ಧೂಳ್.. ಧೂಳ್.. ರಷ್ಯಾ ಕೈಗೆ ಸಿಕ್ಕ 158 ಉಕ್ರೇನ್ ನಿರ್ಮಿತ ಡ್ರೋನ್‌ಗಳು ಪುಡಿ ಪುಡಿ!
ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ, ಬದಲಾಗಿ ಹಿಂಗೆ ಬಡಿದಾಡಿಕೊಂಡು ಮತ್ತಷ್ಟು ಲಕ್ಷ ಜನರ ಜೀವ ತೆಗೆಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಯಾಕಂದ್ರೆ ಒಂದು ದಿನ ರಷ್ಯಾ ದಾಳಿ ನಡೆಸಿದರೆ, ಮತ್ತೊಂದು ದಿನ ಉಕ್ರೇನ್ ಇದಕ್ಕೆ ರಿವೇಂಜ್ ತೆಗೆದುಕೊಳ್ಳುತ್ತದೆ. ಅದೇ ರೀತಿ ಇದೀಗ ರಷ್ಯಾ ವಿರುದ್ಧ ಉಕ್ರೇನ್ ಸೇನೆಯು ರೊಚ್ಚಿಗೆದ್ದು, ಸುಮಾರು 158 ಡ್ರೋನ್ ಹಾರಿಸಿತ್ತು ಎಂದು ಆರೋಪ ಮಾಡಲಾಗಿದೆ. ಆದರೆ ಈ ಎಲ್ಲಾ ಡ್ರೋನ್‌ಗಳನ್ನ ಬಲಶಾಲಿ ರಷ್ಯಾ ಮಿಲಿಟರಿ ಏನು ಮಾಡಿದೆ ಗೊತ್ತಾ?
ರಷ್ಯಾ & ಉಕ್ರೇನ್ ಇಬ್ಬರೂ ಜಿದ್ದಿಗೆ ಬಿದ್ದು ಒಬ್ಬರ ಮೇಲೆ ಮತ್ತೊಬ್ಬರು ದಾಳಿ ಮಾಡುತ್ತಾ ಬಂದಿದ್ದಾರೆ. ಆದರೆ ಇವರಿಬ್ಬರ ಜಗಳದ ಪರಿಣಾಮ ಈಗ ಯುರೋಪ್ ದೇಶಗಳು ನಲುಗಿ, ಆತಂಕದಲ್ಲಿ ಜೀವನ ದೂಡುವ ಮಾಡುವ ಸ್ಥಿತಿ ಬಂದಿದೆ. ಯಾಕಂದ್ರೆ ಹಿಂದೆ ಮಹಾಯುದ್ಧವು ನಡೆದ ಸಮಯದಲ್ಲಿ, ಯುರೋಪ್ ಪರಿಸ್ಥಿತಿ ಹೀಗೆ ಇತ್ತು. ಮೊದಲಿಗೆ ಕೋಳಿ ಜಗಳದಂತೆ ಶುರುವಾಗಿದ್ದ ಯುದ್ಧಗಳು, ನಂತರ ಭೀಕರ ಕದನಕ್ಕೆ ದಾರಿ ಮಾಡಿಕೊಟ್ಟಿದ್ದವು. ಈಗಲೂ ಅಷ್ಟೇ, ಅದೇ ರೀತಿಯಾಗಿ ರಷ್ಯಾ & ಉಕ್ರೇನ್ ನಡುವೆ ವಾರ್ ಆರಂಭವಾಗಿದೆ. ಹೀಗಿದ್ದಾಗ ಉಕ್ರೇನ್ ಸೇನೆ ರಷ್ಯಾ ವಿರುದ್ಧ ರಿವೇಂಜ್‌ಗೆ ಮುಂದಾಗಿದ್ದು, ಪ್ರತಿ ಹಂತದಲ್ಲೂ ಸೋಲನ್ನು ಅನುಭವಿಸುತ್ತಿದೆ.

ಸುಮ್ಮನೆ ಇರದೆ ಕಿರಿಕ್ ಮಾಡ್ತಿದ್ದಾರಾ?
ಉಕ್ರೇನ್ ಸುಮ್ಮನೆ ಇರದೆ ರಷ್ಯಾ ವಿರುದ್ಧ ಪದೇ ಪದೇ ಕೌಂಟರ್ ಅಟ್ಯಾಕ್ ಮಾಡುತ್ತಿದ್ದು, ಉಕ್ರೇನ್ ಅಧ್ಯಕ್ಷರು ಈ ವಿಚಾರದಲ್ಲಿ ಎಡವಟ್ಟು ಮಾಡಿಕೊಳ್ಳುತ್ತಿದ್ದಾರೆ ಎಂಬ ಆರೋಪವು ಕೇಳಿಬರುತ್ತಿದೆ. ಪರಿಸ್ಥಿತಿ ಹೀಗಿದ್ದಾಗಲೇ ಉಕ್ರೇನ್ ಸೇನೆ ಹಾರಿಸಿದ ಸುಮಾರು 158 ಡ್ರೋನ್ ಹೊಡೆದು ಬಿಸಾಕಿದ್ದೀವಿ ಅಂತಾ ರಷ್ಯಾ ಮಿಲಿಟರಿ ಮಾಹಿತಿ ನೀಡಿದೆ. ಹೀಗಾಗಿ ತಿಕ್ಕಾಟವೂ ಜೋರಾಗುತ್ತಿದ್ದು, ರಷ್ಯಾ ಬಳಿ ಇರುವ ಅತ್ಯಾಧುನಿಕ ತಂತ್ರಜ್ಞಾನದ ಸಹಾಯದಿಂದ ಹೀಗೆ ಉಕ್ರೇನ್ ವಿರುದ್ಧ ರಕ್ಷಣೆ ಪಡೆಯುವುದು ದೊಡ್ಡ ಮಾತೇನು ಅಲ್ಲ, ಎಂಬ ಅಭಿಪ್ರಾಯವು ಕೇಳಿಬರುತ್ತಿದೆ.
ಮತ್ತೊಂದು ಕಡೆ ಎರಡೂ ದೇಶಗಳಲ್ಲಿ ಅಂದ್ರೆ, ಉಕ್ರೇನ್ & ರಷ್ಯಾ ಕಡೆ ಎರಡೂ ಕಡೆಯೂ ಲಕ್ಷ ಲಕ್ಷ ಸೈನಿಕರು & ಸಾಮಾನ್ಯ ಜನರು ಜೀವ ಬಿಟ್ಟಿದ್ದಾರೆ ಎಂಬ ಭಾರಿ ಗಂಭೀರ ಆರೋಪ ಕೂಡ ಈ ಯುದ್ಧದ ಬಗ್ಗೆ ಇದೆ. ಹೀಗಿದ್ದರೂ ಯುದ್ಧ ನಿಲ್ಲಿಸಲು ಇಬ್ಬರೂ ರೆಡಿ ಇಲ್ಲ ಎಂಬುದು ಜನರ ಆರೋಪ. ಈ ಆರೋಪ & ಕಿರಿಕ್ ನಡುವೆ ಇದೀಗ ಜಗತ್ತು ಮತ್ತೊಂದು ವರ್ಲ್ಡ್ ವಾರ್ ಅಂದ್ರೆ 3ನೇ ಮಹಾಯುದ್ಧದ ಭಯದಲ್ಲಿ ನರಳುವ ಪರಿಸ್ಥಿತಿ ಬಂದಿದೆ.












Click it and Unblock the Notifications