ಹುಡುಕಲು ಆಗುವುದಿಲ್ಲ. ಇದು ನಮಗೆ ತಿಳಿದಿರುವ ಕಾರಣ ರಷ್ಯಾ ಅಧ್ಯಕ್ಷರ ಮನೆ ಮೇಲೆ ದಾಳಿ ಮಾಡುವ ಕೃತ್ಯಕ್ಕೆ ಕೈಹಾಕಲ್ಲ. ಇದು ನಮ್ಮ ಕೆಲಸವಲ್ಲ ಎಂದಿದೆ ಉಕ್ರೇನ್.

ನ್ಯಾಟೋ ಪಡೆಗಳಿಗೂ ತಲುಪಿದ ಸಂದೇಶ?

ರಷ್ಯಾ ಅಧ್ಯಕ್ಷರ ಮನೆ ಮೇಲೆ ಬಾಂಬ್ ಬಿದ್ದ ತಕ್ಷಣ ಅಮೆರಿಕ ಅಲರ್ಟ್ ಆಗಿದೆ. ಇತ್ತ ನ್ಯಾಟೋ ಪಡೆಗೂ ಉಕ್ರೇನ್ ಸಂದೇಶ ರವಾನಿಸಿದಂತೆ ಕಾಣುತ್ತಿದೆ. ಪುಟಿನ್ ಮನೆ ಮೇಲೆ ಬಾಂಬ್ ಬಿದ್ದಿರುವ ಕಾರಣಕ್ಕೆ ರಷ್ಯಾ ತನ್ನ ಪರಮಾಣು ಅಸ್ತ್ರ ಬಳಸುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಉಕ್ರೇನ್ ಬೆಚ್ಚಿಬಿದ್ದಿದ್ದು, ಆಪ್ತ ಮಿತ್ರ ನ್ಯಾಟೋ ಒಕ್ಕೂಟ ಮತ್ತು ಅಮೆರಿಕದ ಸಹಾಯ ಬೇಡಬೇಕು ಅಷ್ಟೇ. ಹೀಗಾಗಿ ರಷ್ಯಾ ಗಡಿಯಲ್ಲಿ ಸೂಕ್ಷ್ಮ ಪರಿಸ್ಥಿತಿ ನಿರ್ಮಾಣ ಆಗಿದ್ದು, ಯಾವ ಏನು ಬೇಕಾದರೂ ಆಗಬಹುದು.

ಇಷ್ಟೆಲ್ಲಾ ಬೆಳವಣಿಗೆ ನಡುವೆ ರಷ್ಯಾ ಅಧ್ಯಕ್ಷರನ್ನ ಬಂಕರ್‌ಗೆ ಶಿಫ್ಟ್ ಮಾಡಿರುವುದು ಜಗತ್ತಿನ ನಿದ್ದೆಗೆಡಿಸಿದೆ. ಅದರಲ್ಲೂ ಉಕ್ರೇನ್ ಮೇಲೆ ರಷ್ಯಾ ಸೇನೆ ಯಾವಾಗ ಬೇಕಾದರೂ ಪ್ರಬಲವಾದ ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ ಉಕ್ರೇನ್ ಕೂಡ ತನ್ನ ಸೇನೆಯನ್ನ ಸನ್ನದ್ಧಗೊಳಿಸಿದೆ. ಪುಟಿನ್ ತಮ್ಮ ಬಂಕರ್ ಮೂಲಕವೇ ಈಗ ಕೆಲಸ ಮಾಡುತ್ತಿದ್ದು, ಶತ್ರು ರಾಷ್ಟ್ರದ ವಿರುದ್ಧ ಯಾವ ಆದೇಶ ಕೊಡುತ್ತಾರೆ ಕಾದು ನೋಡಬೇಕು. ಅಕಸ್ಮಾತ್ ಪರಮಾಣು ದಾಳಿ ನಡೆದರೆ ಅದೇ 3ನೇ ಮಹಾಯುದ್ಧಕ್ಕೆ ರಣಕಹಳೆ ಎಂದು ತಿಳಿಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+